ಹರಿದ್ವಾರದ ಬೆಟ್ಟದಲ್ಲಿ ರೀಲ್ಸ್ ಮಾಡುವಾಗ 70 ಮೀಟರ್ ಆಳದ ಕಂದಕಕ್ಕೆ ಬಿದ್ದ ಮಹಿಳೆ

Updated on: Oct 26, 2024 | 7:37 PM

ಹರಿದ್ವಾರದ ಮಾನಸಾ ದೇವಿ ಹಿಲ್ಸ್‌ನಲ್ಲಿ ಇಂದು ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತಿದ್ದು, ಕಾಲು ಜಾರಿ 70 ಮೀಟರ್ ಆಳದ ಕಂದಕಕ್ಕೆ ಬಿದ್ದ ದಾರುಣ ಘಟನೆ ನಡೆದಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹರಿದ್ವಾರ: ಹರಿದ್ವಾರದ ಮಾನಸಾ ದೇವಿ ಹಿಲ್ಸ್​ನಲ್ಲಿ ರೀಲ್ಸ್ ಮಾಡುವಾಗ ಆಳವಾದ ಕಂದಕಕ್ಕೆ ಬಿದ್ದು ಗಂಭೀಋವಾಗಿ ಗಾಯಗೊಂಡಿದ್ದಾಳೆ. ಈ ಅಪಘಾತವು ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವ ಮತ್ತು ರೀಲ್ಸ್ ಮಾಡುವ ಅಪಾಯಗಳ ಬಗ್ಗೆ ಎಚ್ಚರಿಕೆ ಮೂಡಿಸುತ್ತಿದೆ. ಗಾಯಗೊಂಡ ಯುವತಿಯನ್ನು ಮುಜಾಫರ್‌ನಗರ ನಿವಾಸಿ 28 ವರ್ಷದ ರೇಶು ಎಂದು ಗುರುತಿಸಲಾಗಿದ್ದು, ಪೂಜ್ಯ ಮಾನಸಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಲು ತನ್ನ ಕುಟುಂಬದೊಂದಿಗೆ ಹರಿದ್ವಾರಕ್ಕೆ ಬಂದಿದ್ದಳು. ಆಗ ಮೊಬೈಲ್​ನಲ್ಲಿ ರೀಲ್ಸ್​ ರೆಕಾರ್ಡ್ ಮಾಡುವಾಗ ಆಳವಾದ ಕಂದಕಕ್ಕೆ ಬಿದ್ದಿದ್ದಾಳೆ. ತಕ್ಷಣ ಅಲ್ಲಿದ್ದ ಪ್ರವಾಸಿಗರು ಆಕೆಯನ್ನು ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More