ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?

Updated on: Apr 09, 2025 | 9:01 PM

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯೊಂದಿಗೆ ರಸ್ತೆಯಲ್ಲಿ ಭಿನ್ನಾಭಿಪ್ರಾಯಗಳು ಮತ್ತು ಜಗಳಗಳು ಸಾಮಾನ್ಯ ದೃಶ್ಯವಾಗಿದೆ. ಮಾತಿನ ಜಗಳಗಳು ಆಗಾಗ ನಡೆಯುತ್ತಿದ್ದರೂ, ಅವು ಕೆಲವೊಮ್ಮೆ ಹಿಂಸಾತ್ಮಕವಾಗುತ್ತವೆ. ಇತ್ತೀಚಿನ ಒಂದು ಘಟನೆಯಲ್ಲಿ, ಒಬ್ಬ ಮಹಿಳೆ ತನ್ನ ಪತಿ ಹೆಚ್ಚು ಹಣ ಸಂಪಾದಿಸುತ್ತಿಲ್ಲ ಎಂದು ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ.

ನವದೆಹಲಿ, ಏಪ್ರಿಲ್ 9: ತನ್ನ ಗಂಡ ಹಣ ಸಂಪಾದನೆ ಮಾಡುತ್ತಿಲ್ಲವೆಂಬ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಗಂಡನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ವಿಡಿಯೋ ಈಗ ವೈರಲ್ ಆಗಿದೆ. ಹತ್ತಿರದಲ್ಲಿ ಜನಸಮೂಹ ನಿಂತಿತ್ತು. ಆದರೆ, ಅವರು ಯಾರೂ ಮಧ್ಯಪ್ರವೇಶಿಸಲಿಲ್ಲ ಅಥವಾ ಮಹಿಳೆ ಆ ಪುರುಷನನ್ನು ಹೊಡೆಯುವುದನ್ನು ತಡೆಯಲು ಯಾವುದೇ ಪ್ರಯತ್ನ ಮಾಡಲಿಲ್ಲ. ಹಣ ಸಂಪಾದನೆ ಮಾಡಿಲ್ಲವೆಂದು ಆ ಹೆಂಗಸು ಗಂಡನಿಗೆ ಸಾರ್ವಜನಿಕವಾಗಿ ಥಳಿಸುತ್ತಿರುವುದಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ