ಜಮೀನು ಪ್ರವೇಶಿಸುವ ಮಹಿಳೆಗೆ ಸಿಸಿಟಿವಿ ನಾಶ ಮಾಡುವ ಇರಾದೆ ಯಾಕಿತ್ತು ಅಂತ ಪೊಲೀಸ ತನಿಖೆಯಿಂದ ಗೊತ್ತಾಗಬೇಕು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 25, 2021 | 10:19 PM

ಆಕೆ ಜಮೀನಿಗೆ ಎಂಟ್ರಿ ಕೊಟ್ಟ ಉದ್ದೇಶವೇನು ಅಂತ ಗೊತ್ತಾಗಿಲ್ಲ. ಆಕೆ ಕಳ್ಳಿಯಾಗಿರಲಾರಳು. ಯಾಕೆಂದರೆ ಆಕೆಯೊಂದಿಗೆ ಮತ್ಯಾರೋ ನಡೆದು ಬರುತ್ತಿರುವುದು ಫುಟೇಜ್ ಆರಂಭದಲ್ಲಿ ಕಾಣುತ್ತದೆ. ಅಲ್ಲದೆ ಜಮೀನಿನಲ್ಲಿ ಕಳುವು ಮಾಡುವಂಥದ್ದು ಏನಿರುತ್ತದೆ ಅಂತ ಪ್ರಶ್ನೆ ಉದ್ಭವಿಸುವುತ್ತದೆ.

ಬಂಡಿಹೊಳೆ ಅನ್ನೋದು ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ. ಊರಿನವರಾದ ಕೆ ರಾಮೇಗೌಡ ಅವರು ತಮ್ಮ ಜಮೀನಿನಲ್ಲಿ ಸಿಸಿಟಿವಿ ಅಳವಡಿಸಿದ್ದಾರೆ. ಗ್ರಾಮೀಣ ಪ್ರದೇಶದ ಜಮೀನಿನಲ್ಲಿ ಕೆಮೆರಾ ಅಳವಡಿಸುವಂಥ ಹರ್ಕತ್ತು ಅವರಿಗೆ ಯಾಕಿತ್ತು ಅನ್ನೋದನ್ನ ಅವರೇ ಹೇಳಬೇಕು. ಅಲ್ಲಿ ಅವರು ಫಾರ್ಮ್ ಹೌಸ್ ಮಾಡಿಕೊಂಡಿರುವ ಸಾಧ್ಯತೆಯೂ ಇದೆ. ಆಥವಾ ಸದರಿ ಪ್ರದೇಶದಲ್ಲಿ ಕಳ್ಳಕಾಕರ ಕಾಟ ಜಾಸ್ತಿ ಇರಬಹುದು, ಅದೇನೇ ಇರಲಿ ಮಾರಾಯ್ರೇ, ಅವರು ಅದನ್ನು ಹಾಕಿಸಿದ್ದು ಉಪಯೋಗಕ್ಕೆ ಬಂದಿದೆ.

ಹೇಗೆ ಅಂತೀರಾ? ಈ ವಿಡಿಯೋ ನೋಡಿ. ರಾಮೇಗೌಡರ ಜಮೀನಿನಲ್ಲಿ ಒಬ್ಬ ಮಹಿಳೆ ನಡೆದು ಬರುತ್ತಿದ್ದಾಳೆ. ಆಕೆ ಜಮೀನಿಗೆ ಎಂಟ್ರಿ ಕೊಟ್ಟ ಉದ್ದೇಶವೇನು ಅಂತ ಗೊತ್ತಾಗಿಲ್ಲ. ಆಕೆ ಕಳ್ಳಿಯಾಗಿರಲಾರಳು. ಯಾಕೆಂದರೆ ಆಕೆಯೊಂದಿಗೆ ಮತ್ಯಾರೋ ನಡೆದು ಬರುತ್ತಿರುವುದು ಫುಟೇಜ್ ಆರಂಭದಲ್ಲಿ ಕಾಣುತ್ತದೆ. ಅಲ್ಲದೆ ಜಮೀನಿನಲ್ಲಿ ಕಳುವು ಮಾಡುವಂಥದ್ದು ಏನಿರುತ್ತದೆ ಅಂತ ಪ್ರಶ್ನೆ ಉದ್ಭವಿಸುವುತ್ತದೆ. ಗೌಡರು ಫಾರ್ಮ್ ಹೌಸ್ ಮಾಡಿಕೊಂಡಿರಬಹುದಾದರೂ ಅಕೆ ಅಲ್ಲಿಗೆ ಅಪರಿಚತಳಂತೆ ನಡೆದು ಬರುತ್ತಿಲ್ಲ. ಆಕೆಯ ನಡಿಗೆಯಲ್ಲಿ ಅಳುಕಿಲ್ಲ, ದೃಢತೆ ಇದೆ ಮತ್ತು ಆತ್ಮವಿಶ್ವಾಸವಿದೆ. ಸೋ, ಆಕೆ ಕಳ್ಳಿ ಅನ್ನೋ ವಾದ ರೂಲ್ಡ್ ಔಟ್. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಆಕೆಯ ಹೆಸರು ರಶ್ಮಿ.

ಸಿಸಿಟಿವಿ ಅಲ್ಲಿ ಅಳವಡಿಸಿರುವ ವಿಷಯ ಪ್ರಾಯಶಃ ಆಕೆಗೆ ಗೊತ್ತಿರಲಿಲ್ಲ, ಅಥವಾ ಅದನ್ನು ನಾಶ ಮಾಡಲೆಂದೇ ಅಲ್ಲಿಗೆ ಬಂದಳೋ? ಆದರೆ ಆಕೆಗೆ ತಿಳಿಯದ ವಿಷಯವೆಂದರೆ ತಾನು ಕೆಮೆರಾದಲ್ಲಿ ಸೆರೆಸಿಕ್ಕ ನಂತರ ಅದನ್ನು ನಾಶಪಡಿಸಿದ್ದಾಳೆ. ಆಕೆ ಕೆಮೆರಾ ಒಡೆಯಲಾರಂಭಿಸಿದ್ದು ಸಹ ಕೆಮೆರಾನಲ್ಲಿ ಸೆರೆಯಾಗಿದೆ. ಆದೇ ಆಧಾರದಲ್ಲಿ ಕೆ ಆರ್ ಪೇಟೆ ಗ್ರಾಮಾಂತರ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ:  Video: ಬೀದಿನಾಯಿ ಒಂದಕ್ಕೆ ಬೊಗಸೆಯಲ್ಲಿ ನೀರು ಕುಡಿಸಿದ ವ್ಯಕ್ತಿ; ಆಪ್ತ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ