ಬೆಂಗಳೂರು ಬಳಿಕ ದಾವಣಗೆರೆಯಲ್ಲಿ ಅಗ್ನಿ ಅನಾಹುತ, ಹೊತ್ತಿ ಉರಿದ ಕೇಬಲ್ ಟವರು, ಅದೃಷ್ಟವಶಾತ್ ಪ್ರಾಣಹಾನಿ ಆಗಿಲ್ಲ

ಬೆಂಗಳೂರು ಬಳಿಕ ದಾವಣಗೆರೆಯಲ್ಲಿ ಅಗ್ನಿ ಅನಾಹುತ, ಹೊತ್ತಿ ಉರಿದ ಕೇಬಲ್ ಟವರು, ಅದೃಷ್ಟವಶಾತ್ ಪ್ರಾಣಹಾನಿ ಆಗಿಲ್ಲ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 25, 2021 | 8:13 PM

ಟವರ್​ಗೆ ಅಳವಡಿಸಲಾಗಿದ್ದ ಜನರೇಟರ್ ಬ್ಯಾಟರಿ ಮತ್ತು ಅಪಾರ ಪ್ರಮಾಣದ ಕೇಬಲ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರಾಜ್ಯದಲ್ಲಿ ಬೆಂಕಿ ಅವಗಢಗಳು ಹೆಚ್ಚುತ್ತಿವೆ. ಜನರ ದಿವ್ಯ ನಿರ್ಲಕ್ಷ್ಯದಿಂದಾಗಿ ಹೀಗಾಗುತ್ತಿದೆ ಅಂತ ಹೇಳಲಾಗುತ್ತಿದೆಯಾದರೂ ಬೆಂಕಿ ಆಕಸ್ಮಿಕಗಳು ಮತ್ತು ಅವುಗಳಿಂದಾಗುವ ಪ್ರಾಣಹಾನಿ, ನಷ್ಟ ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡುತ್ತವೆ. ಅಮಾಯಕರೇ ಈ ದುರ್ಘಟನೆಗಳಲ್ಲಿ ಬಲಿಯಾಗುತ್ತಿರುವುದು ವಿಷಾದನೀಯ. ಮೊನ್ನೆ ಬೆಂಗಳೂರಿನ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ದುರ್ಘಟನೆಯನ್ನೇ ತೆಗೆದುಕೊಳ್ಳಿ, ಅದರಲ್ಲಿ ಬಲಿಯಾದವರು, ಗೋದಾಮಿನ ಹೊರಗಡೆ ಪಂಕ್ಚರ್ ಶಾಪ್ ಇಟ್ಟುಕೊಂಡಿದ್ದ ಒಬ್ಬ ವ್ಯಕ್ತಿ ಮತ್ತು ಅಲ್ಲಿಗೆ ಬಂದಿದ್ದ ಗೂಡ್ಸ್ ಕ್ಯಾರಿಯರ್ ಒಂದರ ಚಾಲಕ. ನಗರದ ಒಂದು ಅಪಾರ್ಟ್ಮೆಂಟ್ ನಲ್ಲಿ ನಡೆದು ಮತ್ತೊಂದು ಅವಘಡದಲ್ಲಿ ಒಬ್ಬ ವೃದ್ಧೆ ಮತ್ತು ಅವರ ಮಗಳು ಅಕ್ಷರಶಃ ಸುಟ್ಟು ಬೂದಿಯಾದರು.

ಶನಿವಾರ ಬೆಳಗ್ಗೆ ಜವಳಿ ನಗರ ದಾವಣೆಗೆರೆಯ ಮುಖ್ಯ ಪ್ರದೇಶವೊಂದರಲ್ಲಿ ಮೊಬೈಲ್ ಟವರ್ ಹೊತ್ತಿ ಉರಿದಿದೆ. ಟವರ್​ಗೆ ಅಳವಡಿಸಲಾಗಿದ್ದ ಜನರೇಟರ್ ಬ್ಯಾಟರಿ ಮತ್ತು ಅಪಾರ ಪ್ರಮಾಣದ ಕೇಬಲ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸಕಾಲಕ್ಕೆ ಆಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಹೇಳಿದ್ದಾರೆ. ದುರ್ಘಟನೆ ನಡೆದ ಸ್ಥಳ ಒಂದು ಕಮರ್ಷಿಯಲ್ ಪ್ರದೇಶವಾಗಿದ್ದು ಸುತ್ತಮುತ್ತ ಹೊಟೆಲ್ ಮತ್ತು ಅಂಗಡಿಗಳಿವೆ. ಫೈರ್ ಬ್ರಿಗೇಡ್ ಸಿಬ್ಬಂದಿ ಕೂಡಲೇ ಬರದೇ ಹೋಗಿದ್ದರೆ ಬೆಂಕಿ ಪಕ್ಕದ ಅಂಗಡಿಗಳಿಗೆ ಹಬ್ಬಿ ನಷ್ಟದ ಪ್ರಮಾಣ ಹೆಚ್ಚಾಗಿರುತಿತ್ತು.

ಇದನ್ನೂ ಓದಿ:  ಕಳ್ಳತನಕ್ಕೆ ಅಡ್ಡಿಯಾಗುತ್ತೆಂದು ಸಿಸಿ ಕ್ಯಾಮರಾ ಒಡೆದು ಹಾಕಿದ ಮಹಿಳೆ; ವಿಡಿಯೋ ನೋಡಿ