ಸರ್ವಿಸಿಂಗ್ ಮತ್ತು ನಿರ್ವಹಣಾ ವೆಚ್ಚ ನಿಮ್ಮ ಯೋಚನೆಯಾಗಿದ್ದರೆ ಜರ್ಮನ್ ಮೂಲ ಅದರೆ ಅಪ್ಪಟ ಮೇಕ್ ಇನ್ ಇಂಡಿಯ ಆಗಿರುವ ಈ ಕಾರನ್ನು ಗಮನಿಸಿ
ವೋಕ್ಸ್ವಾಗನ್ ಟೈಗನ್ ಜಾಹೀರಾತಿನಲ್ಲಿ ಕಂಪನಿಯು ಸರ್ವಿಸಿಂಗ್ ಮತ್ತು ನಿರ್ವಹಣಾ ವೆಚ್ಚಗಳ ಅಂಶವನ್ನೇ ಹೈಲೈಟ್ ಮಾಡುತ್ತಿದೆ. ವೋಕ್ಸ್ವಾಗನ್ ಟೈಗನ್ ಕಾರಿನ ನಿರ್ವಹಣಾ ವೆಚ್ಚ ಯೋಚನೆಯ ವಿಷಯವೇ ಅಲ್ಲ ಅನ್ನೋದು ಕಂಪನಿಯ ಪಂಚ್ಲೈನ್ ಆದಂತಿದೆ.
ಕಾರು ತಯಾರಿಸುವ ಕಂಪನಿಗಳ ಮಾಲೀಕರು ಅಥವಾ ಅವರ ಮಾರ್ಕೆಟಿಂಗ್ ಟೀಮ್ ಸಾಮಾನ್ಯವಾಗಿ ತಮ್ಮ ವಾಹನಗಳ ಫೀಚರ್ಸ್, ಮೈಲೇಜ್ ಮೊದಲಾದವುಳ ಬಗ್ಗೆ ಮಾತಾಡುತ್ತಾರೆ, ಕಾರುಗಳ ಸರ್ವಿಸಿಂಗ್ ಕುರಿತು ಹೆಚ್ಚು ಮಾತಾಡುವುದಿಲ್ಲ. ಸರ್ವಿಸಿಂಗ್ ಕುರಿತ ಒಂದು ಸ್ಟ್ಯಾಂಡರ್ಡ್ ವ್ಯಾಖ್ಯಾನವನ್ನು ಎಲ್ಲ ಕಾರು ಉತ್ಪಾದಕಾ ಕಂಪನಿಗಳು ಹೇಳುತ್ತವೆ. ಆದರೆ ಈ ವಿಷಯದಲ್ಲಿ ಜರ್ಮನಿಯ ವೋಕ್ಸ್ವಾಗನ್ ಸ್ವಲ್ಪ ಡಿಫರೆಂಟ್ ಅನಿಸುತ್ತಿದೆ. ಯಾಕೆ ಅಂತೀರಾ? ಕಂಪನಿಯು ಸರ್ವಿಸಿಂಗ್ ಆಯಾಮವನ್ನೇ ತನ್ನ ಯುಎಸ್ಪಿ ಮಾಡಿಕೊಂಡಿರುವಂತಿದೆ.
ವೋಕ್ಸ್ವಾಗನ್ ಟೈಗನ್ ಜಾಹೀರಾತಿನಲ್ಲಿ ಕಂಪನಿಯು ಸರ್ವಿಸಿಂಗ್ ಮತ್ತು ನಿರ್ವಹಣಾ ವೆಚ್ಚಗಳ ಅಂಶವನ್ನೇ ಹೈಲೈಟ್ ಮಾಡುತ್ತಿದೆ. ವೋಕ್ಸ್ವಾಗನ್ ಟೈಗನ್ ಕಾರಿನ ನಿರ್ವಹಣಾ ವೆಚ್ಚ ಯೋಚನೆಯ ವಿಷಯವೇ ಅಲ್ಲ ಅನ್ನೋದು ಕಂಪನಿಯ ಪಂಚ್ಲೈನ್ ಆದಂತಿದೆ.
ಕಂಪನಿಯೇ ಹೇಳುವ ಹಾಗೆ ನೀವು ವೋಕ್ಸ್ವಾಗನ ಟೈಗನ್ ಕಾರು ಖರೀದಿಸಿದ ನಂತರ ನಾಲ್ಕು ವರ್ಷಗಳವರೆಗೆ ಅಥವಾ ಮೊದಲ 60,000 ಕಿಮೀಗಳವರೆಗೆ ಅದರ ನಿರ್ವಹಣಾ ವೆಚ್ಚ ಪ್ರತಿ ಕಿಮೀಗೆ 37 ಪೈಸೆ (ರೂ. 0.37) ಆಗಿರಲಿದೆ. ಸಂಪುರ್ಣವಾಗಿ ಮೇಕ್ ಇನ್ ಇಂಡಿಯ ಆಗಿರುವ ಈ ಎಸ್ಯುವಿಗೆ ವರ್ಷಕ್ಕೊಮ್ಮೆ ಮಾತ್ರ ಅಥವಾ 15,000 ಕಿಮೀ ಅಂತರ ಕ್ರಮಿಸಿದ ನಂತರ ಸರ್ವಿಸಿಂಗ್ ಅವಶ್ಯಕತೆ ಎದುರಾಗುತ್ತದೆ.
ವೋಕ್ಸ್ವಾಗನ ಟೈಗನ್ ಕಾರು ಖರೀದಿಸಲಿಚ್ಛಿಸುವವರಿಗೆ ಕಂಪನಿಯು ಅತ್ಯಾಕರ್ಷಕ ಅಫರ್ಗಳನ್ನು ನೀಡುತ್ತಿದ್ದು ಇದರಲ್ಲಿ 4 ವರ್ಷಗಳ ವಿಸ್ತೃತ ವಾರಂಟಿ, ಸರ್ವಿಸಿಂಗ್, ಮಾಲೀಕತ್ವದ ವೆಚ್ಚ ಸೇರಿವೆ.
ರಸ್ತೆಬದಿ ಸಹಾಯಕ ಸರ್ವಿಸ್, ಮೂರು ಉಚಿತ ಸರ್ವಿಸ್ಗಳು, ಕಾರಿನ ಎಕ್ಸ್ಟೀರಿಯರ್ ಮೇಲೆ 7 ವರ್ಷಗಳ ವಾರಂಟಿ ಮೊದಲಾದ ಆಫರ್ಗಳನ್ನು ಸಹ ಕಂಪನಿ ನೀಡುತ್ತಿದೆ. ವೋಕ್ಸ್ವಾಗೆನ್ ಟೈಗನ್ ಎಸ್ಯುವಿ ಸರ್ವಿಸಿಂಗ್ ಪ್ಯಾಕೇಜ್ 21,999 ರೂ. ಗಳಿಂದ ಆರಂಭವಾಗುತ್ತದೆ.
ಇದು ಗ್ರಾಹಕರಿಗೆ ಖುಷಿ ನೀಡುವ ಅಂಶವಾಗಿರಬಹುದು ಅದರೆ ನಮಗದು ಸೇವೆ ಎಂದು ಕಂಪನಿಯ ಪಂಚ್ ಲೈನ್ ಹೇಳುತ್ತದೆ.
ಇದನ್ನೂ ಓದಿ: ಪುರುಷ ಸ್ಪರ್ಧಿಗೆ ಸೋಲುಣಿಸಿದ ಆರ್ಶಿ ಖಾನ್; ಬಿಗ್ ಬಾಸ್ ಬೆಡಗಿಯ ರೆಸ್ಲಿಂಗ್ ವಿಡಿಯೋ ವೈರಲ್