ಪುರುಷ ಸ್ಪರ್ಧಿಗೆ ಸೋಲುಣಿಸಿದ ಆರ್ಶಿ ಖಾನ್; ಬಿಗ್ ಬಾಸ್ ಬೆಡಗಿಯ ರೆಸ್ಲಿಂಗ್ ವಿಡಿಯೋ ವೈರಲ್
ಈ ವಿಡಿಯೋ ನೋಡಿದ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಒಂದು ವರ್ಗದ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
WWE ಹಣಾಹಣಿಯನ್ನು ನೋಡಿ ಬಹುತೇಕರು ಎಂಜಾಯ್ ಮಾಡುತ್ತಾರೆ. ಅದಕ್ಕೆ ದೊಡ್ಡ ಪ್ರೇಕ್ಷಕವರ್ಗ ಇದೆ. ಇದರಲ್ಲಿ ಭಾರತದ ಸ್ಪರ್ಧಿಗಳ ಸಂಖ್ಯೆ ಕಡಿಮೆ. ಒಂದು ಕಾಲದಲ್ಲಿ ಪಂಬಾಬ್ನ ದಿ ಗ್ರೇಟ್ ಖಲಿ ಅವರು WWE ಅಖಾಡಲ್ಲಿ ಮಿಂಚುತ್ತಿದ್ದರು. ಈಗ ಅವರು ಈ ವಿದ್ಯೆಯನ್ನು ಇತರರಿಗೂ ಹೇಳಿಕೊಡುತ್ತಿದ್ದಾರೆ. ಪಂಜಾಬ್ನಲ್ಲಿ ಅವರು ಇದರ ಅಕಾಡೆಮಿ ನಡೆಸುತ್ತಿದ್ದು, ಅಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಆರ್ಶಿ ಖಾನ್ ಕೂಡ ಕಲಿಯುತ್ತಿದ್ದಾರೆ. ಪುರುಷರ ರೀತಿಯೇ ಅವರು ಫೈಟ್ ಮಾಡುತ್ತಿರುವ ಒಂದು ವಿಡಿಯೋ ಈಗ ವೈರಲ್ ಆಗಿದೆ. ಅದನ್ನು ಕಂಡು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಹಿಂದಿ ಬಿಗ್ ಬಾಸ್ 11 ಮತ್ತು 14ನೇ ಸೀಸನ್ನಲ್ಲಿ ಆರ್ಶಿ ಖಾನ್ ಭಾಗವಹಿಸಿದ್ದರು. ಆದರೆ ಯಾವ ಸೀಸನ್ನಲ್ಲೂ ಅವರು ಗೆದ್ದಿರಲಿಲ್ಲ. ತಮ್ಮ ಬೋಲ್ಡ್ ನಡವಳಿಕೆಯಿಂದಾಗಿ ಅವರು ಆಗಾಗ ಸುದ್ದಿ ಆಗುತ್ತಾರೆ. ಬಾಕ್ಸ್ ಕ್ರಿಕೆಟ್ ಲೀಗ್ ಮೂಲಕವೂ ಅವರು ಫೇಮಸ್ ಆಗಿದ್ದಾರೆ. ಈಗ ಅವರಿಗೆ ರೆಸ್ಲಿಂಗ್ ಗೀಳು ಹಿಡಿದಿದೆ. ಕಳೆದ ಕೆಲವು ದಿನಗಳಿಂದ ಅವರು ಭರ್ಜರಿಯಾಗಿ ಅಭ್ಯಾಸ ಮಾಡುತ್ತಿದ್ದಾರೆ. ಅದರ ಅಪ್ಡೇಟ್ಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಆರ್ಶಿ ಖಾನ್ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ಪುರುಷ ಸ್ಪರ್ಧಿಯನ್ನು ಮಣಿಸುತ್ತಿರುವ ದೃಶ್ಯ ಇದೆ. ಇದು ನಿಜವಾಗಿಯೂ ನಡೆದ ಸ್ಪರ್ಧೆಯೋ ಅಥವಾ ಯಾವುದೋ ಪಾತ್ರಕ್ಕಾಗಿ ಮಾಡುತ್ತಿರುವ ತಯಾರಿಯೋ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ. ‘ಇಂದು ನಿನ್ನನ್ನು ಬಿಡುವುದಿಲ್ಲ’ ಎಂಬ ಕ್ಯಾಪ್ಷನ್ ಜೊತೆ ಈ ವಿಡಿಯೋವನ್ನು ಆರ್ಶಿ ಖಾನ್ ಶೇರ್ ಮಾಡಿದ್ದಾರೆ. ಸದ್ಯ ಇದು ವೈರಲ್ ಆಗುತ್ತಿದೆ.
View this post on Instagram
View this post on Instagram
ಈ ವಿಡಿಯೋ ನೋಡಿದ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಒಂದು ವರ್ಗದ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ‘ಇದೇನು ತಮಾಷೆ ನಡೆಯುತ್ತಿದೆ’ ಎಂದು ಅನೇಕರು ಕಾಲೆಳೆದಿದ್ದಾರೆ. ‘ಆರ್ಶಿಯವರೇ ನಮಗೂ ಕುಸ್ತಿ ಮಾಡುವ ಅವಕಾಶ ಕೊಡಿ’ ಎಂದು ಕೆಲವು ಪಡ್ಡೆಗಳು ಕೆಣಕಿದ್ದಾರೆ. ನೆಗೆಟಿವ್ ಕಮೆಂಟ್ಗಳಿಗೆ ತಲೆ ಕೆಡಿಸಿಕೊಳ್ಳದ ಆರ್ಶಿ ಖಾನ್ ಅವರು ತಮ್ಮ ಕಾರ್ಯ ಮುಂದುವರಿಸಿದ್ದಾರೆ.
ಇದನ್ನೂ ಓದಿ:
ಶಮಿತಾ ಶೆಟ್ಟಿ ಬಿಗ್ ಬಾಸ್ ಆಟ ಇನ್ನೂ ನಿಂತಿಲ್ಲ; ದೊಡ್ಮನೆಯಲ್ಲಿ ಮತ್ತೆ ಸೌಂಡು ಮಾಡಲಿರುವ ಶಿಲ್ಪಾ ತಂಗಿ
ಬಿಗ್ ಬಾಸ್ ಬಳಿಕ ಸಾಯುವ ಯೋಚನೆ ಮಾಡಿದ ಸ್ಪರ್ಧಿ; ಪರಪುರುಷನ ಜತೆ ಲವ್ವಿ-ಡವ್ವಿಯೇ ಇದಕ್ಕೆ ಕಾರಣ