ಬಿಗ್​ ಬಾಸ್​ ಬಳಿಕ ಸಾಯುವ ಯೋಚನೆ ಮಾಡಿದ ಸ್ಪರ್ಧಿ; ಪರಪುರುಷನ ಜತೆ ಲವ್ವಿ-ಡವ್ವಿಯೇ ಇದಕ್ಕೆ ಕಾರಣ

ನೇಹಾ ಭಾಸಿನ್​ ಅವರನ್ನು ಜನರು ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಿರುವುದಕ್ಕೆ ಅವರ ಬಿಗ್​ ಬಾಸ್​ ಗೆಳೆಯ ಪ್ರತೀಕ್​ ಸೆಹಜ್ಪಾಲ್​ ನೊಂದುಕೊಂಡಿದ್ದಾರೆ. ಈ ಬಗ್ಗೆ ಅವರು ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಬಿಗ್​ ಬಾಸ್​ ಬಳಿಕ ಸಾಯುವ ಯೋಚನೆ ಮಾಡಿದ ಸ್ಪರ್ಧಿ; ಪರಪುರುಷನ ಜತೆ ಲವ್ವಿ-ಡವ್ವಿಯೇ ಇದಕ್ಕೆ ಕಾರಣ
ನೇಹಾ ಭಾಸಿನ್, ಪ್ರತೀಕ್ ಸೆಹಜ್ಪಾಲ್, ಸಮೀರ್​

ಹಿಂದಿ ಬಿಗ್​ ಬಾಸ್​ ಓಟಿಟಿ ಕಾರ್ಯಕ್ರಮಕ್ಕೆ ಇತ್ತೀಚೆಗಷ್ಟೇ ತೆರೆಬಿದ್ದಿದೆ. ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ ‘ಬಿಗ್​ ಬಾಸ್​ ಓಟಿಟಿ’ ಮುಗಿದರೂ ಕೂಡ ಸ್ಪರ್ಧಿಗಳ ಬಗ್ಗೆ ಹೊರಬರುತ್ತಿರುವ ಗರಮಾಗರಂ ಸುದ್ದಿಗಳು ಇನ್ನೂ ನಿಂತಿಲ್ಲ. ಈ ಶೋನಲ್ಲಿ ಬೋಲ್ಡ್​ ಸ್ಪರ್ಧಿ ಎನಿಸಿಕೊಂಡಿದ್ದ ಗಾಯಕಿ ನೇಹಾ ಭಾಸಿನ್​ ಅವರು ಈಗ ಸಾಯುವ ಆಲೋಚನೆ ಮಾಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಇದ್ದಾಗ ಪರಪುರುಷನ ಜೊತೆ ನಡೆಸಿದ ಲವ್ವಿ-ಡವ್ವಿಯೇ ಇಷ್ಟಕ್ಕೆಲ್ಲ ಕಾರಣ ಆಗಿದೆ. ಅವರ ಇಡೀ ಕುಟುಂಬವೇ ಈಗ ಟ್ರೋಲ್​ಗೆ ಒಳಗಾಗುತ್ತಿದೆ.

ಕರಣ್​ ಜೋಹರ್ ನಡೆಸಿಕೊಟ್ಟ ‘ಬಿಗ್​ ಬಾಸ್​ ಓಟಿಟಿ’ ಕಾರ್ಯಕ್ರಮದಲ್ಲಿ ನೇಹಾ ಭಾಸಿನ್​ ಹಲವು ಬಗೆಯ ರಂಗಿನಾಟ ಆಡಿದರು. ಟಾಸ್ಕ್​ ನಡೆಯುವಾಗ ಮಹಿಳಾ ಸ್ಪರ್ಧಿಯ ತುಟಿಗೆ ಕಿಸ್​ ಮಾಡಿ ಅವರು ಗಮನ ಸೆಳೆದಿದ್ದರು. ಬಳಿಕ ಪ್ರತೀಕ್​ ಸೆಹಜ್ಪಾಲ್​ ಜೊತೆ ಸೇರಿಕೊಂಡು ತುಂಬ ಬೋಲ್ಡ್​ ಆಗಿ ನಡೆದುಕೊಂಡರು. ಇದು ಬಹುತೇಕ ವೀಕ್ಷಕರಿಗೆ ಹಿಡಿಸಿಲ್ಲ. ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸಮೀರ್​ ಉದ್ದೀನ್​ ಜೊತೆ ಮದುವೆ ಆಗಿರುವ ನೇಹಾ ಭಾಸಿನ್​ ಅವರು ಇನ್ನೊಬ್ಬ ಪುರುಷನ ಜೊತೆ ಮಿತಿ ಮೀರಿ ವರ್ತಿಸಿದ್ದು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದೆ. ಶೋ ಮುಗಿದ ಬಳಿಕ ನೇಹಾ ಮತ್ತು ಪ್ರತೀಕ್​ ಅವರನ್ನು ಜನರು ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಿದ್ದಾರೆ.

ಈ ಬಗ್ಗೆ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ನೇಹಾ ಅಳಲು ತೋಡಿಕೊಂಡಿದ್ದಾರೆ. ‘ಬೆಳಗ್ಗೆ ಎದ್ದ ಕೂಡಲೇ ನನ್ನ ಗಂಡ, ತಾಯಿ, ಸಹೋದರಿ ಮತ್ತು ಇಡೀ ಕುಟುಂಬದ ಬಗ್ಗೆ ನೆಗೆಟಿವ್​ ಕಮೆಂಟ್​ಗಳನ್ನು ಓದಿದ ಬಳಿಕ ಸಾಯಬೇಕು ಎನಿಸಿತು’ ಎಂದು ಅವರು ಬರಹ ಆರಂಭಿಸಿದ್ದಾರೆ. ಅಷ್ಟರಮಟ್ಟಿಗೆ ಅವರಿಗೆ ಟ್ರೋಲ್​ಗಳಿಂದ ಕಿರಿಕಿರಿ ಆಗುತ್ತಿದೆ. ‘ಆದರೆ ಪತಿಯ ತಾಳ್ಮೆ, ಬೆಂಬಲ, ಕುಟುಂಬದವರ ಪ್ರೀತಿಯಿಂದಾಗಿ ಅಂಥ ಆಲೋಚನೆಯಿಂದ ನಾನು ಹೊರಬಂದೆ’ ಎಂದು ಅವರು ಬರೆದುಕೊಂಡಿದ್ದಾರೆ.

ನೇಹಾ ಭಾಸಿನ್​ ಅವರನ್ನು ಟ್ರೋಲ್​ ಮಾಡುತ್ತಿರುವುದಕ್ಕೆ ಅವರ ಬಿಗ್​ ಬಾಸ್​ ಗೆಳೆಯ ಪ್ರತೀಕ್​ ಸೆಹಜ್ಪಾಲ್​ ನೊಂದುಕೊಂಡಿದ್ದಾರೆ. ಈ ಬಗ್ಗೆ ಅವರು ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ನಿಮ್ಮೆಲ್ಲರಲ್ಲೂ ನಾನೊಂದು ಮನವಿ ಮಾಡಿಕೊಳ್ಳುತ್ತೇನೆ. ನೇಹಾ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಬೇಡಿ. ಅವರನ್ನು ದೂಷಿಸಬೇಡಿ. ಯಾಕೆಂದರೆ ಎಲ್ಲದರಲ್ಲೂ ನನ್ನ ಪಾಲು ಕೂಡ ಇದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆಕೆ ನನಗೆ ಪ್ರಮಾಣಿಕ ಸ್ನೇಹಿತೆ ಆಗಿದ್ದರು’ ಎಂದು ಪ್ರತೀಕ್​ ಸೆಹಜ್ಪಾಲ್ ಹೇಳಿದ್ದಾರೆ. ​

ಇದನ್ನೂ ಓದಿ:

ನೈತಿಕತೆ ಬಿಟ್ಟು ಮಹಿಳಾ ಸ್ಪರ್ಧಿಗೆ ಲಿಪ್​ ಕಿಸ್​ ಮಾಡಿದ ಗಾಯಕಿ; ಎತ್ತ ಸಾಗುತ್ತಿದೆ ಬಿಗ್​ ಬಾಸ್​?

ಸೆನ್ಸಾರ್​ ಇಲ್ಲದೆ ನಾಚಿಕೆ ಆಗುವಂತಹ ಟಾಸ್ಕ್​ ನೀಡಿದ ಸನ್ನಿ ಲಿಯೋನ್​; ಬಿಗ್​ ಬಾಸ್​ ಸ್ಪರ್ಧಿಗಳಿಗೆ ಶಾಕ್​

Read Full Article

Click on your DTH Provider to Add TV9 Kannada