ಮಕ್ಕಳ ಮದುವೆ ಸಾಲ ತೀರಿಸಲು ಹಿರಿಯ ಅಳಿಯನ ಮನೆಯಲ್ಲೇ ಕಳ್ಳತನ ಮಾಡಿದ ಅತ್ತೆ

Edited By:

Updated on: May 02, 2026 | 12:25 PM

ಪುತ್ರಿಯರ ಮದುವೆ ಸಾಲ ತೀರಿಸಲು ಹಿರಿಯ ಅಳಿಯನ ಮನೆಗೆ ಅತ್ತೆಯೇ ಕನ್ನ ಹಾಕಿರುವ ಘಟನೆ ಬೆಳಗಾವಿಯ ಪಿರಣವಾಡಿಯಲ್ಲಿ ನಡೆದಿದೆ. ಅಳಿಯನ ಮನೆಯಲ್ಲಿದ್ದ 16 ಲಕ್ಷದ 110ಗ್ರಾಂ ಚಿನ್ನವನ್ನು ಸಂಬಂಧಿ ಜೊತೆ ಸೇರಿ ಮಹಿಳೆ ಕದ್ದಿದ್ದು, ಟಿಳಕವಾಡಿ ಪೊಲೀಸರ ವಿಚಾರಣೆ ವೇಳೆ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಪ್ರಕರಣ ಸಂಬಂಧ ಆರೋಪಿಗಳ ಬಂಧನವಾಗಿದೆ.

ಬೆಳಗಾವಿ, ಮೇ 02: ಪುತ್ರಿಯರ ಮದುವೆ ಸಾಲ ತೀರಿಸಲು ಹಿರಿಯ ಅಳಿಯನ ಮನೆಗೆ ಅತ್ತೆ ಕನ್ನಹಾಕಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಳಿಯ ಮತ್ತು ಮಗಳು ಮನೆಯಲ್ಲಿ ಇಲ್ಲದಾಗ ಸಂಬಂಧಿ ಶಿವ ಎಂಬವನ ಜೊತೆ ಸೇರಿಕೊಂಡು ಬೆಳಗಾವಿಯ ಪಿರಣವಾಡಿ ನಿವಾಸಿ ಉಜ್ವಲಾ ಕಮ್ಮಾರ ಎಂಬಾಕೆ ಕಳ್ಳತನ ನಡೆಸಿದ್ದು, ಆರೋಪಿಗಳ ಬಂಧನವಾಗಿದೆ. 16 ಲಕ್ಷ ಮೌಲ್ಯದ 110ಗ್ರಾಂ ಚಿನ್ನದ ಆಭರಣವನ್ನು ಆರೋಪಿಗಳು ಎಗರಿಸಿದ್ದರು. ಚಿನ್ನಾಭರಣ ಕಳ್ಳತನ ಆಗಿರುವ ಬಗ್ಗೆ ಅತ್ತೆಯನ್ನು ಅಳಿಯ ವಿಚಾರಿಸಿದ್ದ . ಆದರೆ ತನಗೆ ಏನೂ ಗೊತ್ತಿಲ್ಲ ಎಂದು ಅಳಿಯನ ಬಳಿ ಅತ್ತೆ ಡ್ರಾಮಾ ಮಾಡಿದ್ದಳು. ಬಳಿಕ ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಗೆ ಅಳಿಯ ದೂರು ನೀಡಿದ್ದು, ಪೊಲೀಸರು ತೀವ್ರ ವಿಚಾರಣೆ ಮಾಡಿದಾಗ ಕಳ್ಳತನ ಮಾಡಿದ್ದಾಗಿ ಅತ್ತೆಯೇ ತಪ್ಪೊಪ್ಪಿಕೊಂಡಿದ್ದಾಳೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Published on: May 02, 2026 12:22 PM
Loading...
Unable to load recommendations.
Follow Us
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More