Mandya News: ತಳ್ಳಾಟ ನೂಕಾಟದ ನಡುವೆ ಕೊಸರಿಕೊಂಡು ಸಿದ್ದರಾಮಯ್ಯರನ್ನು ತಲುಪಿದ ಮಹಿಳೆ ಕೊರಳಿಗೆ ಹಾರ ಹಾಕೇಬಿಟ್ಟರು!
ಮುಖ್ಯಮಂತ್ರಿ ಸಿದ್ದರಾಮಯ್ಯ ಹೆದ್ದಾರಿ ವೀಕ್ಷಣೆಗೆ ಬಂದಿದ್ದರೆ, ಜನ ಅವರನ್ನು ವೀಕ್ಷಿಸಲು ಬಂದಿದ್ದರು.
ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾರ ತುರಾಯಿಗಳಿಂದ ತಮ್ಮನ್ನು ಸನ್ಮಾನಿಸುವುದು ಬೇಡ ಅಂತ ಹೇಳಿದರೂ ಜನ ತಮ್ಮ ಹಟ ಬಿಡೋದಿಲ್ಲ. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ (Bengaluru-Mysuru Expressway) ಪರಶೀಲನೆಗೆ ಆಗಮಿಸಿದ ಸಿದ್ದರಾಮಯ್ಯನವರಿಗೆ ಹೆದ್ದಾರಿಯಲ್ಲೂ ಹಾರ ಹಾಕಿ ಸನ್ಮಾನಿಸಲು ಆರಂಭಿಸಿದರು. ಮುಖ್ಯಮಂತ್ರಿ ಹೆದ್ದಾರಿ (highway) ವೀಕ್ಷಣೆಗೆ ಬಂದಿದ್ದರೆ, ಜನ ಅವರನ್ನು ವೀಕ್ಷಿಸಲು ಬಂದಿದ್ದರು ಮಾರಾಯ್ರೇ! ಇಲ್ಲೊಬ್ಬ ಮಹಿಳೆ ಹಾರ ಹಾಕಲು ಪಡುವ ಶ್ರಮ ಗಮನಿಸಿ. ಸಿದ್ದರಾಮಯ್ಯ ಹತ್ತಿರ ಹೋಗಲು ಪುರುಷರೇ ಪ್ರಯಾಸಪಡುತ್ತಿದ್ದರೆ, ಹಳದಿ ಸೀರೆ ಉಟ್ಟಿರುವ ಮಹಿಳೆ ಕೈಯಲ್ಲಿ ಹಾರ ಹಿಡಿದುಕೊಂಡು ಜನರ ತಳ್ಳಾಟದ ನಡುವೆ ಕೊಸರಾಡುತ್ತಾ ಗಣ್ಯರ ಸಮೀಪಕ್ಕೆ ಹೋಗೇಬಿಡುತ್ತಾರೆ. ಸಿದ್ದರಾಮಯ್ಯ ಕೊರಳಿಗೆ ಹಾರ ಹಾಕಿದ ಬಳಿಕ ಮಹಿಳೆ (ಪ್ರಾಯಶಃ ಪಕ್ಷದ ಕಾರ್ಯಕರ್ತೆ ಇರಬಹುದು) ಮುಖದಲ್ಲಿ ಧನ್ಯತೆಯ ಭಾವ, ಅಬ್ಬಾ ಸಾಧಿಸಿಬಿಟ್ಟೆ ಎಂಬ ಸಂತಸ!
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ