ಬಿಎಂಟಿಸಿ ಬಸ್ ಹರಿದು ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ ವಯಸ್ಕ ಮಹಿಳೆ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ

Updated on: Jul 22, 2025 | 2:07 PM

ಕಳೆದ ಶುಕ್ರವಾರವಷ್ಟೇ ಬಿಎಂಟಿಸಿ ಬಸ್ಸೊಂದು ನಗರದ ಪೀಣ್ಯ ಎರಡನೇ ಹಂತದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಕ್ಯಾಂಟೀನೊಂದಕ್ಕೆ ನುಗ್ಗಿದ್ದರಿಂದ ತಿಂಡಿ ಕಟ್ಟಸಿಕೊಳ್ಳಲು ಬಂದಿದ್ದ 25 ವರ್ಷದ ಸೌಮ್ಯ ಹೆಸರಿನ ಯುವತಿ ಬಸ್ ಅಡಿಗೆ ಸಿಕ್ಕು ಸಾವನ್ನಪ್ಪಿದ್ದರು. ಅದಾದ ಕೇವಲ 4 ದಿನದ ನಂತರ ಕನಕಪುರ ರಸ್ತೆಯಲ್ಲಿ ಬಿಎಂಟಿಸಿ ಬಸ್ಸು ಇನ್ನೊಬ್ಬ ಮಹಿಳೆಯನ್ನು ಕೊಂದಿದೆ.

ಬೆಂಗಳೂರು, ಜುಲೈ 22: ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಸಂಸ್ಥೆಯ ಬಸ್​ಗಳು (BMTC buses) ಅಪಘಾತಗಳನ್ನು ನಡೆಸುವುದು ಹೊಸತೇನಲ್ಲ ಮತ್ತು ಅದು ನಿಲ್ಲುವ ಲಕ್ಷಣಗಳೂ ಇಲ್ಲ. ಕನಕಪುರ ಮಾರ್ಗದಲ್ಲಿ ಸಂಚರಿಸುವ ಬಸ್ಸೊಂದು ಇಂದು ಬೆಳಗ್ಗೆ ದ್ವಿಚಕ್ರ ವಾಹನವೊಂದಕ್ಕೆ ಗುದ್ದಿ ಅದರ ಮೇಲೆ ಹರಿದುಹೋದ ಕಾರಣ ಪಿಲಿಯನ್ ರೈಡರ್ ಆಗಿದ್ದ ಮಹಿಳೆ ಮೃತಪಟ್ಟಿದ್ದಾರೆ ಮತ್ತು ವಾಹನ ಓಡಿಸುತ್ತಿದ್ದ ಅವರ ಅಳಿಯ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಾರೆ ಎಂದು ಅಪಘಾತ ನಡೆದ ಸ್ಥಳದಿದ ವರದಿ ಮಾಡುತ್ತಿರುವ ನಮ್ಮ ಬೆಂಗಳೂರು ವರದಿಗಾರ ಹೇಳುತ್ತಾರೆ.

ಇದನ್ನೂ ಓದಿ: ಬೆಂಗಳೂರು: ಬಿಎಂಟಸಿ ಬಸ್​ ಡಿಕ್ಕಿಯಾಗಿ ಓರ್ವ ಸಾವು, ಇಬ್ಬರು ಮಕ್ಕಳಿಗೆ ಗಾಯ  

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ