AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls: ವಿಜಯಪುರದಲ್ಲಿ ಪ್ರಿಯಾಂಕಾ ಗಾಂಧಿಗೆ ಲಂಬಾಣಿ ದುಪ್ಪಟ್ಟಾ ತೊಡಿಸಿ ಸನ್ಮಾನ!

Karnataka Assembly Polls: ವಿಜಯಪುರದಲ್ಲಿ ಪ್ರಿಯಾಂಕಾ ಗಾಂಧಿಗೆ ಲಂಬಾಣಿ ದುಪ್ಪಟ್ಟಾ ತೊಡಿಸಿ ಸನ್ಮಾನ!

ಅರುಣ್​ ಕುಮಾರ್​ ಬೆಳ್ಳಿ
|

Updated on:May 03, 2023 | 7:12 PM

ವೇಲು ತಮ್ಮ ತಲೆಯ ಮೇಲೆ ಹಾಕಿದಾಗ ಪ್ರಿಯಾಂಕಾ ಮುಗಳ್ನಕ್ಕು ಸಂತೋಷ ವ್ಯಕ್ತಪಡಿಸಿದರು.

ವಿಜಯಪುರ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಕರ್ನಾಟಕದಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಇಂದು ಅವರು ವಿಜಯಪುರ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ನಡೆಸಿದರು. ವಿಜಯಪುರ ನಗರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರಿಗೆ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Sri Siddeshwara Swamiji) ಅವರ ಭಾಚಿತ್ರವನ್ನು ನೀಡಲಾಯಿತು. ನಂತರ ಕೆಲ ಸ್ಥಳೀಯ ಮಹಿಳಾ ಕಾರ್ಯಕರ್ತೆಯರು ಪ್ರಿಯಾಂಕಾ ಅವರಿಗೆ ಲಂಬಾಣಿ ಸಮುದಾಯದ (Banjara community) ಮಹಿಳೆಯರು ತಮ್ಮ ದಿರಿಸಿನ ಮೇಲೆ ಧರಿಸುವ ವೇಲ್ (ದುಪ್ಪಟ್ಟಾ) ಹೊದಿಸಿ ಸನ್ಮಾನಿಸಿದರು. ವೇಲು ತಮ್ಮ ತಲೆಯ ಮೇಲೆ ಹಾಕಿದಾಗ ಪ್ರಿಯಾಂಕಾ ಮುಗಳ್ನಕ್ಕು ಸಂತೋಷ ವ್ಯಕ್ತಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 03, 2023 07:12 PM