ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರು ಬೆಳಗಾವಿಯಲ್ಲಿ ಬೆಲೆಯೇರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 22, 2021 | 8:12 PM

ಪ್ರತಿಭಟನೆಕಾರರು ಒಂದು ತಳ್ಳುಬಂಡಿಯಲ್ಲಿ ತರಕಾರಿಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಅದನ್ನು ತಳ್ಳಿಕೊಂಡು ಘೋಷಣೆಗಳನ್ನು ಕೂಗುವುದು ಮುಂದುವರಿಸುತ್ತಾ ಸಾಗಿದರು.

ವಿಧಾನ ಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯಲ್ಲಿ ಪ್ರತಿದಿನ ಪ್ರತಿಭಟನೆಗಳು ನಡೆಯುತ್ತಿವೆ. ಕನ್ನಡಪರ ಸಂಘಟನೆಗಳು ಎಮ್ ಈ ಎಸ್ ಪುಂಡಾಟಿಕೆ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿವೆ. ಆದರೆ, ಫಾರ್ ಎ ಚೇಂಜ್ ಬುಧವಾರದಂದು ವಿರೋಧ ಪಕ್ಷ ಕಾಂಗ್ರೆಸ್ ನ ಮಹಿಳಾ ಕಾಯಕರ್ತರು ಬೆಳಗಾವಿಯಲ್ಲಿ ರಸ್ತೆಗಿಳಿದು ಬೆಲೆಯೇರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದ್ದು ಮಹಿಳೆಯರಾದರೂ ಅದರ ನೇತೃತ್ವ ವಹಿಸಿದ್ದು ಮಾತ್ರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಪಕ್ಷದ ಅಧ್ಯಕ್ಷರೇ ತಮ್ಮ ಜೊತೆಗಿದ್ದಿದ್ದರಿಂದ ಮಹಿಳೆಯರ ನೈತಿಕ ಬಲ ನಿಸ್ಸಂದೇಹವಾಗಿ ಹೆಚ್ಚಿತ್ತು.

ಪ್ರತಿಭಟನೆಕಾರರು ಒಂದು ತಳ್ಳುಬಂಡಿಯಲ್ಲಿ ತರಕಾರಿಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಅದನ್ನು ತಳ್ಳಿಕೊಂಡು ಘೋಷಣೆಗಳನ್ನು ಕೂಗುವುದು ಮುಂದುವರಿಸುತ್ತಾ ಸಾಗಿದರು. ದಾರಿಯುದ್ದಕ್ಕೂ ಮಹಿಳೆಯರು ಪ್ಲೆಕಾರ್ಡ್ಗಳನ್ನು ಹಿಡಿದು ನಿಂತಿದ್ದರು.

ಇಂಧನದ ಬೆಲೆ ರೂ. 100ಕ್ಕಿಂತ ಜಾಸ್ತಿಯಾಗಿರುವುದನ್ನು ವಿರೋಧಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ದಿನಸಿ, ಖಾದ್ಯತೈಲ ಮತ್ತು ಇನ್ನಿತರ ಅಗತ್ಯ ವಸ್ತುಗಳ ಬೆಲೆಗಳು ಏರಿರುವುದನ್ನು ಖಂಡಿಸಿ ಸರ್ಕಾರವನ್ನು ದೂಷಿಸಿದರು. ಹಿರಿಯ ಮಹಿಳೆಯರು, ಯುವತಿಯರು ಮತ್ತು ಮಧ್ಯವಯಸ್ಸಿನ ಮಹಿಳೆಯರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಪ್ರತಿಭಟನೆದುದ್ದಕ್ಕೂ ಶಿವಕುಮಾರ್ ಅವರು ತಮ್ಮ ಕಾರ್ಯಕರ್ತರ ಜೊತೆಗಿದ್ದರು.

ಇದನ್ನೂ ಓದಿ:  ಮುಂದುವರಿದ ಎಮ್ಇಎಸ್ ಪುಂಡರ ಪುಂಡಾಟಿಕೆ! ಬಸ್​ಗೆ ಎಮ್ಇಎಸ್ ಧ್ವಜ ಕಟ್ಟಿ, ಮಸಿ ಬಳಿದ ಪುಂಡರು; ವಿಡಿಯೋ ವೈರಲ್