ಮದ್ಯದಂಗಡಿ ಬೇಡವೆಂದು ಹುಬ್ಬಳ್ಳಿ ನವನಗರ ಮಹಿಳೆಯರಿಂದ ಹೊಸ ಅಂಗಡಿ ಮುಂದೆ ಧರಣಿ
ಸ್ಥಳೀಯ ಶಾಸಕ ಅರವಿಂದ್ ಬೆಲ್ಲದ್ ಸ್ಥಳಕ್ಕೆ ಆಗಮಿಸಿ ಧರಣಿಗೆ ಕೂತ ಮಹಿಳೆಯರೊಂದಿಗೆ ಮಾತಾಡಿದರು. ರಾಜ್ಯ ಸರ್ಕಾರ ಮನಬಂದಂತೆ ಲಿಕ್ಕರ್ ಶಾಪ್ ಗಳಿಗೆ ಅನುಮತಿ ನೀಡುತ್ತಿರುವುದನ್ನು ಮದ್ಯ ಮಾರಾಟಗಾರರ ಸಂಘ ತೀವ್ರವಾಗಿ ವಿರೋಧಿಸುತ್ತಿದೆ. ಆದರೆ, ಅಬಕಾರಿ ಇಲಾಖೆ ಅನುಮತಿ ನೀಡಿರುವುದರಿಂದ ಪೊಲೀಸರು ಏನೂ ಮಾಡಲಾಗದು.
ಹುಬ್ಬಳ್ಳಿ: ರಾಜ್ಯದ ಎಲ್ಲ ಮಹಿಳೆಯರಲ್ಲಿ ಇಂಥ ಪ್ರಜ್ಞಾವಂತಿಕೆ ಮೂಡಿದರೆ ನಿಸ್ಸಂದೇಹವಾಗಿ ಮದ್ಯದ ಅಂಗಡಿಗಳ ಸಂಖ್ಯೆ ಕಡಿಮೆಯಾಗುತ್ತದೆ. ವಿಷಯವೇನೆಂದರೆ ಹುಬ್ಬಳ್ಳಿಯ ನವನಗರದ ಮಹಿಳಾ ನಿವಾಸಿಗಳು ತಮ್ಮ ಏರಿಯದಲ್ಲಿ ಮದ್ಯದಂಗಡಿ ಬೇಡ ಅಂತ ಹೇಳಿದರೂ ಓಪನ್ ಆಗಿದೆ. ಲಿಕ್ಕರ್ ಅಂಗಡಿ ಬೇಡ ನಮಗೆ ನ್ಯಾಯ ಬೇಕು ಎಂದು ಮಹಿಳಾ ಮಹಾಮಂಡಳದ ಸದಸ್ಯರು ಮತ್ತು ಸಾರ್ವಜನಿಕರು ಕಳೆದ ರಾತ್ರಿ ಅಂಗಡಿಯ ಮುಂದೆ ಕೂತು ಧರಣಿ ನಡೆಸಿದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನವೆಂಬರ್ 20ರಂದು ಮದ್ಯ ಮಾರಾಟಗಾರರ ಸಂಘ ಅಂಗಡಿಗಳನ್ನು ಬಂದ್ ಮಾಡಲಿದೆ