ನವೆಂಬರ್ 20ರಂದು ಮದ್ಯ ಮಾರಾಟಗಾರರ ಸಂಘ ಅಂಗಡಿಗಳನ್ನು ಬಂದ್ ಮಾಡಲಿದೆ

ನವೆಂಬರ್ 20ರಂದು ಮದ್ಯ ಮಾರಾಟಗಾರರ ಸಂಘ ಅಂಗಡಿಗಳನ್ನು ಬಂದ್ ಮಾಡಲಿದೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 14, 2024 | 6:04 PM

ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ವಿರುದ್ಧ ಭ್ರಷ್ಟಾಚಾರದ ಅರೋಪಗಳು ಬಹಳಷ್ಟು ಕೇಳಿಬರುತ್ತಿವೆ, ಅವರನ್ನು ಬದಲಾಯಿಸಿಸಬೇಕೆಂದು ಗುರುಸ್ವಾಮಿ ನೇರವಾಗಿ ಹೇಳಲ್ಲ, ಆದರೆ ಹಣಕಾಸಿನ ಇಲಾಖೆ ನೋಡಿಕೊಳ್ಳುವ ಸಚಿವರು ಅಬಕಾರಿ ಖಾತೆಯನ್ನೂ ನೋಡಿಕೊಳ್ಳಬೇಕು, ಮತ್ತು ಇಲಾಖೆಯಲ್ಲಿ ಭ್ರಷ್ಟರಲ್ಲದ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಹೇಳುತ್ತಾರೆ.

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಅವ್ಯಾಹತ ಭ್ರಷ್ಟಾಚಾರ ಮತ್ತು ಅಧಿಕಾರಿಗಳು ಮನಬಂದಂತೆ ಲೈಸನ್ಸ್ ಹಂಚುವುದನ್ನು ವಿರೋಧಿಸಿ ರಾಜ್ಯ ಮದ್ಯ ಮಾರಾಟಗಾರರ ಸಂಘವು ನವೆಂಬರ್ 20 ರಂದು ಮದ್ಯ ಮಾರಾಟವನ್ನು ಬಂದ್ ಮಾಡಲಿದೆ ಎಂದು ಸಂಘದ ಅಧ್ಯಕ್ಷ ಗುರುಸ್ವಾಮಿ ಹೇಳಿದರು. ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, ಲೈಸೆನ್ಸ್ ಹಂಚಿಕೆಯಲ್ಲಿ ಬಹಳಷ್ಟು ಅವ್ಯವಹಾರ ನಡೆದಿದೆ, ಮದ್ಯದ ಅಂಗಡಿಯಿರುವ ಸ್ಥಳದಲ್ಲೇ ಮತ್ತೊಂದು ಅಂಗಡಿಯನ್ನು ತೆರೆಯಲು ಸಿಎಲ್ 7 ಲೈಸೆನ್ಸ್ ಅನ್ನು ನೀಡಲಾಗುತ್ತಿದೆ, ಕಾನೂನಿನಲ್ಲಿ ತಿದ್ದುಪಡಿ ತರಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಬಕಾರಿ ಇಲಾಖೆ ಭ್ರಷ್ಟಾಚಾರದಲ್ಲಿ ಸಿಲುಕಿಕೊಳುತ್ತಿದೆ, ಶೀಘ್ರ ಸೂಕ್ತ ಕ್ರಮ ಕೈಗೊಳ್ಳಲಾಗುವುದು: ಸಚಿವ RB ತಿಮ್ಮಾಪುರ