ಕಾಂಗ್ರೆಸ್ ಟಿಕೆಟ್ ನೀಡಿದರೂ ಸ್ಪರ್ಧೆ ಮಾಡಲ್ಲ, 2-3 ದಿನಗಳಲ್ಲಿ ಮುಂದಿನ ನಿರ್ಧಾರ ತಿಳಿಸುವೆ: ಜೆಸಿ ಮಾಧುಸ್ವಾಮಿ
ತಾನೀಗ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೂ ಸ್ಪರ್ಧಿಸಲ್ಲ, ಸೋಮಣ್ಣರನ್ನು ಸರಿಸಿ ತನಗೆ ಟಿಕೆಟ್ ನೀಡುವುದೂ ಬೇಕಿಲ್ಲ, ಸ್ಪರ್ಧೆ ಮಾಡುವ ಆಸೆ ಬತ್ತಿ ಹೋಗಿದೆ, ಆದರೆ ವಿಷಾದವೆಂದರೆ ಪಕ್ಷವನ್ನು ಆರೋಗ್ಯಕರವಾಗಿ ಮುನ್ನಡೆಸುವ ಬಗ್ಗೆ ಯಾರಿಗೂ ಯೋಚನೆ ಇದ್ದಂತಿಲ್ಲ ಎಂದು ಮಾಧುಸ್ವಾಮಿ ಹೇಳಿದರು.
ತುಮಕೂರು: ರಾಜ್ಯ ಬಿಜೆಪಿಯ ಹಲವಾರು ನಾಯಕರಲ್ಲಿ ಬಂಡಾಯ ಪ್ರವೃತ್ತಿ ತಲೆದೋರಿದೆ, ಅವರ ಅಸಮಾಧಾನ ಮತ್ತು ಕೋಪ-ತಾಪಗಳಿಗೆ ಬಿಎಸ್ ಯಡಿಯೂರಪ್ಪನವರ (BS Yediyurappa) ಧೋರಣೆ ಕಾರಣವಾಗುತ್ತಿದೆಯೇ ಅಂತ ಚರ್ಚೆ ನಡೆದಿದೆ. ಮಾಜಿ ಸಚಿವ ಜೆಸಿ ಮಾಧುಸ್ವಾಮಿ (JC Madhu Swamy) ತುಮಕೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು ಆದರೆ, ಯಡಿಯೂರಪ್ಪ ಅದನ್ನು ವಿ ಸೋಮಣ್ಣಗೆ (V Somanna) ಕೊಡಿಸಿದರು. ಪಕ್ಷದ ನಡೆಯಿಂದ ಮಾಧುಸ್ವಾಮಿ ಬಹಳ ಬೇಸರಗೊಂಡಿದ್ದು, ಪ್ರಾಯಶಃ ಕಾಂಗ್ರೆಸ್ ಸೇರುವ ನಿರ್ಧಾರವನ್ನು ಅವರು ಇಷ್ಟರಲ್ಲೇ ಪ್ರಕಟಿಸಬಹುದು. ತಮ್ಮ ಕಚೇರಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ತನಗೆ ಟಿಕೆಟ್ ನೀಡದಂಥ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದ್ದರೆ ಅದು ತನಗೆ ಬೇಡವೇ ಬೇಡ, ತಮ್ಮನ್ನು ಜೊತೆಯಲ್ಲಿ ಕರೆದೊಯ್ಯುವ ನಿರೀಕ್ಷೆ ಸುಳ್ಳಾಗಿದೆ. ತಾನೀಗ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೂ ಸ್ಪರ್ಧಿಸಲ್ಲ, ಸೋಮಣ್ಣರನ್ನು ಸರಿಸಿ ತನಗೆ ಟಿಕೆಟ್ ನೀಡುವುದೂ ಬೇಕಿಲ್ಲ, ಸ್ಪರ್ಧೆ ಮಾಡುವ ಆಸೆ ಬತ್ತಿ ಹೋಗಿದೆ, ಆದರೆ ವಿಷಾದವೆಂದರೆ ಪಕ್ಷವನ್ನು ಆರೋಗ್ಯಕರವಾಗಿ ಮುನ್ನಡೆಸುವ ಬಗ್ಗೆ ಯಾರಿಗೂ ಯೋಚನೆ ಇದ್ದಂತಿಲ್ಲ ಎಂದು ಮಾಧುಸ್ವಾಮಿ ಹೇಳಿದರು.
ತಮ್ಮ ಮುಂದಿನ ನಿರ್ಧಾರದ ಬಗ್ಗೆ ಮಾತಾಡಿದ ಅವರು ಈಗಾಗಲೇ ಎರಡು ಗುಂಪುಗಳ ಜೊತೆ ಮಾತಾಡಿದ್ದೇನೆ, ಯಾರ ಮೇಲೂ ಭಾವನೆಗಳನ್ನು ಹೇರಲ್ಲ, ಒಂದು ತೀರ್ಮಾನಕ್ಕೆ ಬಂದ ಬಳಿಕ ಅದನ್ನು ಮಾಧ್ಯಮದವರಿಗೆ ತಿಳಿಸುವುದಾಗಿ ಮಾಧುಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿ ಎರಡನೇ ಪಟ್ಟಿ: ವಿರೋಧಿಗಳಿಗೆ ಟಿಕೆಟ್ ತಪ್ಪಿಸುವಲ್ಲಿ ಬಿಎಸ್ ಯಡಿಯೂರಪ್ಪ ಮೇಲುಗೈ, ಸಂತೋಷ್ ಬಣಕ್ಕೆ ಅಲ್ಪ ಯಶಸ್ಸು