ಸಂಬಳ ಕೇಳಿದ್ದಕ್ಕೆ ಕಾರ್ಮಿಕನ ಮೇಲೆ ಹೋಟೆಲ್ ಮಾಲೀಕನಿಂದ ಹಲ್ಲೆ: ಬ್ಯಾನರ್ ಕಂಬ ಏರಿ ಪ್ರತಿಭಟನೆ
ಬೈಲಹೊಂಗಲದ ಸಂಗಮ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ ಬಸಪ್ಪ ಮಡೊಳ್ಳಿ ಎಂಬ 48 ವರ್ಷದ ಕಾರ್ಮಿಕ, ಮೂರು ತಿಂಗಳಿನಿಂದ ಬಾಕಿ ಉಳಿದಿರುವ ವೇತನಕ್ಕಾಗಿ ಹೋಟೆಲ್ ಎದುರಿನ ಬ್ಯಾನರ್ ಕಂಬ ಏರಿ ಪ್ರತಿಭಟನೆ ನಡೆಸಿದ್ದಾರೆ. ಮಾಲೀಕ ಚಂದ್ರಶೇಖರ್ ಶೆಟ್ಟಿ ಅವರು ಸಂಬಳ ಕೇಳಿದ್ದಕ್ಕೆ ಮಂಜುನಾಥರ ಮೇಲೆ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಳಗಾವಿ, ಡಿಸೆಂಬರ್ 16: ಮೂರು ತಿಂಗಳಿಂದ ವೇತನ ನೀಡದಿದ್ದಕ್ಕೆ ಬ್ಯಾನರ್ ಕಂಬ ಏರಿ ಕಾರ್ಮಿಕ (labor) ಪ್ರತಿಭಟನೆ ಮಾಡಿರುವಂತಹ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ. ಮಂಜುನಾಥ ಬಸಪ್ಪ ಮಡೊಳ್ಳಿ (48) ಪ್ರತಿಭಟನೆ ಮಾಡಿದ ಕಾರ್ಮಿಕ. ಸಂಗಮ್ ಹೋಟೆಲ್‌ನಲ್ಲಿ ಮಂಜುನಾಥ ಕೆಲಸ ಮಾಡುತ್ತಿದ್ದರು. ಸಂಬಳ ಕೇಳಿದ್ದಕ್ಕೆ ಕಾರ್ಮಿಕನ ಮೇಲೆ ಮಾಲೀಕ ಚಂದ್ರಶೇಖರ್ ಶೆಟ್ಟಿ ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಇದರಿಂದ ಮನನೊಂದು ಹೋಟೆಲ್ ಎದುರಿನ ಬ್ಯಾನರ್ ಕಂಬ ಏರಿ ಕುಳಿತಿದ್ದಾರೆ. ಕೂಡಲೇ ಕಂಬ ಏರಿದ ಆಟೋ ಚಾಲಕ ಕಾರ್ಮಿಕನನ್ನ ಕಾಪಾಡಿ ಪೊಲೀಸರ ಕೈಗೆ ಒಪ್ಪಿಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.