ದರ್ಶನ್ ಆರೋಪಿಯೇ ಹೊರತು ಅಪರಾಧಿಯಲ್ಲ, ಆರೋಪಗಳು ಎಲ್ಲರ ಮೇಲೂ ಬರುತ್ತವೆ: ಭವ್ಯಾ, ಅಭಿಮಾನಿ

ದರ್ಶನ್ ಆರೋಪಿಯೇ ಹೊರತು ಅಪರಾಧಿಯಲ್ಲ, ಆರೋಪಗಳು ಎಲ್ಲರ ಮೇಲೂ ಬರುತ್ತವೆ: ಭವ್ಯಾ, ಅಭಿಮಾನಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Dec 16, 2024 | 4:03 PM

ಆರೋಪಗಳು ಎಲ್ಲರ ಮೇಲೂ ಬರುತ್ತವೆ, ಆದರೆ ಅವು ಬಂದಾಗ ಎದೆಗುಂದಬಾರದು, ದೈರ್ಯವಾಗಿ ಆರೋಪವನ್ನು ಎದುರಿಸಬೇಕು, ನಟ ದರ್ಶನ್ ಮೇಲೆ ಕೊಲೆ ಅರೋಪ ಬಂದಿದೆ ಎನ್ನುವ ಕಾರಣಕ್ಕೆ ಅವರ ಮೇಲಿನ ಅಭಿಮಾನ ಮತ್ತು ಪ್ರೀತಿಯೇನೂ ಕಡಿಮೆಯಾಗಿಲ್ಲ ಎಂದು ಹೇಳುವ ಭವ್ಯಾ ಇದಕ್ಕೂ ಮೊದಲು ಅನೇಕ ಸಲ ದರ್ಶನ್ ನೋಡಲು ಬಂದಿದ್ದರಂತೆ.

ಬೆಂಗಳೂರು: ನಗರದವರೇ ಆಗಿರುವ ಭವ್ಯಾ ಸ್ನಾತಕೋತ್ತರ ಪದವೀಧರೆ ಮತ್ತು ನಟ ದರ್ಶನ್ ಅವರ ಕಟ್ಟಾಭಿಮಾನಿ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬರುತ್ತಾರೆಂಬ ಸುದ್ದಿ ಹೊರಬಿದ್ದ ಬಳಿಕ ಕಳೆದ ಮೂರು ದಿನಗಳಿಂದ ಸತತವಾಗಿ ದರ್ಶನ್ ಮನೆಯಿರುವ ಆರ್ ಆರ್ ನಗರಕ್ಕೆ ಬರುತ್ತಿರುವ ಭವ್ಯಾ ನಟ ಒಮ್ಮೆ ಕಣ್ಣಿಗೆ ಬಿದ್ದರೆ ಸಾಕು, ನೆಮ್ಮದಿಯಿಂದ ಹೋಗುತ್ತೇನೆ ಅನ್ನುತ್ತಾರೆ. ದರ್ಶನ್ ಆರೋಪಿಯೇ ಹೊರತು ಅಪರಾಧಿ ಅಲ್ಲ, ಆದರೆ ಇಡೀ ಪ್ರಕರಣದ ಬಗ್ಗೆ ಅವರು ಏನು ಹೇಳುತ್ತಾರೆ ಅನ್ನೋದನ್ನು ಕೇಳಬೇಕೆನ್ನುವ ಕುತೂಹಲ ತನಗಿದೆ ಎಂದು ಭವ್ಯಾ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜಾಮೀನು ಪ್ರಕ್ರಿಯೆ ಮುಗಿಸಲು ಕೋರ್ಟ್​ಗೆ ತೆರಳಿದ ದರ್ಶನ್

Published on: Dec 16, 2024 04:02 PM