ಕೋವಿಡ್ ಲಸಿಕೆ ಅಭಿಯಾನದಡಿ ಭಾರತ ಮಾಡಿರುವ ಸಾಧನೆಯನ್ನು ಇಡೀ ವಿಶ್ವ ಬೆರಗುಗಣ್ಣುಗಳಿಂದ ನೋಡುತ್ತಿದೆ!!
ನವೆಂಬರ್ 21, 2021 ರಂದು ಭಾರತ ಲಸಿಕೆಯ 100 ಕೋಟಿ ಡೋಸುಗಳನ್ನು ನೀಡಿದ ಸಾಧನೆ ಮಾಡಿ ವಿಕ್ರಮ ಮೆರೆಯಿತು. ಹಿಮ ಸುರಿಯುವ ಪ್ರದೇಶಗಳು, ಮರಳುಗಾಡು ಯಾವುದನ್ನೂ ಲೆಕ್ಕಿಸದೆ, ಪ್ರತಿ ಭಾರತೀಯನಿಗೆ ಲಸಿಕೆ ನೀಡುವ ಪ್ರಧಾನಿಯವರ ಸಂಕಲ್ಪ ತಡೆಯಿಲ್ಲದೆ ನಾಗಾಲೋಟದಲ್ಲಿ ಮುನ್ನುಗ್ಗಿತು.
ರವಿವಾರ ಅಂದರೆ, ಜನೆವರಿ 16, 2022 ರಂದು ಭಾರತದಲ್ಲಿ ಕೋವಿಡ್-19 ಪಿಡುಗಿನ ವಿರುದ್ಧ ಲಸಿಕೆ ಅಭಿಯಾನ (Vaccination Drive) ಆರಂಭಗೊಂಡು ಸರಿಯಾಗಿ ಒಂದು ವರ್ಷವಾಯಿತು. ಈ ಅವಧಿಯಲ್ಲಿ ಜನರಿಗೆ ಲಸಿಕೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಮಾಡಿರುವ ಸಾಧನೆಯನ್ನು ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುತ್ತಿದೆ. 2020ರಲ್ಲಿ ಕೊರೋನಾ ವೈರಸ್ ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ತಲ್ಲಣವನ್ನು ಸೃಷ್ಟಿಸಿದಾಗ ಅದನ್ನು ತಡೆಯಲು ಲಸಿಕೆ ಬೇರೆ ಯಾವುದೇ ಉಪಾಯವಿಲ್ಲ ಎನ್ನವುದನ್ನು ಜಗತ್ತು ಮನಗಂಡಿತ್ತು. ಆದರೆ, ಬಾರತದಲ್ಲಿ ಲಸಿಕೆ ಲಭ್ಯವಾಗುವಂತೆ ಮಾಡುವುದು ಸಾಮಾನ್ಯ ಮಾತಾಗಿರಲಿಲ್ಲ. ಯಾಕೆಂದರೆ, ಹಿಂದೆ ಮಾಹಾಮಾರಿಗಳು (pandemic) ತಲೆದೋರಿದಾಗ ಭಾರತದಲ್ಲಿ ಲಸಿಕೆ ಲಭ್ಯವಾಗಲು ವರ್ಷಗಳೇ ತಗುಲುತಿತ್ತು. ಇಂಥ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Prime Minister Narendra Modi) 2020ರಲ್ಲಿ ದೇಶದ ವಿಜ್ಞಾನಿಗಳು, ವೈದ್ಯಕೀಯ ಸಂಸ್ಥೆಗಳು ಮತ್ತು ಲಸಿಕೆ ತಯಾರು ಮಾಡುವ ಫಾರ್ಮಾಸ್ಯೂಟಿಕಲ್ಸ್ ಕಂಪನಿಗಳ ಮಾಲೀಕರೊಂದಿಗೆ ಸಮಾಲೋಚನೆ ನಡೆಸಿ, ಭಾರತೀಯರೆಲ್ಲರಿಗೆ ಭಾರತದಲ್ಲೇ ತಯಾರಾಗುವ ಕೋವಿಡ್ ಲಸಿಕೆ ಸಿಗುವಂತಾಗಬೇಕು, ಅದಕ್ಕೆ ಬೇಕಾದ ಎಲ್ಲ ನೆರವನ್ನು ಸರ್ಕಾರ ಒದಗಿಸುತ್ತದೆ ಎಂದು ಆಶ್ವಾಸನೆ ನೀಡುವುದರೊಂದಿಗೆ ಲಸಿಕಾ ಅಭಿಯಾನದ ಮೊದಲ ಹಂತ ಶುರುವಾಯಿತು.
ಲಸಿಕೆ ತಯಾರಿಸುವ ಕೆಲಸ ಸಮರೋಪಾದಿಯಲ್ಲಿ ಆರಂಭಗೊಂಡಿತು. ಪ್ರಧಾನಿ ಮೋದಿಯವರು ನವೆಂಬರ್ 20, 2020ರಲ್ಲಿ ಲಸಿಕಾ ತಯಾರಿಕಾ ಘಟಕಕ್ಕೆ ಖುದ್ದು ಭೇಟಿ ನೀಡಿ ಅಲ್ಲಿನ ವಿಜ್ಞಾನಿಗಳು ಮತ್ತು ಸಿಬ್ಬಂದಿ ಮನಸ್ಥೈರ್ಯವನ್ನು ಹೆಚ್ಚಿಸಿದರು. ಅದಾದ ಮೇಲೆ ಪ್ರಧಾನಿಗಳು ಎನ್ತ್ಯಾಗಿ (ಎನ್ ಟಿಎಜಿಐ) ಮತ್ತು ನೆಗ್ವ್ಯಾಕ್ (ಎನ್ ಇಜಿವಿಎಸಿ) ಹೆಸರಿನ ಗುಂಪುಗಳನ್ನು ರೂಪಿಸಿ ಅಂತಿಮವಾಗಿ, ಜನೆವರಿ 16, 2021 ರಂದು ಎಲ್ಲರಿಗೂ ಲಸಿಕೆ ಉಚಿತ ಲಸಿಕೆ ಘೋಷವಾಕ್ಯದೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಿದರು.
ಮೇಕ್ ಇನ್ ಇಂಡಿಯಾ ಲಸಿಕೆಯೊಂದಿಗೆ ಭಾರತದಲ್ಲಿ ಅಭಿಯಾನ ಶುರುವಾಗಿದ್ದು ಕಂಡು ಮುಂದುವರಿದ ದೇಶಗಳು ಹುಬ್ಬೇರಿಸಿದವು. ಅಭಿಯಾನ ಆರಂಭಗೊಂಡ ಬಳಿಕ ದೇಶದಲ್ಲಿ ಅನೇಕ ಸವಾಲುಗಳು ಎದುರಾದವು. 135 ಕೋಟಿ ಜನರಿಗೆ ಲಸಿಕೆ ನೀಡುವುದು ಬಹಳ ಕಠಿಣ ಸವಾಲಾಗಿತ್ತು.
ಅಲ್ಲದೆ, ಲಸಿಕೆಯ ಗುಣಮಟ್ಟದ ಬಗ್ಗೆ ಸವಾಲುಗಳು ಎದ್ದವು. ಲಸಿಕೆಯ ಅಡ್ಡಪರಿಣಾಮಗಳ ಪ್ರಶ್ನೆ ಎದ್ದಿದ್ದರಿಂದ ಮುಗ್ಧ ಜನರಲ್ಲಿ ಭೀತಿ ಮೂಡಿತು. ಆದರೆ, ಪ್ರಧಾನಿ ಮೋದಿಯವರ ದೃಢಸಂಕಲ್ಪಕ್ಕೆ ಬೆಂಬಲವಾಗಿ ನಿಂತ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯಕೀಯ ಸಂಸ್ಥೆಗಳು ಅಭಿಯಾನ ಎಲ್ಲೂ ಮುಗ್ಗುರಿಸದಂತೆ ನೋಡಿಕೊಂಡರು,
ನವೆಂಬರ್ 21, 2021 ರಂದು ಭಾರತ ಲಸಿಕೆಯ 100 ಕೋಟಿ ಡೋಸುಗಳನ್ನು ನೀಡಿದ ಸಾಧನೆ ಮಾಡಿ ವಿಕ್ರಮ ಮೆರೆಯಿತು. ಹಿಮ ಸುರಿಯುವ ಪ್ರದೇಶಗಳು, ಮರಳುಗಾಡು ಯಾವುದನ್ನೂ ಲೆಕ್ಕಿಸದೆ, ಪ್ರತಿ ಭಾರತೀಯನಿಗೆ ಲಸಿಕೆ ನೀಡುವ ಪ್ರಧಾನಿಯವರ ಸಂಕಲ್ಪ ತಡೆಯಿಲ್ಲದೆ ನಾಗಾಲೋಟದಲ್ಲಿ ಮುನ್ನುಗ್ಗಿತು.
ಅವರ ಜನ್ಮದಿನವಾದ ಸೆಪ್ಟಂಬರ್ 17, 2021 ರಂದು 2.5 ಕೋಟಿ ಭಾರತೀಯರಿಗೆ ಲಸಿಕೆ ನೀಡಿ ಹೊಸ ದಾಖಲೆ ನಿರ್ಮಿಸಲಾಯಿತು!
ಇದುವರೆಗೆ ಶೇಕಡಾ 93 ರಷ್ಟು ಭಾರತೀಯರಿಗೆ ಒಂದು ಡೋಸು ಮತ್ತು ಶೇಕಡಾ 70 ರಷ್ಟು ಜನರಿಗೆ ಲಸಿಕೆಯ ಎರಡು ಡೋಸುಗಳನ್ನು ನೀಡಲಾಗಿದೆ. 15 ರಿಂದ 18 ವರ್ಷ ವಯಸ್ಸಿನವರಿಗೂ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದ್ದು ಅಲ್ಪಾವಧಿಯಲ್ಲೇ ಶೇಕಡಾ 45 ರಷ್ಟು ಹದಿಹರೆಯದವರಿಗೆ ಲಸಿಕೆ ನೀಡಲಾಗಿದೆ.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್; ಸಬ್ ಕಾ ವಿಶ್ವಾಸ್ ಸಬ್ ಕಾ ಪ್ರಯಾಸ್ ದ್ಯೇಯದೊಂದಿಗೆ ಲಸಿಕಾ ಅಭಿಯಾನ ಜಾರಿಯಲ್ಲಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವನಲ್ಲಿ ಆತ್ಮನಿರ್ಭರ ಭಾರತದ ಸಾಧನೆಯನ್ನು ಇಡೀ ವಿಶ್ವವೇ ಬೆರಗಗಣ್ಣುಗಳಿಂದ ನೋಡುತ್ತಿದೆ.