ರೆಡ್ಮೀ ನೋಟ್10 ಮತ್ತು ನೋಟ್10 ಪ್ರೋ ನಂತರ ನೋಟ್ 11ಟಿ 5ಜಿ ಫೋನ್ ಬಿಡುಗಡೆ ಮಾಡಲು ತಯಾರಾಗಿದೆ ಶಾಮಿ
ರೆಡ್ಮೀ ಈ ಬಾರಿ ಮೂರು ಆವೃತ್ತಿಗಳಲ್ಲಿ ಫೋನನ್ನು ಪರಿಚಯಿಸಿದೆ. 6 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಮಾಡೆಲ್ ಬೆಲೆ ರೂ 16,999 ಆಗಿದ್ದರೆ 6ಜಿಬಿ ರ್ಯಾಮ್ ಮತ್ತು 128ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ ರೂ 17,999 ನಿಗದಿಪಡಿಸಲಾಗಿದೆ.
ಶಾಮಿ ಸಂಸ್ಥೆಯು ಏಳು ತಿಂಗಳ ಹಿಂದೆ ರೆಡ್ಮಿ ನೋಟ್ 10 ಮತ್ತು ನೋಟ್ 10 ಪ್ರೋ ಮಾಡೆಲ್ಗಳನ್ನು ಲಾಂಚ್ ಮಾಡಿದ್ದು ನಿಮಗೆ ಗೊತ್ತಿದೆ. ಆದರೆ ಈ ಪೋನ್ಗಳಿಗೆ 5ಜಿ ಸಪೋರ್ಟ್ ಇರಲಿಲ್ಲ. 5ಜಿ ಸಪೋರ್ಟ್ ಇರುವ ಪೋನ್ ಬಿಡುಗಡೆ ಮಾಡಲು ಸಮಯ ಹಿಡಿಯುತ್ತದೆ, ಇದೇ ಬೆಲೆಯಲ್ಲಿ ಉತ್ತಮ ಹಾರ್ಡ್ವೇರ್ ಒದಗಿಸುವುದು ಅತ್ಯವಶ್ಯಕವಾಗಿದೆ ಅಂತ ಲಾಂಚ್ ಸಂದರ್ಭದಲ್ಲಿ ಕಂಪನಿಯ ಅಧಿಕಾರಿಗಳು ಹೇಳಿದ್ದರು. ಅದಾದ 7 ತಿಂಗಳ ನಂತರ ಶಾಮಿ ರೆಡ್ಮಿ ನೋಟ್ 11ಟಿ 5ಜಿ ಫೋನನ್ನು ಬಿಡುಗಡೆ ಮಾಡಲು ತಯಾರಾಗಿದ್ದು ಇದರಲ್ಲಿ ಅಮೊಲೆಡ್ ಪ್ಯಾನಲ್ ಮತ್ತು ಹೆಚ್ಚಿನ ಸಂಖ್ಯೆಯ ಸೆನ್ಸರ್ಗಳನ್ನು ಬಳಸುವುದಕ್ಕಿಂತ 5ಜಿಗೆ ಒತ್ತು ನೀಡಲಾಗಿದೆ. ನೋಟ್ 11ಟಿ 5ಜಿ ಫೋನಿಗೆ ಹಿಂಭಾಗದಲ್ಲಿ ಡುಯಲ್ ಕೆಮೆರಾ ಸೆಟಪ್ ಒದಗಿಸಲಾಗಿದೆ.
ರೆಡ್ಮೀ ಈ ಬಾರಿ ಮೂರು ಆವೃತ್ತಿಗಳಲ್ಲಿ ಫೋನನ್ನು ಪರಿಚಯಿಸಿದೆ. 6 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಮಾಡೆಲ್ ಬೆಲೆ ರೂ 16,999 ಆಗಿದ್ದರೆ 6ಜಿಬಿ ರ್ಯಾಮ್ ಮತ್ತು 128ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ ರೂ 17,999 ನಿಗದಿಪಡಿಸಲಾಗಿದೆ.
ಹಾಗೆಯೇ, 8ಜಿಬಿ ರ್ಯಾಮ್ ಮತ್ತು 128ಜಿಬಿ ಸ್ಟೋರೇಜ್ ಆವೃತ್ತಿಯ ಫೋನ್ ನಿಮಗೆ ರೂ 19,999ಗಳಿಗೆ ಸಿಗಲಿದೆ. ಮೈಕ್ರೊ ಎಸ್ ಡಿ ಕಾರ್ಡ್ ಬಳಸಿ ಫೋನ್‌ನಲ್ಲಿ ಆಂತರಿಕ ಸಂಗ್ರಹಣೆಯನ್ನು 1TB ವರೆಗೆ ವಿಸ್ತರಿಸಬಹುದು. ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಸಿ ಫೋನ್ ಖರೀದಿಸುವವರಿಗೆ 1,000 ರೂಪಾಯಿ ರಿಯಾಯಿತಿಯೂ ಸಿಗಲಿದೆ.