ರೆಡ್ಮಿ 11 ಸರಣಿ ಫೋನ್ ಮೂರು ಡಿವೈಸ್ಗಳ ಲಾಂಚ್ ಅಕ್ಟೋಬರ್ 28ಕ್ಕೆ ಎಂದು ಶಾಮಿ ಹೇಳಿದೆ
ಶಾಮಿ ಸಂಸ್ಥೆ ಬಿಡುಗಡೆ ಮಾಡಿರುವ ಚಿತ್ರಗಳಲ್ಲಿ ರೆಡ್ಮಿ ನೋಟ್ 11 ಫ್ಲಾಟ್ ಸೈಡ್‌ಗಳನ್ನು ಒಳಗೊಂಡಿರುವುದನ್ನು ಕಾಣಬಹುದು. ಹಿಂಭಾಗದಲ್ಲಿ, ಇದು ಆಯತಾಕಾರದ ಕೆಮೆರಾ ಮಾಡ್ಯೂಲ್ ಹೊಂದಿದೆ.
ಕೆಲವು ಪೋನ್ಗಳ ವೈಶಿಷ್ಟ್ಯತೆಯೇ ಹಾಗೆ. ನಮ್ಮ ಕೈ ತಲುಪುವ ಅಂದರೆ ಮಾರ್ಕೆಟ್ ಗೆ ಬಿಡುಗಡೆಯಾಗುವ ಮೊದಲೇ ವಿಪರೀತ ಕುತೂಹಲ ಮೂಡಿಸುತ್ತವೆ. ಅಕ್ಟೋಬರ್ 28 ರಂದು ಭಾರತದಲ್ಲಿ ಬಿಡುಗಡೆಯಾಗಲಿರುವ ಶಾಮಿಯ ರೆಡ್ಮಿ ನೋಟ್ 11 ಸಿರೀಸ್ ಫೋನ್ಗಳು ಈ ಸಾಲಿಗೆ ಸೇರಿವೆ. ಹೊಸ ಸಿರೀಸ್ ಫೋನ್ಗಳು 28 ಕ್ಕೆ ಲಾಂಚ್ ಮಾಡುತ್ತಿರುವುದನ್ನು ಶಾಮಿ ಖಚಿತಪಡಿಸಿದೆ. ಲೀಕ್ ಆಗಿರುವ ಮಾಹಿತಿ ಮತ್ತು ಕಂಪನಿ ಬಿಡುಗಡೆ ಮಾಡಿರುವ ಟೀಸರ್ ಮೂಲಕ ನಮಗೆ ಫೋನ್ಗಳ ವೈಶಿಷ್ಟ್ಯತೆಗಳು ಗೊತ್ತಾಗಿವೆ. ನೋಟ್ 11 ಸರಣಿಯ ಫೋನ್ಗಳಿಗೆ ಮುಂಭಾಗದಲ್ಲಿ ಪಂಚ್-ಹೋಲ್ ಡಿಸ್ಪ್ಲೇಯಿದೆ. ಟೀಸರ್ ನಲ್ಲಿ ತೋರಿಸಿರುವ ಮಾಡೆಲ್ ಮಿಸ್ಟೀ ಫಾರೆಸ್ಟ್ ಕಲರ್ ಹೊಂದಿದೆ. ಶಾಮಿ ಈ ಹೊಸ ಸರಣಿಯಲ್ಲಿ ಮೂರು ಆವೃತ್ತಿಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ಗೊತ್ತಾಗಿರುವ ಮತ್ತೊಂದು ಅಂಶವೇನೆಂದರೆ, ಎಲ್ಲ ಮೂರು ಡಿವೈಸ್ ಗಳು 120 ಹೆಚ್ಜೆಡ್ ಪ್ಯಾನೆಲ್ ಮತ್ತು ಮಿಡಿಯಾಟೆಕ್ ಚಿಪ್ ಸೆಟ್ಗಳೊಂದಿಗೆ ಲಾಂಚ್ ಆಗಲಿವೆ. ಅಂದಹಾಗೆ ರೆಡ್ಮಿ 11 ಸರಣಿ ಫೋನ್ಗಲ ಬೆಲೆ ರೂ 14,000 ಗಳಿಂದ ಆರಂಭವಾಗುವ ನಿರೀಕ್ಷೆಯಿದೆ.
ಜನಪ್ರಿಯ ರೆಡ್ಮಿ ನೋಟ್ 10 ಶೀಘ್ರದಲ್ಲೇ ಅಪ್‌ಗ್ರೇಡ್ ಆಗಲಿದೆ ಎಂದು ಶಾಮಿ ಸಂಸ್ಥೆ ದೃಢೀಕರಿಸಿದೆ. ಆಗಲೇ ಹೇಳಿದಂತೆ ನೋಟ್ 11 ಸರಣಿಯು ಮೂರು ಮಾದರಿಗಳನ್ನು ಲಾಂಚ್ ಮಾಡುತ್ತಿದೆ-ರೆಡ್ಮಿ ನೋಟ್ 11, ರೆಡ್ಮಿ ನೋಟ್ 11 ಪ್ರೊ ಮತ್ತು ರೆಡ್ಮಿ ನೋಟ್ 11 ಪ್ರೊ+.
ಶಾಮಿ ಸಂಸ್ಥೆ ಬಿಡುಗಡೆ ಮಾಡಿರುವ ಚಿತ್ರಗಳಲ್ಲಿ ರೆಡ್ಮಿ ನೋಟ್ 11 ಫ್ಲಾಟ್ ಸೈಡ್‌ಗಳನ್ನು ಒಳಗೊಂಡಿರುವುದನ್ನು ಕಾಣಬಹುದು. ಹಿಂಭಾಗದಲ್ಲಿ, ಇದು ಆಯತಾಕಾರದ ಕೆಮೆರಾ ಮಾಡ್ಯೂಲ್ ಹೊಂದಿದ್ದು ಅದು ನಾಲ್ಕು ಕೆಮೆರಾಗಳು ಮತ್ತು ಎಲ್ಇಡಿ ಫ್ಲ್ಯಾಷ್ ಅನ್ನು ಒಳಗೊಂಡಿರುತ್ತದೆ. ಹಿಂಭಾಗದಲ್ಲಿ ರೆಡ್ಮಿ 5G ಲೋಗೋವಿದ್ದು ಫಲಕದ ಉಳಿದ ಭಾಗವು ಕ್ಲೀನ್ ಆಗಿದೆ.
ಇದನ್ನೂ ಓದಿ: Viral Video: ಮನಿಕೆ ಮಗೆ ಹಿತೆ ಹಾಡಿಗೆ ಮಹಿಳೆಯ ಬಿಹು ನೃತ್ಯ ಪ್ರದರ್ಶನ; ವಿಡಿಯೋ ನೋಡಿ