ಯಾದಗಿರಿ ಸತತ ಮಳೆ: ನಿರ್ಮಾಣ ಹಂತದ ಸೇತುವೆ ಮೇಲಿಂದ ಏಣಿ ಮೂಲಕ ಶಾಲಾ ಮಕ್ಕಳ ಓಡಾಟ

| Updated By: ಸಾಧು ಶ್ರೀನಾಥ್​

Updated on: Sep 05, 2023 | 11:33 AM

ಮದರಕಲ್ ಹಾಗೂ ಕೊಳ್ಳೂರ ಎಂ ಮಧ್ಯೆ ಹಳ್ಳಕ್ಕೆ ಅಡ್ಡಲಾಗಿ ಇರುವ ಸೇತುವೆ ಇದಾಗಿದೆ. ಹಳ್ಳಕ್ಕೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಪಕ್ಕದಲ್ಲಿ ತಾತ್ಕಾಲಿಕ ರಸ್ತೆ ಮಾಡಲಾಗಿದೆ. ಆದ್ರೆ ಮಳೆಗೆ ರಸ್ತೆ ಕೊಚ್ಚಿ ಹೋಗಿದೆ. ರಸ್ತೆ ದಾಟಿ ಮದರಕಲ್ ಗ್ರಾಮದ ಮಕ್ಕಳಿಗೆ ಕೊಳ್ಳುರು ಶಾಲೆಗೆ ಹೋಗಲು ಆಗುತ್ತಿಲ್ಲ.

ಯಾದಗಿರಿ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಸತತ ಮಳೆ‌ಯಾಗುತ್ತಿದೆ (Yadagiri rains). ಈ ಹಿನ್ನೆಲೆ ಮಳೆ‌ ಹೊಡೆತಕ್ಕೆ‌ ಸಿಲುಕಿ ಶಾಲಾ ವಿದ್ಯಾರ್ಥಿಗಳು ತತ್ತರಿಸಿದ್ದಾರೆ. ನಿರ್ಮಾಣ ಹಂತದ ಸೇತುವೆ (Bridge) ಮೇಲಿಂದ ಏಣಿ ಮೂಲಕ ಮಕ್ಕಳು ( School Children) ಓಡಾಡುತ್ತಿದ್ದಾರೆ. ಏಣಿ (Ladder) ಮೂಲಕ ಪೋಷಕರು ತಮ್ಮ ಮಕ್ಕಳನ್ನ ಕೆಳಗಿಳಿಸಿ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ಮದರಕಲ್ ಬಳಿ ಈ ಘಟನೆ ನಡೆದಿದೆ. ಮದರಕಲ್ ಹಾಗೂ ಕೊಳ್ಳೂರ ಎಂ ಮಧ್ಯೆ ಹಳ್ಳಕ್ಕೆ ಅಡ್ಡಲಾಗಿ ಇರುವ ಸೇತುವೆ ಇದಾಗಿದೆ.

ಹಳ್ಳಕ್ಕೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಸೇತುವೆ ‌‌ನಿರ್ಮಾಣ ಮಾಡುತ್ತಿರುವ ಹಿನ್ನೆಲೆ ಪಕ್ಕದಲ್ಲಿ ತಾತ್ಕಾಲಿಕ ರಸ್ತೆ ಮಾಡಲಾಗಿದೆ. ಆದ್ರೆ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಸ್ತೆ ಕೊಚ್ಚಿಕೊಂಡು ಹೋಗಿದೆ. ಇದೆ ಕಾರಣಕ್ಕೆ ರಸ್ತೆ ದಾಟಿ ಮದರಕಲ್ ಗ್ರಾಮದ ಮಕ್ಕಳಿಗೆ ಕೊಳ್ಳುರು ಶಾಲೆಗೆ ಹೋಗಲು ಆಗುತ್ತಿಲ್ಲ. ಅನಿವಾರ್ಯವಾಗಿ ನಿರ್ಮಾಣ ಹಂತದ ಸೇತುವೆ ಮೇಲಿಂದ ಏಣಿ ಮೂಲಕ ಮಕ್ಕಳು ಹೋಗುತ್ತಿದ್ದಾರೆ. ಸ್ವಲ್ಪ ಆಯ ತಪ್ಪಿದ್ರೆ ಅನಾಹುತ‌ ಸಂಭವಿಸೋದು ಗ್ಯಾರಂಟಿ ಎನ್ನುವಂತಾಗಿದೆ. ಸೇತುವೆ ಕೆಲಸ‌ ವಿಳಂಬವಾಗಿರುವುದೇ ಈ ಸ್ಥಿತಿಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on