ರಸ್ತೆ ಮಧ್ಯೆಯೇ ಕೈಕೊಟ್ಟ ಸಾರಿಗೆ ಬಸ್, ಪ್ರಯಾಣಿಕರ ಪರದಾಟ

Edited By: ಕಿರಣ್ ಹನುಮಂತ್​ ಮಾದಾರ್

Updated on: Jun 02, 2024 | 2:47 PM

ರಸ್ತೆ ಮಧ್ಯೆಯೇ ಸಾರಿಗೆ ಬಸ್​ ಕೈಕೊಟ್ಟ ಘಟನೆ ನಗರದ ಹತ್ತಿಕುಣಿ ಕ್ರಾಸ್ ಬಳಿ ನಡೆದಿದ್ದು, ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಯಾದಗಿರಿ ಬಸ್ ನಿಲ್ದಾಣದಿಂದ ಸೇಡಂಗೆ ಹೊರಟ್ಟಿದ್ದ ಕೆಕೆಆರ್​ಟಿಸಿ ಬಸ್ ಇದಾಗಿದ್ದು, ಚಲಿಸುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಬಸ್ ಕೆಟ್ಟು ನಿಂತ ಪರಿಣಾಮ, ಪ್ರಯಾಣಿಕರಿಗೆ ಸಮಸ್ಯೆಗೆ ಈಡಾಗಿದ್ದಾರೆ.

ಯಾದಗಿರಿ, ಜೂ.02: ಸಾರಿಗೆ ಸಂಸ್ಥೆಗಳಿಗೆ ಅದೇಷ್ಟೇ ಹೊಸ ಬಸ್​ಗಳನ್ನು ನೀಡಿದರು. ಹಳೆಯ ಬಸ್​ಗಳಿಗೆ ಮುಕ್ತಿ ಸಿಗುತ್ತಿಲ್ಲ. ಇದರ ಜೊತೆಗೆ ಸಾರಿಗೆ ಅಧಿಕಾರಿಗಳು ಕೂಡ ಅಂತಹ ಬಸ್​ಗಳನ್ನೇ ರಸ್ತೆಗೆ ಬಿಡುತ್ತಿದ್ದಾರೆ. ಪರಿಣಾಮ ತಲುಪಬೇಕಾದ ಸ್ಥಳ ತಲುಪದೆ ಅರ್ಧ ದಾರಿಯಲ್ಲೇ ಬಸ್ಸುಗಳು ಕೆಟ್ಟು ನಿಲ್ಲುತ್ತಿವೆ. ಈ ಮಧ್ಯೆಯೇ ಸಾರಿಗೆ ಬಸ್​ ಕೈಕೊಟ್ಟ ಘಟನೆ ನಗರದ ಹತ್ತಿಕುಣಿ ಕ್ರಾಸ್ ಬಳಿ ನಡೆದಿದ್ದು, ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಯಾದಗಿರಿ(Yadagiri) ಬಸ್ ನಿಲ್ದಾಣದಿಂದ ಸೇಡಂಗೆ ಹೊರಟ್ಟಿದ್ದ ಕೆಕೆಆರ್​ಟಿಸಿ ಬಸ್ ಇದಾಗಿದ್ದು, ಚಲಿಸುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಬಸ್ ಕೆಟ್ಟು ನಿಂತ ಪರಿಣಾಮ, ಪ್ರಯಾಣಿಕರಿಗೆ ಸಮಸ್ಯೆಗೆ ಈಡಾಗಿದ್ದಾರೆ. ಇನ್ನು ಬೇರೊಂದು ಬಸ್​ಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ಕೆಲವರು ಸರಿಯಾದ ಸಮಯಕ್ಕೆ ಅಂದುಕೊಂಡ ಸ್ಥಳಕ್ಕೆ ಹೋಗಲಾರದೆ ಸಾರಿಗೆ ಸಂಸ್ಥೆ ವಿರುದ್ದ ಕಿಡಿಕಾರಿದರು. ಬಳಿಕ ಕಂಡಕ್ಟರ್, ಬೇರೊಂದು ಬಸ್ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನ ಆ ಬಸ್​ಗೆ ಹತ್ತಿಸಿ ಕಳುಹಿಸಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 02, 2024 02:47 PM
Loading...
Unable to load recommendations.
Follow Us
ಅಮೀನ್​ ಸಾಬ್​

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.

Read More