ತಲ್ವಾರ್ನಿಂದ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ; ವಿಡಿಯೋ ವೈರಲ್
ಬಾಗಲಕೋಟೆ (Bagalakote) ತಾಲೂಕಿನ ಹವೇಲಿ ಗ್ರಾಮದಲ್ಲಿ ನಿನ್ನೆ(ಜೂ.01) ರಾತ್ರಿ ವ್ಯಕ್ತಿಯೋರ್ವ ತಲ್ವಾರ್(Talwar)ನಿಂದ ಕೇಕ್ ಕಟ್ ಮಾಡಿದ ಘಟನೆ ನಡೆದಿದೆ. ತಲ್ವಾರ್ ಹಿಡಿದು ಕೇಕ್ ಕತ್ತರಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಹಾಗೂ ಆಪ್ತರ ಸ್ಟೇಟಸ್ ಮೂಲಕ ವೈರಲ್ ಆಗಿದೆ.
ಬಾಗಲಕೋಟೆ, ಜೂ.02: ವ್ಯಕ್ತಿಯೋರ್ವ ತಲ್ವಾರ್(Talwar)ನಿಂದ ಕೇಕ್ ಕಟ್ ಮಾಡಿದ ಘಟನೆ ಬಾಗಲಕೋಟೆ (Bagalakote) ತಾಲೂಕಿನ ಹವೇಲಿ ಗ್ರಾಮದಲ್ಲಿ ನಿನ್ನೆ(ಜೂ.01) ರಾತ್ರಿ ನಡೆದಿದೆ. ರಮೇಶ್ ರಾಠೋಡ್ ಎಂಬುವವರು ತಮ್ಮ ಹುಟ್ಟುಹಬ್ಬವನ್ನ ತಲ್ವಾರ್ನಿಂದ ಕೇಕ್ನ್ನು ಕಟ್ ಮಾಡುವ ಮೂಲಕ ಆಚರಣೆ ಮಾಡಿದ್ದು, ತಲ್ವಾರ್ ಹಿಡಿದು ಕೇಕ್ ಕತ್ತರಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಹಾಗೂ ಆಪ್ತರ ಸ್ಟೇಟಸ್ ಮೂಲಕ ವೈರಲ್ ಆಗಿದೆ. ಸಧ್ಯ ಈ ಘಟನೆ ಚರ್ಚೆಗೆ ಗ್ರಾಸವಾಗಿದೆ. ಇಂತಹುದೇ ಘಟನೆ ಜನವರಿ 15 ರಂದು ವಿಜಯಪುರ ನಗರದ ಪೇಟಿ ಬಾವಡಿಯಲ್ಲಿ ನಡೆದಿತ್ತು. ಅಮನ್ ಲೋಣಿ ಎಂಬ ಯುವಕನೋರ್ವ ತನ್ನ ಜನ್ಮದಿನದ ಕೇಕ್ನ್ನು ತಲ್ವಾರ್ನಿಂದ ಕತ್ತರಿಸಿದ್ದ. ಇದಕ್ಕೆ ರೌಡಿ ಶೀಟರ್ ಮಹ್ಮದ್ ಸಾಜೀದ್ ಇನಾಮದಾರ್ ಸಾಥ್ ನೀಡಿದ್ದ. ಆ ಬಳಿಕ ಇದೀಗ ಹವೇಲಿ ಗ್ರಾಮದಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 02, 2024 06:31 PM
Latest Videos