ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ನದಿಯಂತಾದ ರಸ್ತೆಗಳು
ರಾಜ್ಯ ರಾಜಧಾನಿ ಬೆಂಗಳೂರಿ(Bengaluru)ನಲ್ಲಿ ನಿನ್ನೆ(ಜೂ.01)ಯಿಂದ ಮಳೆ(Rain)ಯ ಆರ್ಭಟ ಮುಂದುವರೆದಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಇಂದು(ಜೂ.02) ಕಳೆದ ಒಂದು ಗಂಟೆಯಿಂದ ಬಿಟ್ಟು ಬಿಡದೇ ಸುರಿದ ಮಳೆಗೆ ಕೆಆರ್ ಮಾರ್ಕೆಟ್ನ ರಸ್ತೆ ಜಲಾವೃತವಾಗಿದ್ದು, ರಸ್ತೆ ಮೇಲೆ ಹೊಳೆಯಂತೆ ನೀರು ಹರಿಯುತ್ತಿದೆ.
ಬೆಂಗಳೂರು, ಜೂ.02: ರಾಜ್ಯ ರಾಜಧಾನಿ ಬೆಂಗಳೂರಿ(Bengaluru)ನಲ್ಲಿ ನಿನ್ನೆ(ಜೂ.01)ಯಿಂದ ಮಳೆ(Rain)ಯ ಆರ್ಭಟ ಮುಂದುವರೆದಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಇಂದು(ಜೂ.02) ಕಳೆದ ಒಂದು ಗಂಟೆಯಿಂದ ಬಿಟ್ಟು ಬಿಡದೇ ಸುರಿದ ಮಳೆಗೆ ಕೆಆರ್ ಮಾರ್ಕೆಟ್ನ ರಸ್ತೆ ಜಲಾವೃತವಾಗಿದ್ದು, ರಸ್ತೆ ಮೇಲೆ ಹೊಳೆಯಂತೆ ನೀರು ಹರಿಯುತ್ತಿದೆ. ಆದರೂ ಮನೆ ತಲುಪಲು ರಸ್ತೆ ಮೇಲೆಯೇ ಹರಸಾಹಸ ಪಟ್ಟು ವಾಹನ ಸವಾರರು ಸಂಚರಿಸುತ್ತಿದ್ದಾರೆ. ಇನ್ನು ಕೆಪಿ ಅಗ್ರಹಾರದಲ್ಲಿ ಮಳೆ ಆರ್ಭಟಕ್ಕೆ ವಾಹನ ಸವಾರರು ಅಕ್ಷರಶಃ ಕಂಗಾಲಾಗಿದ್ದು, ಮಳೆಗೆ ಸೈಲೆನ್ಸರ್ ಒಳಗೆ ನಿರು ಹೋಗಿ ವಾಹನಗಳು ಸ್ಟಾರ್ಟ್ ಆಗದೆ ಬೈಕ್ ಸವಾರರು ಪರದಾಟ ನಡೆಸಿದ್ದಾರೆ.ಇತ್ತ ಗಾಳಿ ಸಹಿತ ಮಳೆಯಿಂದ ಬಸವೇಶ್ವರನಗರದಲ್ಲಿ ಮರದ ಕೊಂಬೆ ಮುರಿದುಬಿದಿದ್ದು, ಪಾನಿಪುರಿ ಅಂಗಡಿಗೆ ಹಾನಿಯಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos