Bengaluru Rain: ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ, ರಸ್ತೆಗಳು ಜಲಾವೃತ

ಕೆಲವು ದಿನಗಳಿಂದ ಶಾಂತವಾಗಿದ್ದ ವರುಣ, ಜೂನ್​ ತಿಂಗಳ ಮೊದಲ ದಿನವಾದ ನಿನ್ನೆ(ಜೂ.01)ಯಿಂದಲೇ ಬೆಂಗಳೂರಿ (Bengaluru)ಗೆ ಆಗಮಿಸಿದ್ದಾನೆ. ಅದರಂತೆ ಇಂದು ಕೂಡ ಮಳೆಯ ಅಬ್ಬರ ಮುಂದುವರೆದಿದ್ದು, ನಗರದ ಹಲವೆಡೆ ಗಾಳಿ ಸಹಿತ ಮಳೆ(Rain) ಶುರುವಾಗಿದೆ. ಮೆಜೆಸ್ಟಿಕ್​​, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ ಸೇರಿದಂತೆ ಭರ್ಜರಿ ಮಳೆಯಾಗುತ್ತಿದೆ. ಇದರಿಂದ ತಗ್ಗು ಪ್ರದೇಶದ ರಸ್ತೆಗಳು ಜಲಾವೃತವಾಗಿದೆ.

Bengaluru Rain: ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ, ರಸ್ತೆಗಳು ಜಲಾವೃತ
ಬೆಂಗಳೂರಿನಲ್ಲಿ ಮಳೆ
Follow us
|

Updated on:Jun 02, 2024 | 7:40 PM

ಬೆಂಗಳೂರು, ಜೂ.02: ಕೆಲವು ದಿನಗಳಿಂದ ಶಾಂತವಾಗಿದ್ದ ವರುಣ, ಜೂನ್​ ತಿಂಗಳ ಮೊದಲ ದಿನವಾದ ನಿನ್ನೆ (ಜೂ.01) ಯಿಂದಲೇ ಬೆಂಗಳೂರಿ(Bengaluru)ಗೆ ಆಗಮಿಸಿದ್ದಾನೆ. ಅದರಂತೆ ಇಂದು(ಜೂ.02) ಕೂಡ ಮುಂದುವರೆದಿದ್ದು, ನಗರದ ಹಲವೆಡೆ ಗಾಳಿ ಸಹಿತ ಮಳೆ(Rain) ಶುರುವಾಗಿದೆ. ಮೆಜೆಸ್ಟಿಕ್​​, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ವಿಧಾನಸೌಧ, ಟೌನ್​ಹಾಲ್​​, ಕೆ.ಆರ್​.ಮಾರ್ಕೆಟ್​ , ಕಾರ್ಪೊರೇಷನ್​​, ಶಿವಾಜಿನಗರ, ಯಲಹಂಕ ಸುತ್ತಮುತ್ತ ಭರ್ಜರಿ ಮಳೆ ಬಿಳುತ್ತಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಇತ್ತ ತಗ್ಗು ಪ್ರದೇಶದ ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ. ಜೊತೆಗೆ ಬಿರುಗಾಳಿಗೆ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿದೆ.

ನಿನ್ನೆ(ಜೂ.01)ಯಿಂದ ಐದು ದಿನ ನಗರದಲ್ಲಿ ಮಳೆ ಆಗಲಿದೆ ಎಂದು ಹವಾಮಾನ‌ ಇಲಾಖೆ ತಜ್ಞ ಸಿಎಸ್ ಪಾಟೀಲ್ ಹೇಳಿದ್ದರು. ಈಗಾಗಲೇ ನಿರೀಕ್ಷೆಗೂ ಮೊದಲೇ ಭಾರತದ ದಕ್ಷಿಣ ರಾಜ್ಯವಾದ ಕೇರಳವನ್ನು ನೈಋತ್ಯ ಮಾನ್ಸೂನ್ ಪ್ರವೇಶ  ಮಾಡಿದ್ದು, ಇವತ್ತು ಕರ್ನಾಟಕ ಗಡಿಗೆ ನೈಋತ್ಯ ಮಾನ್ಸೂನ್ ಪ್ರವೇಶ ಎಂಟ್ರಿ ಕೊಟ್ಟಿದೆ. ಜೊತೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಭಾಗದಲ್ಲಿ ಮಾನ್ಸೂನ್ ಪ್ರವೇಶವಾಗಿದೆ.

ಇದನ್ನೂ ಓದಿ:Monsoon: ಇಂದಿನಿಂದ ಕರ್ನಾಟಕದಲ್ಲಿ ಮುಂಗಾರು ಚುರುಕು: ಕರಾವಳಿ, ದಕ್ಷಿಣ ಒಳನಾಡಿನಲ್ಲಿ 1 ವಾರ ಭಾರೀ ಮಳೆ

ಹೀಗಾಗಿ ಇವತ್ತಿನಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಇಂದಿನಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಒಂದು ವಾರ ಭಾರೀ ಮಳೆ ಸಾಧ್ಯತೆ ಇದ್ದು, ನೈಋತ್ಯ ಮಾನ್ಸೂನ್ ಹಿನ್ನೆಲೆ ಇವತ್ತು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಯಚೂರು, ಕೊಪ್ಪಳ ಮಂಡ್ಯ, ಮೈಸೂರು ಸೇರಿದಂತೆ ಗುಡುಗು ಸಹಿತ ಭಾರೀ ಮಳೆ ಮೂನ್ಸುಚನೆ ನೀಡಲಾಗಿತ್ತು. 40-50 ಕಿಮೀ ವೇಗದ ಗಾಳಿಯೊಂದಿಗೆ ಮಳೆ ಸಾಧ್ಯತೆ ಇದೆ ಎಂದು ಮೊದಲೇ ಹವಾಮಾನ ಇಲಾಖೆ ತಿಳಿಸಿತ್ತು. ಅದರಂತೆ ನಗರದಲ್ಲಿ ಇನ್ನೂ 4ದಿನ ಗುಡುಗು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Sun, 2 June 24

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು