ಅನುಮತಿ ಪಡೆಯದೆ ಪಾರ್ಕಿಂಗ್​​ಗಾಗಿ ಮರ ಕತ್ತರಿಸಿದ ಮಹಿಳೆ; ಸಾರ್ವಜನಿಕರ ಆಕ್ರೋಶ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಬಿವೃದ್ಧಿ ಹೆಸರಲ್ಲಿ ಈಗಾಗಲೇ ಸಾವಿರಾರು ಮರಗಳಿಗೆ ಕತ್ತರಿ ಹಾಕಲಾಗುತ್ತಿದೆ. ಇಂತಹದರಲ್ಲಿ ಕೆಲ ಜನರು ತಮ್ಮ ಅನಕೂಲಕ್ಕೊಸ್ಕರ ಮರಗಳಿಗೆ ಆಸಿಡ್ ಹಾಕಿದ್ದಾಯ್ತು, ಇದೀಗ ಕಾರ್ ಪಾರ್ಕಿಂಗ್‌ಗೆ ಅಂತ ಬೃಹತ್ ಗಾತ್ರದ ಮರಕ್ಕೆ ಕತ್ತರಿ ಹಾಕಿರೋ ಆರೋಪ ಕೇಳಿ ಬಂದಿದೆ.

ಅನುಮತಿ ಪಡೆಯದೆ ಪಾರ್ಕಿಂಗ್​​ಗಾಗಿ ಮರ ಕತ್ತರಿಸಿದ ಮಹಿಳೆ; ಸಾರ್ವಜನಿಕರ ಆಕ್ರೋಶ
ಅನುಮತಿ ಪಡೆಯದೆ ಪಾರ್ಕಿಂಗ್​​ಗಾಗಿ ಮರ ಕತ್ತರಿಸಿದ ಮಹಿಳೆ
Follow us
Vinayak Hanamant Gurav
| Updated By: ಆಯೇಷಾ ಬಾನು

Updated on: Jun 02, 2024 | 3:13 PM

ಬೆಂಗಳೂರು, ಜೂನ್.02: ಆರ್.ಆರ್. ನಗರ ವಿಧಾನಸಭಾ ವ್ಯಾಪ್ತಿಯ ಮತ್ತಿಕೆರೆಯ ಜೆ.ಪಿ. ಪಾರ್ಕ್ ಬಳಿ ಇರುವ ಬೃಂದಾವನ ನಗರದ 5ನೇ ಕ್ರಾಸ್​ನಲ್ಲಿ ಬೃಹತ್ ಗಾತ್ರದ ಮರವಿತ್ತು. ಕಳೆದ 25 ವರ್ಷಕ್ಕೂ ಹಳೆಯದಾದ ಮರವನ್ನ ಇದೇ ಬಡಾವಣೆ ನಿವಾಸಿ ಜಯಮ್ಮ ಹೆಸರಿನ ಮಹಿಳೆ ಮನೆ ಮುಂದೆ ಕಾರ್ ನಿಲ್ಲಿಸಲು ಪಾರ್ಕಿಂಗ್ ಇಲ್ಲ ಅಂತ ಯಾರು ಇಲ್ಲದ ವೇಳೆ ಬೃಹತ್ ಗಾತ್ರದ ಮರಕ್ಕೆ ಕತ್ತರಿ ಹಾಕಿದ್ದಾಳೆ. ಮರ ಕಟ್ ಮಾಡಿ ಮರದ ದೊಡ್ಡ ದಿಮ್ಮಿಗಳನ್ನ ಕತ್ತರಿಸಿದ ಸ್ಥಳದಲ್ಲೆ ಹಾಕಿದ್ದು, ಅತ್ತ ಬಿಬಿಎಂಪಿ ಅರಣ್ಯ ಇಲಾಖೆ ಅನುಮತಿಯು ಇಲ್ಲದೇ ಮರ ಕತ್ತರಿಸಿರೋದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಒಂದು ಮರ ಕಡಿಯಬೇಕು ಅಂದರೆ ಬಿಬಿಎಂಪಿ, ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ಸಧ್ಯ ತನ್ನ ಸ್ವಹಿತಾಸಕ್ತಿಗೋಸ್ಕರ ಮರಕ್ಕೆ ಕೊಡಲಿ ಏಟು ಕೊಟ್ಟ ಜಯಮ್ಮ ನಾಪತ್ತೆಯಾಗಿದ್ದಾಳೆ. ಇನ್ನೂ ಪಾಲಿಕೆ ವ್ಯಾಪ್ತಿಯಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ. ಹೀಗಾಗಿ ಕರ್ನಾಟಕ್ ಪ್ರೀ ಪ್ರೀಜರವೇಷನ್ ಆಕ್ಟ್ 1976 ಪ್ರಕಾರ ಮರ ಕಡಿಯುವಂತಿಲ್ಲ. ಮರದ ಕುರಿತಂತೆ ಬಿಬಿಎಂಪಿ ಅರಣ್ಯ ಇಲಾಖೆ ಆಫಿಸರ್ಸ್ ಪರಿಶೀಲನೆ ನಡೆಸಿ, ಮರದ ಕಂಡಿಷನ್ ಕುರಿತು ವರದಿ ತಯಾರಿಸಿ ಉಚ್ಚ ನ್ಯಾಯಾಲಯದ ಆದೇಶ ಮೇರೆಗೆ ಟ್ರೀ ಎಕ್ಸಪರ್ಟ್‌ ಕಮಿಟಿಗೆ ವರದಿ ಸಲ್ಲಿಸಬೇಕು. ಬಳಿಕ ಮರ ಕತ್ತರಿಸಬೇಕಾ ಅಥವಾ ರೆಂಬೆಗಳು ಕತ್ತರಿಸಬೇಕಾ ಅನ್ನೋದು ನಿರ್ಧಾರವಾಗುತ್ತೆ. ಆದರೆ ಮರದ ರೆಂಬೆ ಕತ್ತರಿ ಹಾಕುತ್ತೇವೆ ಅಂತ 25 ವರ್ಷದ ಮರವನ್ನ ಬುಡ ಸಮೇತ ಕತ್ತರಿಸಿರೋದು ಒಂದು ಕ್ರೈಮ್ ಗೆ ಸಮ. ಹೀಗಾಗಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ತಗೆದುಕೊಳ್ಳಬೇಕು ಅಂತ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಓಹಿಯೋದ ಬರ್ತ್​ ಡೇ ಪಾರ್ಟಿಯಲ್ಲಿ 27 ಮಂದಿ ಮೇಲೆ ಸಾಮೂಹಿಕ ಗುಂಡಿನ ದಾಳಿ, ಓರ್ವ ಸಾವು

ಒಟ್ಟಿನಲ್ಲಿ ಮರಕ್ಕೆ ಕತ್ತರಿ ಹಾಕಿರೋ ಜಯಮ್ಮ ವಿರುದ್ಧ ಅರಣ್ಯ ಇಲಾಖೆ ಹಾಗೂ ಪಾಲಿಕೆ ಅರಣ್ಯ ವಿಭಾಗಕ್ಕೂ ಸ್ಥಳೀಯರು ದೂರು ಸಲ್ಲಿಸಿದ್ದಾರೆ. ದೂರು ಬಳಿಕ ಸ್ಥಳಕ್ಕೆ ಭೇಟಿ ನೀಡಿರೋ ಅಧಿಕಾರಿಗಳು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರು ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗ್ತಾರಾ ಇಲ್ವಾ ಎಂದು ಕಾದು ನೋಡಬೇಕು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ