ಬೆಂಗಳೂರಿನಲ್ಲಿ ಭಾರಿ ಮಳೆಗೆ ಹಲವೆಡೆ ಅವಾಂತರ: ಮೆಟ್ರೋ ಟ್ರ್ಯಾಕ್ ಮೇಲೆ ಬಿದ್ದ ಮರದ ಕೊಂಬೆ
ಬೆಂಗಳೂರು ನಗರದಲ್ಲಿ ಭಾರಿ ಮಳೆಯಿಂದ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದೆ. ಗಾಳಿ ಮಳೆಯಿಂದ ಮೆಟ್ರೋ ಟ್ರ್ಯಾಕ್ ಮೇಲೆ ಮರದ ಕೊಂಬೆ ಬಿದ್ದಿರುವಂತಹ ಘಟನೆ ಟ್ರಿನಿಟಿ, ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ನಡುವೆ ನಡೆದಿದೆ. ಸದ್ಯ ನೇರಳೆ ಮಾರ್ಗದಲ್ಲಿ ಬರುವ ಇಂದಿರಾನಗರದಿಂದ ವೈಟ್ಫೀಲ್ಡ್, ಎಂ.ಜಿ.ರಸ್ತೆಯಿಂದ ಚಲ್ಲಘಟ್ಟ ನಡುವೆ ಮಾತ್ರ ಮೆಟ್ರೋ ರೈಲು ಸಂಚಾರ ಇರುತ್ತದೆ.
ಬೆಂಗಳೂರು, ಜೂನ್ 2: ರಾಜ್ಯದಲ್ಲಿ ಮುಂಗಾರು ಮಾರುತ ಪ್ರವೇಶಿಸಿರುವ ಬೆನ್ನಲ್ಲೇ ಮಳೆ (Rain) ಅಬ್ಬರ ಶುರುವಾಗಿದೆ. ನಗರದಲ್ಲಿ ಭಾರಿ ಮಳೆಯಿಂದ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದೆ. ಗಾಳಿ ಮಳೆಯಿಂದ ಮೆಟ್ರೋ (Namma Metro) ಟ್ರ್ಯಾಕ್ ಮೇಲೆ ಮರದ ಕೊಂಬೆ ಬಿದ್ದಿರುವಂತಹ ಘಟನೆ ಟ್ರಿನಿಟಿ, ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ನಡುವೆ ನಡೆದಿದೆ. ಮಳೆಯಿಂದಾಗಿ ಮರದ ಕೊಂಬೆ ಬಿದ್ದ ಹಿನ್ನೆಲೆ ಸದ್ಯ ನೇರಳೆ ಮಾರ್ಗದಲ್ಲಿ ಬರುವ ಇಂದಿರಾನಗರದಿಂದ ವೈಟ್ಫೀಲ್ಡ್, ಎಂ.ಜಿ.ರಸ್ತೆಯಿಂದ ಚಲ್ಲಘಟ್ಟ ನಡುವೆ ಮಾತ್ರ ಮೆಟ್ರೋ ರೈಲು ಸಂಚಾರ ಇರುತ್ತದೆ.
ಈ ಕುರಿತಾಗಿ ಬೆಂಗಳೂರು ಸಂಚಾರ ಪೊಲೀಸ್ ಟ್ವೀಟ್ ಮಾಡಿದ್ದು ಸಂಚಾರ ಸಲಹೆ ನೀಡಿದ್ದಾರೆ. ವೆಬ್ ಜಂಕ್ಷನ್ ಬಳಿ ಮೆಟ್ರೋ ಟ್ರ್ಯಾಕ್ ಮೇಲೆ ದೊಡ್ಡ ಮರ ಬಿದ್ದ ಕಾರಣ ಟ್ರಿನಿಟಿ ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯವಿಟ್ಟು ಸಹಕರಿಸಿ ಎಂದು ಹೇಳಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸ್ ಟ್ವೀಟ್
ಸಂಚಾರ ಸಲಹೆ ವೆಬ್ ಜಂಕ್ಷನ್ ಬಳಿ ಮೆಟ್ರೋ ಟ್ರ್ಯಾಕ್ ಮೇಲೆ ದೊಡ್ಡ ಮರ ಬಿದ್ದ ಕಾರಣ ಟ್ರಿನಿಟಿ ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯವಿಟ್ಟು ಸಹಕರಿಸಿ. Traffic advisory Slow-moving traffic due to Big tree fallen on metro track near web junction towards Trinity circle. Kindly cooperate. pic.twitter.com/xmQCuvmn6c
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 2, 2024
ರಾಮಕೃಷ್ಣ ಆಶ್ರಮದ ಬಳಿ ಬೃಹತ್ ಮರ ಧರೆಗುಳಿದೆ. ಐ10 ಕಾರ್ ಮೇಲೆ ಬಿದ್ದಿದ್ದು ಸಂಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಳ್ಳಾರಿ ರಸ್ತೆ ಭಾಗದಲ್ಲಿ ಕೊಡಿಗೇಹಳ್ಳಿ, ಹೆಬ್ಬಾಳ ದವರೆಗೂ ಫುಲ್ ಜಾಮ್ ಆಗಿದೆ. ಗಂಟೆಗಟ್ಟಲೆ ವಾಹನ ಸವಾರರು ನಿಂತಲ್ಲೇ ನಿಂತಿದ್ದಾರೆ. ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದ್ದಾರೆ.
ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ, ರಸ್ತೆಗಳು ಜಲಾವೃತ
ನಗರದಲ್ಲಿ ಇಂದು ಸುರಿದ ಮಳೆಗೆ ಹಲವೆಡೆ ಮರಗಳು ನೆಲಕಚ್ಚಿವೆ. ಕೋರಮಂಗಲ ಬಳಿ ಲೈಟ್ ಕಂಬ ಮತ್ತು ಆಟೋ ಮೇಲೆ ಮರ ಮುರಿದು ಬಿದಿದ್ದು, ಅದೃಷ್ಟವಶಾತ್ ಆಟೋ ಚಾಲಕ ಪಾರಾಗಿದ್ದಾರೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:38 pm, Sun, 2 June 24