ಸಚಿವ ಜಾರ್ಜ್ ತೋಟಕ್ಕೆ ಹೋಗಿದ್ದ ಸಿದ್ದರಾಮಯ್ಯಗೂ ತಟ್ಟಿದ ಪವರ್ ಕಟ್ ಬಿಸಿ
ನಿನ್ನೆ(ಜೂ.01) ಎಸ್ಕಾರ್ಟ್ ಇಲ್ಲದೇ ಬೆಂಗಳೂರು ಉತ್ತರ ತಾಲೂಕಿನ ಹೆಸರುಘಟ್ಟ ಬಳಿಯ ಸಚಿವ ಕೆ.ಜೆ.ಜಾರ್ಜ್ ತೋಟದ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ತೆರಳಿದ್ದರು. ನಿನ್ನೆ ಭಾರಿ ಮಳೆಯಿಂದ ರಾತ್ರಿ 10 ಗಂಟೆಯಿಂದಲೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಸಮಸ್ಯೆ ಉಂಟಾಗಿದೆ.
ಬೆಂಗಳೂರು, ಜೂ.02: ನಿನ್ನೆ(ಜೂ.01) ಎಸ್ಕಾರ್ಟ್ ಇಲ್ಲದೇ ಬೆಂಗಳೂರು ಉತ್ತರ ತಾಲೂಕಿನ ಹೆಸರುಘಟ್ಟ ಬಳಿಯ ಸಚಿವ ಕೆ.ಜೆ.ಜಾರ್ಜ್ ತೋಟದ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ತೆರಳಿದ್ದರು. ನಿನ್ನೆಯಿಂದ ಜಾರ್ಜ್ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದ ಸಿಎಂ, ಇಂದು(ಜೂ.02) ಎಸ್ಕಾರ್ಟ್ ಮೂಲಕ ಬೆಂಗಳೂರಿಗೆ ಮರಳಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಾರ್ಜ್ಗೂ ಪವರ್ ಕಟ್(Power Cut) ಬಿಸಿ ತಟ್ಟಿದೆ. ನಿನ್ನೆ ಭಾರಿ ಮಳೆಯಿಂದ ರಾತ್ರಿ 10 ಗಂಟೆಯಿಂದಲೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಸಮಸ್ಯೆ ಉಂಟಾಗಿದೆ. ಬಳಿಕ ಜನರೇಟರ್ ಬಳಸಿ ಇಂಧನ ಸಚಿವರ ತೋಟದ ಮನೆಗೆ ವಿದ್ಯುತ್ ಪೂರೈಕೆ ಮಾಡಲಾಗಿದೆ. ಇನ್ನು ಬೆಸ್ಕಾಂ ಸಿಬ್ಬಂದಿ ಬೆಳಗ್ಗೆ 11 ಗಂಟೆಗೆ ವಿದ್ಯುತ್ ಲೈನ್ ಸರಿಪಡಿಸಿ ಇಂಧನ ಸಚಿವರ ತೋಟದ ಮನೆಗೆ ವಿದ್ಯುತ್ ಪೂರೈಕೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 02, 2024 07:50 PM
Latest Videos