ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಬೇಕು: ಬಸನಗೌಡ ಯತ್ನಾಳ್

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಬೇಕು: ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on:May 31, 2024 | 6:25 PM

ವಾಲ್ಮೀಕಿ ನಿಗಮದಲ್ಲಿ ₹ 187 ಕೋಟಿ ಹಗರಣ ನಡೆದಿದೆ, ಇದೇನು ಚಿಕ್ಕ ಹಗರಣವೇ? ಕೇವಲ ಸಚಿವ ಬಿ ನಾಗೇಂದ್ರ ಮಾತ್ರ ರಾಜೀನಾಮೆ ಸಲ್ಲಿಸಿದರೆ ಸಾಲದು, ಮುಖ್ಯಮಂತ್ರಿ ಸಿದ್ದಾರಮಯ್ಯ ಸಹ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು. ಹಗರಣದಲ್ಲಿ ದೆಹಲಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಪಾಲುದಾರಿಕೆಯನ್ನು ಅಲ್ಲಗಳೆಯಲಾಗದು ಎಂದು ಯತ್ನಾಳ್ ಹೇಳಿದರು.

ಕಲಬುರಗಿ: ಕೆಲ ದಿನಗಳ ಅಂತರದ ನಂತರ ಮಾಧ್ಯಮಗಳ ಮುಂದೆ ಹಾಜರಾದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಇಂದು ಕಲಬುಗಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದರು. ಕಲಬುರಗಿ ಉಸ್ತವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರನ್ನು ಟೀಕೆಗೆ ಗುರಿಮಾಡಿದ ಯತ್ನಾಳ್ ಪಿಎಸ್ಐ ನೇಮಕಾತಿ ಹಗರಣದಲ್ಲಿ (PSI Recruitment scam) ಗಂಟಲು ಹರಿಯುವಂತೆ ಚೀರಾಡುತ್ತಿದ್ದ ಖರ್ಗೆಯವರ ಪೌರುಷ ಎಲ್ಲಿ? ಅವರ ವೀರಭದ್ರ ಅವತಾರ ಕಾಣೆಯಾಗಿದೆ, ಅವರು ಸಹ ಕಾಣುತ್ತಿಲ್ಲ, ಧ್ಯಾನಕ್ಕೇನಾದರೂ ಕುಳಿತಿದ್ದಾರೆಯೇ? ಎಂದು ಯತ್ನಾಳ್ ಪ್ರಶ್ನಿಸಿದರು. ಬಿಜೆಪಿ 40 ಪರ್ಸೆಂಟ್ ಕಮೀಶನ್ ಸರ್ಕಾರ ಅನ್ನುತ್ತಿದ್ದ ಕಾಂಗ್ರೆಸ್ ನಾಯಕರು ವಾಲ್ಮೀಕಿ ಅಭಿವೃದ್ಧಿ ನಿಗಮದ ಆಧೀಕ್ಷಕ ಮತ್ತು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರೂ ಸುಮ್ಮನಿರೋದು ಯಾಕೆ ಅಂತ ಕೇಳಿದರು. ವಾಲ್ಮೀಕಿ ನಿಗಮದಲ್ಲಿ ₹ 187 ಕೋಟಿ ಹಗರಣ ನಡೆದಿದೆ, ಇದೇನು ಚಿಕ್ಕ ಹಗರಣವೇ? ಕೇವಲ ಸಚಿವ ಬಿ ನಾಗೇಂದ್ರ ಮಾತ್ರ ರಾಜೀನಾಮೆ ಸಲ್ಲಿಸಿದರೆ ಸಾಲದು, ಮುಖ್ಯಮಂತ್ರಿ ಸಿದ್ದಾರಮಯ್ಯ ಸಹ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು. ಹಗರಣದಲ್ಲಿ ದೆಹಲಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಪಾಲುದಾರಿಕೆಯನ್ನು ಅಲ್ಲಗಳೆಯಲಾಗದು ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕಾಂಗ್ರೆಸ್​ ಸರ್ಕಾರದಲ್ಲಿ ಶೆ.50ರಷ್ಟು ಕಮಿಷನ್​: ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ

Published on: May 31, 2024 05:44 PM