ಸಿಟಿ ರವಿಗೆ ಒಲಿದ ಪರಿಷತ್ ಟಿಕೆಟ್; ಏನಂದ್ರು ಗೊತ್ತಾ?
ವಿಧಾನ ಪರಿಷತ್ ಚುನಾವಣೆಗೆ ನಾಳೆ(ಜೂ.03) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಒಂದು ದಿನದ ಮುಂಚಿತವಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಇದರಲ್ಲಿ ಚಿಕ್ಕಮಗಳೂರಿನ ಮಾಜಿ ಶಾಸಕ ಸಿಟಿ ರವಿ ಅವರಿಗೆ ಅವಕಾಶ ಸಿಕ್ಕಿದ್ದು, ಈ ಹಿನ್ನಲೆ ಅವರ ಬೆಂಬಲಿಗರು ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಚಿಕ್ಕಮಗಳೂರು, ಜೂ.02: ಮಾಜಿ ಶಾಸಕ ಸಿಟಿ ರವಿ ಅವರಿಗೆ ವಿಧಾನ ಪರಿಷತ್(Legislative Council) ಟಿಕೆಟ್ ಘೋಷಣೆಯಾಗಿದೆ. ಈ ಹಿನ್ನೆಲೆ ಅವರ ಬೆಂಬಲಿಗರು ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ(CT Ravi)ಗೆ ಭವ್ಯ ಸ್ವಾಗತ ಮಾಡಿದ್ದು, ರವಿ ಅವರು ಚಿಕ್ಕಮಗಳೂರಿಗೆ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿ.ಟಿ. ರವಿ ಅವರು, ‘95ನೇ ಇಸವಿಯಿಂದ ನಾನು ಯಾವುದನ್ನು ಕೇಳಿ ಪಡೆದಿಲ್ಲ. ಪಕ್ಷದ ಕೆಲಸ ಮಾಡುವುದಷ್ಟೇ ನನ್ನ ಕೆಲಸ. ನನಗೇನು ಬೇಕು ಅದನ್ನ ಪಕ್ಷ ನಿರ್ಧಾರ ಮಾಡುತ್ತದೆ. ಇದೀಗ ಪರಿಷತ್ ಟಿಕೆಟ್ ನೀಡಿದ್ದಕ್ಕೆ ರಾಷ್ಟ್ರ ಹಾಗೂ ರಾಜ್ಯ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾಳೆ(ಜೂ.03) ಮತದಾನ ಮಾಡಿ ಬೆಂಗಳೂರಿಗೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಸ್ಷಷ್ಟನೆ ನೀಡಿದರು. ಈ ಬಾರಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಸಿಟಿ ರವಿ ಅವರು ಸೋಲು ಕಂಡಿದ್ದರು. ಇದೀಗ ವಿಧಾನ ಪರಿಷತ್ ಟಿಕೆಟ್ ಒಲಿದು ಬಂದಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ