ಚಾಮುಂಡಿ ಬೆಟ್ಟದಲ್ಲಿ ನಡೆದ ಮಹಾರಥೋತ್ಸವದಲ್ಲಿ ಯದುವೀರ್ ಕುಟುಂಬ ಭಾಗಿ, ರಾಜ್ಯದ ಸುಭಿಕ್ಷೆಗಾಗಿ ಪ್ರಾರ್ಥನೆ
ಮಹಾರಥೋತ್ಸವದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯದುವೀರ್, ಕಾರ್ಯಕ್ರಮಗಳೆಲ್ಲ ಒಂದೊಂದಾಗಿ ನೆರವೇರುತ್ತಿವೆ, ಅಮ್ಮನವರ ದರ್ಶನಕ್ಕಾಗಿ ಏರ್ಪಾಟು ಮಾಡಲಾಗಿದೆ. ರಾಜ್ಯ ಮತ್ತು ದೇಶದ ಸುಭಿಕ್ಷೆ, ಉತ್ತಮ ಮಳೆ ಬೆಳೆ ಹಾಗೂ ಅಭಿವೃದ್ಧಿಗಾಗಿ ಅಮ್ಮನವರನ್ನು ಬೇಡಿಕೊಂಡಿದ್ದೇನೆ ಎಂದು ಹೇಳಿದರು.
ಮೈಸೂರು: ನಾಡದೇವತೆ ಚಾಮುಂಡೇಶ್ವರಿ (goddess Chamundeshwari) ಸಮ್ಮುಖದಲ್ಲಿ ನಗರದಲ್ಲಿ ನಡೆದ ನಾಡಹಬ್ಬ ದಸರಾ ಮಹೋತ್ಸವ ನಡೆದ ಬಳಿಕ ಸಂಪ್ರದಾಯದಂತೆ ಇಂದು ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಮಹಾರಥೋತ್ಸವ (Maharahtotsava) ನಡೆಯಿತು. ಕಾರ್ಯಕ್ರಮದಲ್ಲಿ ಹಿಂದಿನ ಒಡೆಯರ್ ಅರಸೊತ್ತಿಗೆಯ ವಂಶಸ್ಥರಾದ ರಾಜಮಾತೆ ಪ್ರಮೋದಾ ದೇವಿ (Rajamatha Pramoda Devi), ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wodeyar), ಅವರ ಧರ್ಮಪತ್ನಿ ತ್ರಿಷಿಕಾ ದೇವಿ ಯದುವೀರ್ ಮತ್ತು ಇವರಿಬ್ಬರ ಪುತ್ರ ಆದ್ಯವೀರ್ ಪಾಲ್ಗೊಂಡರು. ಮಹಾರಥೋತ್ಸವದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯದುವೀರ್, ಕಾರ್ಯಕ್ರಮಗಳೆಲ್ಲ ಒಂದೊಂದಾಗಿ ನೆರವೇರುತ್ತಿವೆ, ಅಮ್ಮನವರ ದರ್ಶನಕ್ಕಾಗಿ ಏರ್ಪಾಟು ಮಾಡಲಾಗಿದೆ. ರಾಜ್ಯ ಮತ್ತು ದೇಶದ ಸುಭಿಕ್ಷೆ, ಉತ್ತಮ ಮಳೆ ಬೆಳೆ ಹಾಗೂ ಅಭಿವೃದ್ಧಿಗಾಗಿ ಅಮ್ಮನವರನ್ನು ಬೇಡಿಕೊಂಡಿದ್ದೇನೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 26, 2023 12:20 PM