Mysore Dasara: ಉತ್ಸವದ ಕೊನೆಯ ದಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ರನ್ನು ರಾಜಾಪೋಷಾಕಿನಲ್ಲಿ ನೋಡೋದು ಒಂದು ಸುಂದರ ದೃಶ್ಯ!

Mysore Dasara: ಉತ್ಸವದ ಕೊನೆಯ ದಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ರನ್ನು ರಾಜಾಪೋಷಾಕಿನಲ್ಲಿ ನೋಡೋದು ಒಂದು ಸುಂದರ ದೃಶ್ಯ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 24, 2023 | 2:41 PM

ಯದುವೀರ್ ದಸರಾ ಉತ್ಸವದ ಕೊನೆಯ ದಿನ ರಾಜರ ಪೋಷಾಕು ಧರಿಸಿ ಪಾಲ್ಗೊಳ್ಳುತ್ತಾರೆ. ಆ ದಿರಿಸಿನಲ್ಲಿ ಅವರು ರಾಜಗಾಂಭೀರ್ಯದೊಂದಿಗೆ ನಡೆದು ಬರುವ ದೃಶ್ಯ ನೋಡುಗರ ಮನಸ್ಸಿಗೆ ಮುದ ನೀಡುತ್ತದೆ. ಅವರು ಪಲ್ಲಕ್ಕಿಗೆ ಮಿಲಿಟರಿ ಮಾದರಿ ವಂದನೆ ಸಲ್ಲಿಸುವಾಗ ಆಸ್ಥಾನಿಕರ ಪೋಷಾಕಿನಲ್ಲಿರುವ ಅರಮನೆಯ ಜನ ಅವರ ಸುತ್ತ ನೆರೆದಿರುತ್ತಾರೆ

ಮೈಸೂರು: ನಗರದ ದಸರಾ ಉತ್ಸವದ ಅತ್ಯಂತ ಪ್ರಮುಖ ಅಂಶ ಜಂಬೂ ಸವಾರಿಗೆ (Jumbo Savari) ಕ್ಷಣಗಣನೆ ಶುರುವಾಗಿದೆ. ಸಾಂಸ್ಕೃತಿಕ ನಗರಿಯಲ್ಲಿ ಅಂಬಾರಿ ಹೊತ್ತು ಬರುವ ಅಭಿಮನ್ಯು (Abhimanyu) ಮತ್ತು ಅವನ ಜೊತೆ ಸಾಗುವ ಸರ್ವಾಲಂಕೃತ ಗಜಪಡೆಯ (platoon of elephants) ದೃಶ್ಯವನ್ನು ಕಣ್ತುಂಬಿಕೊಳ್ಳಲು ವಿದೇಶಿಯರೂ ಸೇರಿದಂತೆ ದೇಶದ ನಾನಾ ಭಾಗಗಳಿಂದ ಆಗಮಿಸಿರುವ ಲಕ್ಷಾಂತರ ಜನ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಅದಕ್ಕೂ ಮೊದಲ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದಿನ ಒಡೆಯರ್ ಅರಸೊತ್ತಿಗೆಯ ಪ್ರತಿನಿಧಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krushna Dutta Chamaraja Wodeyar) ಅರಮನೆಯ ಚಿನ್ನದ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು. ಯದುವೀರ್ ದಸರಾ ಉತ್ಸವದ ಕೊನೆಯ ದಿನ ರಾಜರ ಪೋಷಾಕು ಧರಿಸಿ ಪಾಲ್ಗೊಳ್ಳುತ್ತಾರೆ. ಆ ದಿರಿಸಿನಲ್ಲಿ ಅವರು ರಾಜಗಾಂಭೀರ್ಯದೊಂದಿಗೆ ನಡೆದು ಬರುವ ದೃಶ್ಯ ನೋಡುಗರ ಮನಸ್ಸಿಗೆ ಮುದ ನೀಡುತ್ತದೆ. ಅವರು ಪಲ್ಲಕ್ಕಿಗೆ ಮಿಲಿಟರಿ ಮಾದರಿ ವಂದನೆ ಸಲ್ಲಿಸುವಾಗ ಆಸ್ಥಾನಿಕರ ಪೋಷಾಕಿನಲ್ಲಿರುವ ಅರಮನೆಯ ಜನ ಅವರ ಸುತ್ತ ನೆರೆದಿರುತ್ತಾರೆ. ಯದುವೀರ್ ವಂದನೆ ಸಲ್ಲಿಸಿದ ಬಳಿಕ ಪಲ್ಲಕ್ಕಿಯಲ್ಲಿದ್ದ ಖಡ್ಗ, ಭರ್ಚಿ ಮೊದಲಾವುಗಳನ್ನು ಅವರಿಗೆ ಒಂದೊಂದಾಗಿ ನೀಡಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ