Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ಉತ್ಸವ ಅಂಗವಾಗಿ ನಡೆಯುವ ವಜ್ರಮುಷ್ಠಿ ಕಾಳಗ ರೋಚಕ ಮತ್ತು ಅಪಾಯಕಾರಿ, ಆದರೆ ಜಟ್ಟಿಗಳು ಅಳಕುವುದಿಲ್ಲ

ದಸರಾ ಉತ್ಸವ ಅಂಗವಾಗಿ ನಡೆಯುವ ವಜ್ರಮುಷ್ಠಿ ಕಾಳಗ ರೋಚಕ ಮತ್ತು ಅಪಾಯಕಾರಿ, ಆದರೆ ಜಟ್ಟಿಗಳು ಅಳಕುವುದಿಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 24, 2023 | 12:58 PM

ವಜ್ರಮುಷ್ಠಿ ಕಾಳಗದಲ್ಲಿ ಈ ಬಾರಿ ಚನ್ನಪ್ಪಟ್ಟಣ ಪ್ರವೀಣ್ ಜಟ್ಟಿ, ಮೈಸೂರು ಪ್ರದೀಪ್ ಜಟ್ಟಿ ಮತ್ತು ಬೆಂಗಳೂರು ಪ್ರಮೋದ್ ಜಟ್ಟಿ ಹಾಗೂ ಚಾಮರಾಜನಗರ ವೆಂಕಟೇಶ್ ಜಟ್ಟಿ ನಡುವೆ ಕಾಳಗ ನಡೆಯಲಿವೆ. ಕಾಳಗಕ್ಕೆ ಮೊದಲು ಜಟ್ಟಿಗಳನ್ನು ಹೇಗೆ ರೆಡಿ ಮಾಡಲಾಗುತ್ತದೆ ಅನ್ನೋದನ್ನು ವಿಡಿಯೋದಲ್ಲಿ ನೋಡಬಹುದು.

ಮೈಸೂರು: ಜಗದ್ವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ (Mysore Dasara Utsav) ನಡೆಯುನ ಕಾರ್ಯಕ್ರಮಗಳೆಲ್ಲ ತಮ್ಮದೇ ಆದ ವೈಶಿಷ್ಟ್ಯ ಹೊಂದಿರುತ್ತವೆ. ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆ, ಮನರಂಜನೆ, ಕವನಗಳ ಉವಾಚ, ಸಂಗೀತ ರಸಮಂಜರಿ, ಯುವ ದಸರಾ ಜಂಬೂ ಸವಾರಿ ಮೊದಲಾದ ಹತ್ತು ಹಲವು ಕಾರ್ಯಕ್ರಮಗಳು ಇಲ್ಲಿನ ದಸರಾ ಉತ್ಸವದಲ್ಲಿ ನಡೆಯುತ್ತವೆ. ಕ್ರೀಡೆಗಳಲ್ಲಿ ವಜ್ರಮುಷ್ಠಿ ಕಾಳಗವೂ (Vajramushti Kalaga) ದಸರಾ ಉತ್ಸವದ ಪ್ರಮುಖ ಆಕರ್ಷಣೆ. ವಜ್ರಮುಷ್ಠಿ ಕಾಳಗ ರೋಚಕ, ರೋಮಾಂಚಕ ಮತ್ತು ಅಪಾಯಕಾರಿಯೂ ಹೌದು. ಜಟ್ಟಿಗಳು ಕೈಗೆ ಲೋಹದ ಅಚ್ಚನ್ನು ಧರಸಿ ಕಾದಾಡುತ್ತಾರೆ. ಅರಮನೆ ಕಲ್ಯಾಣ ಮಂಟಪದ (palace kalyana mantapa) ಮುಂಭಾಗದ ಕರಿಕಲ್ಲು ತೊಟ್ಟಿಯಲ್ಲಿ ನಡೆಯುವ ವಜ್ರಮುಷ್ಠಿ ಕಾಳಗದಲ್ಲಿ ಈ ಬಾರಿ ಚನ್ನಪ್ಪಟ್ಟಣ ಪ್ರವೀಣ್ ಜಟ್ಟಿ, ಮೈಸೂರು ಪ್ರದೀಪ್ ಜಟ್ಟಿ ಮತ್ತು ಬೆಂಗಳೂರು ಪ್ರಮೋದ್ ಜಟ್ಟಿ ಹಾಗೂ ಚಾಮರಾಜನಗರ ವೆಂಕಟೇಶ್ ಜಟ್ಟಿ ನಡುವೆ ಕಾಳಗ ನಡೆಯಲಿವೆ. ಕಾಳಗಕ್ಕೆ ಮೊದಲು ಜಟ್ಟಿಗಳನ್ನು ಹೇಗೆ ರೆಡಿ ಮಾಡಲಾಗುತ್ತದೆ ಅನ್ನೋದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ