ಬಿಗ್ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್ಗೆ ತಲೆತಗ್ಗಿಸಿದ ರಜತ್
Bigg Boss Kannada season 11: ಬಿಗ್ಬಾಸ್ ಕನ್ನಡ 11 ಫಿನಾಲೆ ವಾರ ಚಾಲ್ತಿಯಲ್ಲಿದೆ. ಮನೆಯಲ್ಲಿರುವವರು ಫಿನಾಲೆ ಗೆಲ್ಲುವುದು ಹೇಗೆಂಬ ಲೆಕ್ಕಾಚಾರದಲ್ಲಿರುವಾಗಲೇ ಬಿಗ್ಬಾಸ್ ಮನೆಗೆ ಝಾನ್ಸಿಯ ಎಂಟ್ರಿ ಆಗಿದೆ. ಝಾನ್ಸಿಯ ಆವಾಜ್ಗೆ ಅಗ್ರೆಸ್ಸಿವ್ ಆಟಗಾರ ರಜತ್ ಬೆಕ್ಕಿನ ಮರಿಯಂತಾಗಿದ್ದಾರೆ. ಅಷ್ಟಕ್ಕೂ ಯಾರು ಈ ಝಾನ್ಸಿ?
ಬಿಗ್ಬಾಸ್ ಮನೆಗೆ ಝಾನ್ಸಿ ಕಾಲಿಟ್ಟಿದ್ದಾಳೆ. ಫಿನಾಲೆ ವಾರದ ಲೆಕ್ಕಾಚಾರದಲ್ಲಿದ್ದ ಮನೆ ಮಂದಿಗೆ ಝಾನ್ಸಿಯ ಎಂಟ್ರಿ ಶಾಕ್ ನೀಡಿದೆ. ಈ ಝಾನ್ಸಿಗೆ ಗಂಡಸರ ನೆರಳು ಕಂಡರೆ ಆಗುವುದಿಲ್ಲ. ಗಂಡಸರನ್ನು ತುಳಿಯುವುದೇ ಝಾನ್ಸಿಯ ಹಾಬಿ. ತನ್ನ ಮುಂದೆ ಎಲ್ಲ ಗಂಡಸರು ತಲೆ ತಗ್ಗಿಸಿ ಮಾತನಾಡಬೇಕು ಎಂಬುದು ಝಾನ್ಸಿಯ ಆಗ್ರಹ. ಝಾನ್ಸಿ ಮುಂದೆ ಬಾಲ ಬಿಚ್ಚಲು ಪ್ರಯತ್ನಿಸಿದ ರಜತ್ಗೆ ಸರಿಯಾಗಿ ಆವಾಜ್ ಹಾಕಿದ್ದಾಳೆ ಝಾನ್ಸಿ. ಮೂರು ಎಣಿಸುವುದರೊಳಗೆ ತಲೆ ತಗ್ಗಿಸಬೇಕು ಎಂದು ಝಾನ್ಸಿ ನೀಡಿದ ಆದೇಶವನ್ನು ಕೈಕಟ್ಟಿ ಪಾಲಿಸಿದ್ದಾರೆ ರಜತ್. ಅಷ್ಟಕ್ಕೂ ಈ ಝಾನ್ಸಿ ಯಾರು? ಇಲ್ಲಿದೆ ನೋಡಿ ಪ್ರೋಮೋ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ