ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇದೆ. ಇತ್ತೀಚೆಗೆ ಉಪೇಂದ್ರ ನಟನೆಯ ‘ಯುಐ’ ಸಿನಿಮಾಗೆ ಸುದೀಪ್, ಯಶ್ ಸೇರಿದಂತೆ ಹಲವು ಸ್ಟಾರ್ಗಳು ಸಪೋರ್ಟ್ ಮಾಡಿದ್ದರು. ಈಗ ಸುದೀಪ್ ಅಭಿನಯದ ‘ಮ್ಯಾಕ್ಸ್’ ಬಿಡುಗಡೆ ಆಗಿದ್ದು, ಯಶ್ ಅಭಿಮಾನಿಗಳು ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಸಿನಿಮಾ ನೋಡಿದ ನಂತರ ಪ್ರಮಾಣಿಕ ವಿಮರ್ಶೆ ತಿಳಿಸಿದ್ದಾರೆ.
ಯಶ್ ಅಭಿಮಾನಿಗಳು ಕೂಡ ‘ಮ್ಯಾಕ್ಸ್’ ಸಿನಿಮಾವನ್ನು ನೋಡಿ ಕಿಚ್ಚ ಸುದೀಪ್ ಅವರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರಬಂದ ಬಳಿಕ ಯಶ್ ಫ್ಯಾನ್ಸ್ ಪ್ರಾಮಾಣಿಕವಾಗಿ ವಿಮರ್ಶೆ ಹಂಚಿಕೊಂಡಿದ್ದಾರೆ. ‘ಮ್ಯಾಕ್ಸ್’ ಬಹುತೇಕ ಎಲ್ಲ ಕಡೆಗಳಲ್ಲಿ ಇಂದು (ಡಿ.25) ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ‘ನಮಗೆ ಹಳೇ ಸುದೀಪ್ ಕಾಣಿಸಿದರು’ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.