ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ

Updated on: May 21, 2025 | 6:47 PM

Yash mother: ನಟ ಯಶ್ ಅವರ ತಾಯಿ ಪುಷ್ಪ ಸ್ವಂತದ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ‘ಕೊತ್ತಲವಾಡಿ’ ಹೆಸರಿನ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಯಶ್ ಅವರ ತಾಯಿ ಅವರಿಗೆ ಶಿವರಾಜ್ ಕುಮಾರ್ ಅವರ ಸಿನಿಮಾ ನಿರ್ಮಾಣ ಮಾಡುವ ಆಸೆಯಂತೆ. ಸ್ವತಃ ಪುಷ್ಪ ಅವರು ಡಾ ರಾಜ್​ಕುಮಾರ್ ಅವರ ಅಭಿಮಾನಿಯಂತೆ.

ನಟ ಯಶ್ (Yash) ಅವರ ತಾಯಿ ಪುಷ್ಪ ಸ್ವಂತದ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ‘ಕೊತ್ತಲವಾಡಿ’ ಹೆಸರಿನ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಪೃಥ್ವಿ ಅಂಬರ್ ನಾಯಕ. ಸಿನಿಮಾದ ಟೀಸರ್ ಅನ್ನು ಇಂದು (ಮೇ 21) ಬಿಡುಗಡೆ ಮಾಡಲಾಗಿದೆ. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಯಶ್ ತಾಯಿ ಮಾತನಾಡಿದ್ದು, ತಾವು ಅಣ್ಣಾವ್ರ ಅಭಿಮಾನಿ ಆಗಿದ್ದು, ಅವರ ಪುತ್ರ ಶಿವರಾಜ್ ಕುಮಾರ್ ಅವರ ಸಿನಿಮಾ ನಿರ್ಮಾಣ ಮಾಡುವ ಆಸೆ ಇದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ