ಆಪ್ತ ಸಹಾಯಕನ ಮಗುವಿಗೆ ಚಿನ್ನದ ಸರ ನೀಡಿದ ಯಶ್​-ರಾಧಿಕಾ ಪಂಡಿತ್​ ದಂಪತಿ

Updated on: Feb 12, 2024 | 5:26 PM

ಕಳೆದ 10 ವರ್ಷಗಳಿಂದ ಚೇತನ್​ ಅವರು ‘ರಾಕಿಂಗ್​ ಸ್ಟಾರ್​’ ಯಶ್​ಗೆ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಚೇತನ್​ ಅವರ ಮನೆಗೆ ಯಶ್​ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್​ ಭೇಟಿ ನೀಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದ್ದು, ಫ್ಯಾನ್ಸ್​ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆಪ್ತ ಸಹಾಯಕನ ಮಗುವಿಗೆ ಬಂಗಾರದ ಸರವನ್ನು ಯಶ್​ ಉಡುಗೊರೆಯಾಗಿ ನೀಡಿದ್ದಾರೆ.

‘ರಾಕಿಂಗ್​ ಸ್ಟಾರ್​’ ಯಶ್​ (Yash) ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ತಾವು ಸಾಗಿ ಬಂದ ಹಾದಿಯನ್ನು ಅವರು ಮರೆತಿಲ್ಲ. ತಮ್ಮ ಜೊತೆ ಇರುವವರ ಬಗ್ಗೆ ಅವರಿಗೆ ಅಪಾರ ಪ್ರೀತಿ-ಕಾಳಜಿ ಇದೆ. ಅದಕ್ಕೆ ಈ ಘಟನೆಯೇ ಸಾಕ್ಷಿ. ಕಳೆದ ಹತ್ತು ವರ್ಷಗಳಿಂದ ತಮ್ಮ ಆಪ್ತ ಸಹಾಯಕನಾಗಿ (Yash PA) ಕೆಲಸ ಮಾಡುತ್ತಿರುವ ಚೇತನ್​ ಅವರ ಮನೆಗೆ ಯಶ್​ ನೀಡಿದ್ದಾರೆ. ಅವರಿಗೆ ಪತ್ನಿ ರಾಧಿಕಾ ಪಂಡಿತ್​ (Radhika Pandit) ಕೂಡ ಸಾಥ್​ ನೀಡಿದ್ದಾರೆ. ಆಪ್ತ ಸಹಾಯಕನ ಮಗುವನ್ನು ನೋಡಿ, ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ ಈ ದಂಪತಿ. ಯಶ್​ ಅವರ ಫ್ಯಾನ್ಸ್​ ಪೇಜ್​ಗಳಲ್ಲಿ ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಸದ್ಯ ಯಶ್​ ಅವರು ‘ಟಾಕ್ಸಿಕ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ಬ್ಯುಸಿ ಶೆಡ್ಯೂಲ್​ ನಡುವೆಯೂ ಅವರು ಸಮಯ ಮಾಡಿಕೊಂಡು ಆಪ್ತ ಸಹಾಯಕನ ಮನೆಗೆ ಭೇಟಿ ನೀಡಿದ್ದಾರೆ. ಅವರ ಈ ಗುಣವನ್ನು ಫ್ಯಾನ್ಸ್​ ಹೊಗಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More