‘ಗರಡಿ’ ಸಿನಿಮಾ ಅವಕಾಶ ಸಿಕ್ಕಿದ್ದು ದರ್ಶನ್ ಅವರಿಂದ: ಯಶಸ್ ಸೂರ್ಯ

‘ಗರಡಿ’ ಸಿನಿಮಾ ಅವಕಾಶ ಸಿಕ್ಕಿದ್ದು ದರ್ಶನ್ ಅವರಿಂದ: ಯಶಸ್ ಸೂರ್ಯ

ಮಂಜುನಾಥ ಸಿ.
|

Updated on:Nov 09, 2023 | 11:03 PM

Yashas Surya: ಯೋಗರಾಜ್ ಭಟ್ ನಿರ್ದೇಶನ ಮಾಡಿರುವ 'ಗರಡಿ' ಸಿನಿಮಾ ನವೆಂಬರ್ 10ರಂದು ತೆರೆಗೆ ಬರಲಿದೆ. ಬಿಡುಗಡೆ ಆಗಲಿರುವ ತಮ್ಮ ಸಿನಿಮಾದ ಬಗ್ಗೆ ಮಾತನಾಡಿರುವ ನಟ ಯಶಸ್ ಸೂರ್ಯ, 'ಗರಡಿ' ಸಿನಿಮಾದ ಅವಕಾಶ ಸಿಗಲು ನಟ ದರ್ಶನ್ ಕಾರಣ ಎಂದಿದ್ದಾರೆ.

ಯೋಗರಾಜ್ ಭಟ್ (Yogaraj Bhatt) ನಿರ್ದೇಶಿಸಿ, ಯಶಸ್ ಸೂರ್ಯ (Yashas Surya) ನಾಯಕರಾಗಿ ನಟಿಸಿರುವ ‘ಗರಡಿ’ ಸಿನಿಮಾ ನವೆಂಬರ್ 10ರಂದು ತೆರೆಗೆ ಬರಲಿದೆ. ಬಿಡುಗಡೆ ಆಗಲಿರುವ ತಮ್ಮ ಸಿನಿಮಾದ ಬಗ್ಗೆ ಮಾತನಾಡಿರುವ ನಟ ಯಶಸ್ ಸೂರ್ಯ, ‘ಗರಡಿ’ ಸಿನಿಮಾದ ಅವಕಾಶ ಸಿಗಲು ನಟ ದರ್ಶನ್ ಕಾರಣ ಎಂದಿದ್ದಾರೆ. ಇತ್ತೀಚೆಗೆ ರಾಣೆಬೆನ್ನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹ ನಟ ಯಶಸ್ ಸೂರ್ಯ ಇದೇ ಮಾತಾಡಿದ್ದರು. ‘ಗರಡಿ’ ಸಿನಿಮಾದಲ್ಲಿ ನಟ ದರ್ಶನ್ ಅತಿಥಿ ಪಾತ್ರದಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಬಿಸಿ ಪಾಟೀಲ್ ನಿರ್ಮಾಣ ಮಾಡಿರುವ ಜೊತೆಗೆ ನಟನೆ ಸಹ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 09, 2023 10:55 PM