AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗರಡಿ’ ಸಿನಿಮಾ ಪ್ರಮೋಷನ್​ಗೆ ಯೋಗರಾಜ್ ಭಟ್ ಪ್ರಕಟಿಸಿದರು ಹೊಸ ನ್ಯೂಸ್ ಪೇಪರ್

‘ಗರಡಿ’ ಚಿತ್ರ ಬಿಸಿ ಪಾಟೀಲ್ ಬ್ಯಾನರ್ ಮೂಲಕ ಮೂಡಿ ಬರುತ್ತಿದೆ. ನವೆಂಬರ್ 10ರಂದು ಸಿನಿಮಾ ರಿಲೀಸ್ ಆಗಲಿದೆ. ನವೆಂಬರ್ 1ರಂದು ರಾಣಿಬೆನ್ನೂರಿನಲ್ಲಿ ದರ್ಶನ್ ಅವರು ಈ ಚಿತ್ರದ ಟ್ರೇಲರ್​ನ ರಿಲೀಸ್ ಮಾಡಲಿದ್ದಾರೆ. ಈ ಚಿತ್ರಕ್ಕೆ ರಿಷಬ್ ಶೆಟ್ಟಿ ಒಡೆತನದ ಕೆರಾಡಿ ಸ್ಟುಡಿಯೋ ಪ್ರಮೋಷನ್ ಮಾಡಲಿದೆ.

‘ಗರಡಿ’ ಸಿನಿಮಾ ಪ್ರಮೋಷನ್​ಗೆ ಯೋಗರಾಜ್ ಭಟ್ ಪ್ರಕಟಿಸಿದರು ಹೊಸ ನ್ಯೂಸ್ ಪೇಪರ್
ಗರಡಿ ತಂಡ
Follow us
ರಾಜೇಶ್ ದುಗ್ಗುಮನೆ
|

Updated on:Oct 22, 2023 | 3:32 PM

ಯೋಗರಾಜ್ ಭಟ್ (Yogaraj Bhat) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಸಿನಿಮಾ ಪ್ರಮೋಷನ್​ಗೆ ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಈಗ ಅವರು ‘ಗರಡಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಬಾರಿ ಅವರು ಸಿನಿಮಾ ಪ್ರಮೋಷನ್​ಗೆ ಹೊಸ ಪ್ರಯತ್ನ ಮಾಡಿದ್ದಾರೆ. ‘ಭಟ್ರು ವಾಣಿ’ ಹೆಸರಿನ ಇ-ಪೇಪರ್ ರಿಲೀಸ್ ಮಾಡಿದ್ದಾರೆ! ಪೇಪರ್​ನಲ್ಲಿ ಸಿನಿಮಾ ಬಗ್ಗೆ ವಿವರ ಇದೆ.

‘ಗರಡಿ’ ಚಿತ್ರ ಬಿಸಿ ಪಾಟೀಲ್ ಬ್ಯಾನರ್ ಮೂಲಕ ಮೂಡಿ ಬರುತ್ತಿದೆ. ನವೆಂಬರ್ 10ರಂದು ಸಿನಿಮಾ ರಿಲೀಸ್ ಆಗಲಿದೆ. ನವೆಂಬರ್ 1ರಂದು ರಾಣಿಬೆನ್ನೂರಿನಲ್ಲಿ ದರ್ಶನ್ ಅವರು ಈ ಚಿತ್ರದ ಟ್ರೇಲರ್​ನ ರಿಲೀಸ್ ಮಾಡಲಿದ್ದಾರೆ. ಈ ಚಿತ್ರಕ್ಕೆ ರಿಷಬ್ ಶೆಟ್ಟಿ ಒಡೆತನದ ಕೆರಾಡಿ ಸ್ಟುಡಿಯೋ ಪ್ರಮೋಷನ್ ಮಾಡಲಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ‘ಭಟ್ರು ವಾಣಿ’ಯಲ್ಲಿ ಬರೆಯಲಾಗಿದೆ.

‘ಗರಡಿ’ ಸಿನಿಮಾದಲ್ಲಿ ಪೈಲ್ವಾನ್ ಓರ್ವನ ಬರ್ಬರ ಹತ್ಯೆ ನಡೆದಿರುತ್ತದೆ. ಈ ಪ್ರಕರಣ ಹೋದಂತೆ ಜಟಿಲ ಆಗುತ್ತದೆ. ಈ ಬಗ್ಗೆ ಪೇಪರ್​ನಲ್ಲಿ ಬರೆಯಲಾಗಿದೆ. ಸದ್ಯ ‘ಗರಡಿ’ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಈಗಾಗಲೇ ‘ಗರಡಿ’ ಸಿನಿಮಾದ ಹಾಡುಗಳು ಹಿಟ್ ಆಗಿವೆ. ‘ಹೊಡಿರೆಲೆ ಹಲಗಿ..’ ಹಾಡು ಸದ್ದು ಮಾಡಿದೆ. ಯೋಗರಾಜ್​ ಭಟ್​ ಅವರು ಇದಕ್ಕೆ ಸಾಹಿತ್ಯ ಬರೆದಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಹಾಡು ಮೂಡಿ ಬಂದಿದೆ. ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅವರು ಹಾಕಿದ ವಿಶೇಷವಾದ ಸೆಟ್​ಗಳಲ್ಲಿ ಇಡೀ ಹಾಡನ್ನು ಶೂಟ್ ಮಾಡಲಾಗಿದೆ. ಪೇಪರ್ ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ‘ಇಂಥ ಚಿತ್ರದ ಅವಶ್ಯಕತೆ ಬಹಳ ಇತ್ತು, ಸೂಕ್ತ ಸಮಯಕ್ಕೆ ಇದು ಬಂದಿದೆ’: ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಯೋಗರಾಜ್​ ಭಟ್​ ಹೊಗಳಿಕೆ

‘ಸೌಮ್ಯ ಫಿಲ್ಮ್ಸ್​’ ಮತ್ತು​ ‘ಕೌರವ ಪ್ರೊಡಕ್ಷನ್​ ಹೌಸ್​​’ ಅಡಿಯಲ್ಲಿ ‘ಗರಡಿ’ ಸಿನಿಮಾ ನಿರ್ಮಾಣ ಆಗಿದೆ. ಬಿಸಿ ಪಾಟೀಲ್​ ಅವರ ಪತ್ನಿ ವನಜಾ ಪಾಟೀಲ್​ ಈ ಸಿನಿಮಾ ನಿರ್ಮಿಸಿದ್ದಾರೆ. ಸೂರ್ಯ, ಸೋನಲ್ ಮಾಂಥೆರೋ, ಬಿಸಿ ಪಾಟೀಲ್, ಪೃಥ್ವಿ ಶಾಮನೂರು, ಧರ್ಮಣ್ಣ ಕಡೂರು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:31 pm, Sun, 22 October 23

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ