AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಉಪಾಧ್ಯಕ್ಷ’ ಟೀಸರ್ ಬಿಡುಗಡೆ: ಚುಚ್ಚುಮಾತಿನಿಂದ ನೋಯಿಸಿದ್ದಾರೆಂದ ಚಿಕ್ಕಣ್ಣ

Updadyaksha: ಚಿಕ್ಕಣ್ಣ ನಟನೆಯ 'ಉಪಾಧ್ಯಕ್ಷ' ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ದುನಿಯಾ ವಿಜಯ್, ಅಭಿಷೇಕ್ ಅಂಬರೀಶ್, ನೆನಪಿರಲಿ ಪ್ರೇಮ್ ಧನ್ವೀರ್, ಪ್ರಥಮ್ ಹಾಗೂ ನಟಿ ಅದಿತಿ ಪ್ರಭುದೇವ ಇನ್ನೂ ಹಲವರು ಟೀಸರ್ ಬಿಡುಗಡೆ ಮಾಡಿದರು.

‘ಉಪಾಧ್ಯಕ್ಷ’ ಟೀಸರ್ ಬಿಡುಗಡೆ: ಚುಚ್ಚುಮಾತಿನಿಂದ ನೋಯಿಸಿದ್ದಾರೆಂದ ಚಿಕ್ಕಣ್ಣ
ಚಿಕ್ಕಣ್ಣ
ಮಂಜುನಾಥ ಸಿ.
|

Updated on: Oct 22, 2023 | 7:20 PM

Share

ಶರಣ್ (Sharan) ಹಾಗೂ ಚಿಕ್ಕಣ್ಣ (Chikkanna) ನಟಿಸಿದ್ದ ‘ಅಧ್ಯಕ್ಷ’ ಸಿನಿಮಾ ಕನ್ನಡ ಚಿತ್ರರಂಗದ ಜನಪ್ರಿಯ ಕಾಮಿಡಿ ಸಿನಿಮಾಗಳಲ್ಲಿ ಒಂದು. ಈ ಸಿನಿಮಾದಲ್ಲಿ ಶರಣ್ ಹಾಗೂ ಚಿಕ್ಕಣ್ಣ ಅವರ ಅಧ್ಯಕ್ಷ-ಉಪಾಧ್ಯಕ್ಷ ಪಾತ್ರಗಳು ಸಖತ್ ಜನಪ್ರಿಯವಾಗಿದ್ದವು. ‘ಅಧ್ಯಕ್ಷ’ ಸಿನಿಮಾ ಈಗಾಗಲೇ ಬಂದಿದೆ, ಆದರೆ ಅದರಷ್ಟೆ ಫನ್ನಿ ಆಗಿದ್ದ ಉಪಾಧ್ಯಕ್ಷ ಪಾತ್ರಕ್ಕಾಗಿ ಪ್ರತ್ಯೇಕ ಸಿನಿಮಾ ಮಾಡುವ ಆಲೋಚನೆಯಲ್ಲಿ ಇದೀಗ ‘ಉಪಾಧ್ಯಕ್ಷ’ ಸಿನಿಮಾ ತಯಾರಾಗಿದೆ. ಚಿಕ್ಕಣ್ಣ ಅವರು ಉಪಾಧ್ಯಕ್ಷನಾಗಿ ನಟಿಸಿದ್ದಾರೆ.

“ಉಪಾಧ್ಯಕ್ಷ” ಸಿನಿಮಾದ ಟೀಸರ್ ಇದೀಗ ಬಿಡುಗಡೆ ಆಗಿದೆ. ಉಮಾಪತಿ ಫಿಲಂಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅನಿಲ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟೀಸರ್ ಅನ್ನು ಖ್ಯಾತ ನಟರಾದ ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ಅಭಿಷೇಕ್ ಅಂಬರೀಶ್, ಧನ್ವೀರ್, ಪ್ರಥಮ್ ಹಾಗೂ ನಟಿ ಅದಿತಿ ಪ್ರಭುದೇವ ಅವರುಗಳು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಚಿಕ್ಕಣ್ಣ ಹಾಗೂ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ನಿರ್ದೇಶಕರಾದ ಸೂರಿ, ಮಹೇಶ್ ಕುಮಾರ್, ನಟ ಗರುಡ ರಾಮ್, ಆನಂದ್ ಆಡಿಯೋ ಶ್ಯಾಮ್ ಇನ್ನೂ ಕೆಲವರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

”ನಾನು ಕೆಲಸದೊತ್ತಡದಿಂದ ಚಿತ್ರೀಕರಣ ಸ್ಥಳಕ್ಕೆ ಹೋಗುತ್ತಿರಲಿಲ್ಲ. ಚಿತ್ರತಂಡದವರೆ ಎಲ್ಲವನ್ನು ನೋಡಿಕೊಂಡಿದ್ದಾರೆ. ಇದು “ಅಧ್ಯಕ್ಷ” ಚಿತ್ರದ ಮುಂದುವರೆದ ಭಾಗ. ಚಂದ್ರ ಮೋಹನ್ ಕಥೆ ಬರೆದಿದ್ದಾರೆ. ಚಿತ್ರಕಥೆಗೆ ನಿರ್ದೇಶಕರಾದ ಸೂರಿ, ತರುಣ್ ಸುಧೀರ್ ಇನ್ನೂ ಕೆಲವರು ಸಹಾಯ ಮಾಡಿದ್ದಾರೆ. ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಚಿಕ್ಕಣ್ಣ ಈ ಚಿತ್ರದ ಮೂಲಕ ನಾಯಕರಾಗಿದ್ದಾರೆ. ಎರಡು ದಿನದ ಹಿಂದಷ್ಟೆ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನವೆಂಬರ್ ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಎಂದರು ನಿರ್ಮಾಪಕ ಉಮಾಪತಿ ಶ್ರೀನಿವಾಸ್.

ಇದನ್ನೂ ಓದಿ:Chikkanna: ‘ಉಪಾಧ್ಯಕ್ಷ’ ಶೂಟಿಂಗ್​ ಮುಕ್ತಾಯ: ಮಲೈಕಾ ಜತೆ ನಟಿಸಿದ ಅನುಭವ ಹಂಚಿಕೊಂಡ ನಟ ಚಿಕ್ಕಣ್ಣ

”ನಾನು ಹದಿಮೂರು ವರ್ಷದಿಂದ ನೋಡಿರದ ಕಷ್ಟವನ್ನು “ಉಪಾಧ್ಯಕ್ಷ” ಚಿತ್ರದ ನಾಯಕ ಆದ ಕ್ಷಣದಿಂದ ನೋಡಿದ್ದೇನೆ ಎಂದು ಮಾತು ಪ್ರಾರಂಭಿಸಿದ ಚಿಕ್ಕಣ್ಣ, ನಾನು ಈ ಚಿತ್ರದ ನಾಯಕ ಅಂದಕೂಡಲೆ ಸಾಕಷ್ಟು ಜನ ಸಾಕಷ್ಟು ಮಾತನಾಡಿ ಮನಸ್ಸು ನೋಯಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಆದರೆ ನಿರ್ಮಾಪಕ ಉಮಾಪತಿ ಅವರು ನನ್ನನ್ನು ಈ ಚಿತ್ರದ ಮೂಲಕ ನಾಯಕನನ್ನಾಗಿ ಮಾಡಿದ್ದಾರೆ. ಅಪಾರ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಟೀಸರ್ ಬಿಡುಗಡೆ ಮಾಡಕೊಟ್ಟ ಎಲ್ಲಾ ನಟರಿಗೂ ನನ್ನ ಧನ್ಯವಾದ ಎಂದರು ಚಿಕ್ಕಣ್ಣ.

ಇದು ಟೀಸರ್ ಬಿಡುಗಡೆ ಸಮಾರಂಭ. ನಾನು ಹೆಚ್ಚು ಹೇಳುವುದೇನಿಲ್ಲ. ನನ್ನ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನವೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಲಿದೆ. ಎಲ್ಲರ ಪ್ರೋತ್ಸಾಹವಿರಲಿ ಎಂದು ಸರಳವಾಗಿ ಮಾತು ಮುಗಿಸಿದರು ನಿರ್ದೇಶಕ ಅನಿಲ್ ಕುಮಾರ್. ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಾನು “ಉಪಾಧ್ಯಕ್ಷ” ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದೇನೆ ಎಂದ ನಾಯಕಿ ಮಲೈಕಾ, ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು. ಚಿತ್ರದಲ್ಲಿ ಅಭಿನಯಿಸಿರುವ ಅನೇಕ ಕಲಾವಿದರು ಹಾಗೂ ಕಾರ್ಯ ನಿರ್ವಹಿಸಿರುವ ತಂತ್ರಜ್ಞರು “ಉಪಾಧ್ಯಕ್ಷ” ಚಿತ್ರದ ಕುರಿತು ಮಾತನಾಡಿದರು.

ಸಿನಿಮಾ ಸುದ್ಇಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ