AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​

ಝಾಹಿರ್ ಯೂಸುಫ್
|

Updated on:Dec 14, 2025 | 1:58 PM

Share

Yashasvi Jaiswal Century: 15 ಓವರ್​ಗಳ ಮುಕ್ತಾಯದ ವೇಳೆಗೆ ಮುಂಬೈ ತಂಡದ ಸ್ಕೋರ್ 200 ರನ್​ಗಳ ಗಡಿದಾಟಿತು. ಇದರ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್ ಕೇವಲ 48 ಎಸೆತಗಳಲ್ಲಿ ಶತಕವನ್ನೂ ಸಹ ಪೂರೈಸಿದರು. ಸೆಂಚುರಿ ಬಳಿಕ ಎರಡು ಎಸೆತಗಳನ್ನು ಮಾತ್ರ ಎದುರಿಸಿದ ಜೈಸ್ವಾಲ್ 50 ಬಾಲ್​ಗಳಲ್ಲಿ 1 ಸಿಕ್ಸ್ ಹಾಗೂ 16 ಫೋರ್​ಗಳೊಂದಿಗೆ 101 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು.

ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಸೂಪರ್ ಲೀಗ್​ ಪಂದ್ಯದಲ್ಲಿ ಮುಂಬೈ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್. ಪುಣೆಯ ಡಿವೈ ಪಾಟೀಲ್ ಅಕಾಡೆಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಹರ್ಯಾಣ ಪರ ನಾಯಕ ಅಂಕಿತ್ ಕುಮಾರ್ 42 ಎಸೆತಗಳಲ್ಲಿ 89 ರನ್ ಬಾರಿಸಿದರು. ಇನ್ನು ನಿಶಾಂತ್ ಸಿಂಧು ಅಜೇಯ 63 ರನ್ ಸಿಡಿಸಿದರು. ಈ ಮೂಲಕ ಹರ್ಯಾಣ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 234 ರನ್​ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಮುಂಬೈ ತಂಡಕ್ಕೆ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ಒದಗಿಸಿದ್ದರು. ಕೇವಲ 23 ಎಸೆತಗಳಲ್ಲಿ ಶತಕ ಪೂರೈಸಿ ಹರ್ಯಾಣ ಬೌಲರ್​ಗಳ ಬೆಂಡೆತ್ತಿದರು. ಮತ್ತೊಂದೆಡೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ ಖಾನ್ ಕೇವಲ 25 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 64 ರನ್ ಚಚ್ಚಿದರು.

ಪರಿಣಾಮ 15 ಓವರ್​ಗಳ ಮುಕ್ತಾಯದ ವೇಳೆಗೆ ಮುಂಬೈ ತಂಡದ ಸ್ಕೋರ್ 200 ರನ್​ಗಳ ಗಡಿದಾಟಿತು. ಇದರ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್ ಕೇವಲ 48 ಎಸೆತಗಳಲ್ಲಿ ಶತಕವನ್ನೂ ಸಹ ಪೂರೈಸಿದರು. ಸೆಂಚುರಿ ಬಳಿಕ ಎರಡು ಎಸೆತಗಳನ್ನು ಮಾತ್ರ ಎದುರಿಸಿದ ಜೈಸ್ವಾಲ್ 50 ಬಾಲ್​ಗಳಲ್ಲಿ 1 ಸಿಕ್ಸ್ ಹಾಗೂ 16 ಫೋರ್​ಗಳೊಂದಿಗೆ 101 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು.

ಅಂತಿಮವಾಗಿ ಮುಂಬೈ ತಂಡವು 17.3 ಓವರ್​ಗಳಲ್ಲಿ 238 ರನ್ ಬಾರಿಸಿ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ವಿಶೇಷ ಎಂದರೆ ಇದು ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ 2ನೇ ಗರಿಷ್ಠ ಸ್ಕೋರ್​ ಚೇಸಿಂಗ್ ಆಗಿದೆ. ಜಾರ್ಖಂಡ್ ತಂಡವು 236 ರನ್​ಗಳನ್ನು ಚೇಸ್ ಮಾಡಿ ಗೆದ್ದಿರುವುದು ಶ್ರೇಷ್ಠ ದಾಖಲೆ. ಇದೀಗ 235 ರನ್​ಗಳನ್ನು ಬೆನ್ನತ್ತಿ ಗೆದ್ದು ಮುಂಬೈ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಅಲಂಕರಿಸಿದೆ.

ಮುಂಬೈ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಅಜಿಂಕ್ಯ ರಹಾನೆ , ಸರ್ಫರಾಝ್ ಖಾನ್ , ಅಂಗ್​ಕ್ರಿಶ್ ರಘುವಂಶಿ , ಅಥರ್ವ ಅಂಕೋಲೇಕರ್ , ತುಷಾರ್ ದೇಶಪಾಂಡೆ , ಹಾರ್ದಿಕ್ ತಮೋರೆ (ವಿಕೆಟ್ ಕೀಪರ್ ) ಸೂರ್ಯಾಂಶ್ ಶೆಡ್ಗೆ , ಸಾಯಿರಾಜ್ ಪಾಟೀಲ್ , ಶಾರ್ದೂಲ್ ಠಾಕೂರ್ (ನಾಯಕ) , ಶಮ್ಸ್ ಮುಲಾನಿ.

ಹರ್ಯಾಣ ಪ್ಲೇಯಿಂಗ್ 11: ಅರ್ಶ್ ರಂಗ , ಅಂಕಿತ್ ಕುಮಾರ್ (ನಾಯಕ) , ಯಶವರ್ಧನ್ ದಲಾಲ್ (ವಿಕೆಟ್ ಕೀಪರ್), ಪಾರ್ಥ್ ವ್ಯಾಟ್ಸ್ , ಆಶಿಶ್ ಸಿವಾಚ್ , ನಿಶಾಂತ್ ಸಿಂಧು , ಸಮಂತ್ ಜಖರ್ , ಸುಮಿತ್ ಕುಮಾರ್ , ಇಶಾಂತ್ ಭಾರದ್ವಾಜ್ , ಅನ್ಶುಲ್ ಕಂಬೋಜ್ , ಅಮಿತ್ ರಾಣ.

 

Published on: Dec 14, 2025 01:54 PM