ನಟ ಯಶ್​ ತಾಯಿ ಪುಷ್ಪಾರ ಜಾಗ ವಿವಾದಕ್ಕೆ ಹೊಸ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?

Edited By:

Updated on: Feb 02, 2026 | 3:46 PM

ನಟ ಯಶ್ ತಾಯಿ ಪುಷ್ಪಾ ಅವರ ನಿವೇಶನ ವಿವಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಾಸನದ ವಿದ್ಯಾನಗರದಲ್ಲಿ ಒಂದೇ ಜಾಗಕ್ಕೆ ಅಧಿಕಾರಿಗಳು ಇಬ್ಬರ ಹೆಸರಿಗೆ ದಾಖಲೆಗಳನ್ನು ಸೃಷ್ಟಿಸಿದ್ದಾರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಪುಷ್ಪಾ ಮತ್ತು ದೇವರಾಜ್ ಇಬ್ಬರ ಬಳಿಯೂ ಮಾಲೀಕತ್ವದ ದಾಖಲೆಗಳಿದ್ದು, ಅಧಿಕಾರಿಗಳ ಗೋಲ್ಮಾಲ್​ನಿಂದಾಗಿ ಈ ಗಲಾಟೆ ಸೃಷ್ಟಿಯಾಗಿರುವ ಅನುಮಾನ ಮೂಡಿದೆ.

ಹಾಸನ, ಫೆಬ್ಬರವರಿ 02: ಜಾಗದ ವಿಚಾರವಾಗಿ ನಟ ಯಶ್​​ ತಾಯಿ ಪುಷ್ಪಾ ಮತ್ತು ದೇವರಾಜ್​​ ನಡುವಿನ ಜಾಗದ ವಿವಾದ ವಿಚಾರಕ್ಕೆ ಹೊಸ ಟ್ವಿಸ್ಟ್​​ ಸಿಕ್ಕಿದೆ. ಒಂದೇ ನಿವೇಶನಕ್ಕೆ ಎರಡೆರಡು ಜನರಿಗೆ ಖಾತೆ, ಸರ್ವೆನಂಬರ್, ಇ ಸ್ವತ್ತು ನೀಡಿ ಅಧಿಕಾರಿಗಳು ಮಾಡಿರುವ ಗೋಲ್ಮಾಲ್​​ನಿಂದಲೇ ಈ ಗಲಾಟೆ ಸೃಷ್ಟಿಯಾಯ್ತಾ ಎನ್ನುವ ಪ್ರಶ್ನೆಯೀಗ ಉದ್ಭವಿಸಿದೆ. ಸೈಟ್ ತಮ್ಮದು ಎನ್ನುವ ಬಗ್ಗೆ ಪುಷ್ಪಾ ಅವರು 1982ರಿಂದ ಇರುವ ಸಂಪೂರ್ಣ ದಾಖಲೆ ತೋರಿಸ್ತಿದ್ದಾರೆ. ನಮ್ಮ ವಕೀಲರು ಎಲ್ಲವನ್ನೂ ನೋಡಿಯೇ ಜಾಗ ಖರೀದಿ ಮಾಡಿದ್ದಾರೆ. 1982ರಿಂದ ಸುಮಾರು 44 ವರ್ಷ ಕಾಣದಾಗಿದ್ದ ಲಕ್ಷ್ಮಮ್ಮ ದಿಢೀರ್​​ ಹೇಗೆ ಬಂದ್ರು ಎಂದು ಅವರು ಪ್ರಶ್ನಿಸಿದ್ದಾರೆ. ಈ ಸೈಟ್​​ನ 1982ರಲ್ಲಿ ಕೆಪಿ ಶ್ರೀಮತಿ ಖರೀದಿ ಮಾಡಿದ್ದು, ಅವರು ಸುಮಾರು 23 ವರ್ಷ ಇದರ ಮಾಲೀಕತ್ವ ಹೊಂದಿದ್ದರು. ನಂತರ 2007ರಲ್ಲಿ ಗಿರೀಶ್ ಕೋಂ ಮಹಲಿಂಗಪ್ಪ ಅವರು ಜಾಗ ಖರೀದಿ ಮಾಡಿದ್ದು, ಅವರು 2020ರ ವರೆಗೆ ಅಂದರೆ 13 ವರ್ಷ ಇದರ ಮಾಲಕರಾಗಿದ್ದರು. ನಂತರ 2020ರಿಂದ ಅಂದರೆ ಆರು ವರ್ಷದಿಂದ ನನ್ನ ಸ್ವಾಧೀನದಲ್ಲಿ ಸೈಟ್ ಇದೆ. ಈ ಹಿಂದೆ ಇಲ್ಲದ ವ್ಯಾಜ್ಯ ಈಗೇಕೆ?. ದೇವರಾಜ್​​ ಹೇಳುವಂತೆ ಇದು ಅವರ ಸೈಟ್​​ ಆಗಿದ್ದರೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿಯೇ ಮೋಸ ಆಗಿದ್ಯಾ ಇಲ್ಲವೇ ಗ್ರಾಮ ಪಂಚಾಯತ್​​ನಲ್ಲಿ ಎರಡೆರಡು ದಾಖಲೆ ಮಾಡಲಾಗಿದ್ಯಾ ಎಂದು ಪುಷ್ಪಾ ಪ್ರಶ್ನಿಸಿದ್ದಾರೆ. ಮತ್ತೊಂದೆಡೆ ದೇವರಾಜ್​​ ಕೂಡ ಜಾಗದ ದಾಖಲೆ ತೋರಿಸುತ್ತಿದ್ದು, 2020ರಲ್ಲಿ ಲಕ್ಷ್ಮಮ್ಮ ಅವರಿಂದ ಜಿಪಿಎ ಪಡೆದುಕೊಂಡಿರೋದಾಗಿ ಹೇಳುತ್ತಿರುವ ಕಾರಣ ಎಲ್ಲವೂ ಗೊಂದಲದ ಗೂಡಾಗಿ ಮಾರ್ಪಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 02, 2026 03:45 PM