‘ರಾಮಾಯಣ’ ಚಿತ್ರದ ಪೆನ್ಸಿಲ್ ಆರ್ಟ್: ಮಂಗಳೂರಿನ ಯುವ ಕಲಾವಿದ ಜೀವನ್ ಕುಲಾಲ್ ಕೈಚಳಕಕ್ಕೆ ಮೆಚ್ಚುಗೆ

Updated on: Aug 24, 2026 | 11:10 PM

ಯಶ್ ಅಭಿನಯದ 'ರಾಮಾಯಣ' ಸಿನಿಮಾದ ಸಿಂಹ ದೃಶ್ಯದ ಟ್ರೈಲರ್ ವೈರಲ್ ಆಗಿದೆ. ಮಂಗಳೂರಿನ ಸ್ವಯಂ ಕಲಿತ ಕಲಾವಿದ ಜೀವನ್ ಕುಲಾಲ್ ಅವರು ಈ ದೃಶ್ಯದಿಂದ ಸ್ಫೂರ್ತಿ ಪಡೆದು ಅದ್ಭುತ ಚಿತ್ರಕಲೆ ರಚಿಸಿದ್ದಾರೆ. ಔಪಚಾರಿಕ ತರಗತಿಗಳನ್ನು ತೆಗೆದುಕೊಳ್ಳದೆ, ಕೇವಲ ಸ್ವಪ್ರಯತ್ನದಿಂದ ಈ ಕಲಾ ಪ್ರತಿಭೆ ಬೆಳೆಸಿಕೊಂಡಿದ್ದಾರೆ. ಅವರ ಗ್ರಾಫೈಟ್ ಮತ್ತು ಚಾರ್ಕೋಲ್ ಪೆನ್ಸಿಲ್ ಮಿಶ್ರಣದ ಈ ಪೇಂಟಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಗಳಿಸಿದೆ.

ಮಂಗಳೂರು, ಆ.24; ಸಿನಿಮಾ ಲೋಕದಲ್ಲಿ ಭಾರೀ ಸದ್ದು ಮಾಡುತ್ತಿರುವ ಯಶ್ ಅಭಿನಯದ ರಾಮಾಯಣ ಸಿನಿಮಾ ಇದೀಗ ಎಲ್ಲೆಡೆ ಹವಾ ಸೃಷ್ಟಿ ಮಾಡಿದೆ. ಸಾಮಾಜಿಕ ಜಾಲತಾಣದಲ್ಲೂ ಕೂಡ ಸಖತ್​​ ವೈರಲ್​​ ಆಗುತ್ತಿದೆ. ಇದರ ಜತೆಗೆ ಯಶ್ ಅವರ ಮತ್ತೊಂದು ಸಿನಿಮಾ ಟಾಕ್ಸಿಕ್ ಕೂಡ ಬಿಡುಗಡೆಗೆ ಸಿದ್ದವಾಗಿದೆ. ಇದರ ನಡುವೆ ರಾಮಾಯಣದ ಸಿನಿಮಾ ಚಿತ್ರವೊಂದನ್ನು ಬಿಡಿಸಿ ಚಿತ್ರಕಲೆಗಾರಯೊಬ್ಬರು ಎಲ್ಲ ಮೆಚ್ಚುಗೆ ಪಡೆದಿದ್ದಾರೆ. ಇತ್ತೀಚೆಗೆ ರಾಮಾಯಣದ ಒಂದು ಟ್ರೇಲರ್ ಭಾರೀ ಸದ್ದು ಮಾಡಿದೆ. ಅದರಲ್ಲಿ ಯಶ್​ ಅವರ ಸಿಂಹದ ಜೊತೆಗೆ ಘರ್ಜಿಸುವ ಒಂದು ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಅದರದೇ ದೃಶ್ಯದ ಪೆನ್ಸಿಲ್ ಆರ್ಟ್ ಮಾಡಿದ್ದಾರೆ. ಇದನ್ನು ಮಾಡಿದ್ದು ಜೀವನ್ ಕುಲಾಲ್ ಎಂಬುವವರು, ಮಂಗಳೂರಿನ ಯುವಕ ಜೀವನ್ ಯಾವುದೇ ಔಪಚಾರಿಕ ಡ್ರಾಯಿಂಗ್ ತರಗತಿಗಳಿಗೆ ಹೋಗದೆ, ಕೇವಲ ಸ್ವಯಂ ಪರಿಶ್ರಮ ಮತ್ತು ಅಭ್ಯಾಸದಿಂದ ಕಲೆ ಒಲಿಸಿಕೊಂಡವರು. 2012ರಿಂದ ನಿರಂತರ ಅಭ್ಯಾಸದ ಮೂಲಕ ತಮ್ಮ ಕಲಾ ಪ್ರತಿಭೆಯನ್ನು ಒಲಿಸಿಕೊಂಡವರು. ‘ರಾಮಾಯಣ’ ಸಿನಿಮಾದ ಟ್ರೇಲರ್ ಆಧಾರಿತ ಭಾವಚಿತ್ರ ಮಾಡಿರುವ ಜೀವನ್​​ ಅವರು ಅತ್ಯುನ್ನತ ಗುಣಮಟ್ಟದ Brustro 200 GSM ಪೇಪರ್ ಬಳಸಿಕೊಂಡು ಗ್ರಾಫೈಟ್ ಮತ್ತು ಚಾರ್ಕೋಲ್ ಪೆನ್ಸಿಲ್‌ಗಳ ಸಮ್ಮಿಶ್ರಣದಿಂದ ತಯಾರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 24, 2026 11:07 PM
Loading...
Unable to load recommendations.
Follow Us