ಯತೀಂದ್ರ ಸಿದ್ದರಾಮಯ್ಯ ಉತ್ತಮ ಆಯ್ಕೆ ಅನಿಸುತ್ತಾರೆ, ಆದರೆ ಯಾರೇ ಸ್ಪರ್ಧಿಸಿದರೂ ಗೆಲುವಿಗೆ ಶ್ರಮಿಸುತ್ತೇವೆ: ತನ್ವೀರ್ ಸೇಟ್, ಶಾಸಕ
ಕೊಡಗಿನಲ್ಲಿ ಪ್ರಕೃತಿ ವಿಕೋಪ ಮತ್ತು ಕಾಫಿ ಬೆಳೆಗಾರರ ಸಮಸ್ಯೆಗಳಿವೆ, ಮೈಸೂರು ಭಾಗದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಕೂಡ ಆಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೈಕಮಾಂಡ್ ಟಿಕೆಟನ್ನು ಯಾರಿಗಾದರೂ ನೀಡಲಿ, ಅವರನ್ನು ಗೆಲ್ಲಿಸಲು ಸಜ್ಜಾಗಿದ್ದೇವೆ ಎಂದು ತನ್ವೀರ್ ಹೇಳಿದರು.
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ (Mysuru- Kodagu Constituency) ಪಕ್ಷದ ಅಬ್ಯರ್ಥಿ ಯಾರಾಗಬೇಕು ಅನ್ನೋದನ್ನು ಕೆಪಿಸಿಸಿ ಮತ್ತು ಎಐಸಿಸಿ ವರಿಷ್ಠರು ನಿರ್ಧರಿಸುತ್ತಾರೆ, ಅವರು ಟಿಕೆಟ್ ಯಾರಿಗಾದರೂ ನೀಡಲಿ ಅವರನ್ನು ಗೆಲ್ಲಿಸಲು ತಾವೆಲ್ಲ ಶ್ರಮಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಟ್ (Tanveer Sait) ಹೇಳಿದರು. ನಗರದಲ್ಲಿಂದು ಮಾಧ್ಯಮದ ಪ್ರತಿನಿಧಿಗಳು ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಸ್ಪರ್ಧಿಸಬಹುದೇ ಅಂತ ಕೇಳಿದಾಗ ಅವರಿಗೆ ಟಿಕೆಟ್ ನೀಡಿದರೆ ಉತ್ತಮ ಆಯ್ಕೆ ಅನಿಸಿಕೊಳ್ಳುತ್ತದೆ, ಆದರೆ ವರಿಷ್ಟರು ಬೇರೆಯವರಿಗೆ ಟಿಕೆಟ್ ನೀಡಿದರೂ ಅದೇ ಶ್ರದ್ಧೆಯಿಂದ ಕೆಲಸ ಮಾಡುವುದಾಗಿ ತನ್ವೀರ್ ಹೇಳಿದರು. ಈ ಕ್ಷೇತ್ರ ಕೊಡಗು ಮತ್ತು ಮೈಸೂರು-ಎರಡು ಜಿಲ್ಲೆಗಳನ್ನು ಪ್ರತಿನಿಧಿಸುವುದರಿಂದ ಜನನ ಕಷ್ಟಗಳನ್ನು ಅರ್ಥಮಾಡಿಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿ ಬೇಕಾಗಿದೆ. ಕೊಡಗಿನಲ್ಲಿ ಪ್ರಕೃತಿ ವಿಕೋಪ ಮತ್ತು ಕಾಫಿ ಬೆಳೆಗಾರರ ಸಮಸ್ಯೆಗಳಿವೆ, ಮೈಸೂರು ಭಾಗದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಕೂಡ ಆಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೈಕಮಾಂಡ್ ಟಿಕೆಟನ್ನು ಯಾರಿಗಾದರೂ ನೀಡಲಿ, ಅವರನ್ನು ಗೆಲ್ಲಿಸಲು ಸಜ್ಜಾಗಿದ್ದೇವೆ ಎಂದು ತನ್ವೀರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ