ಮುಂದಿನ ಚುನಾವಣೆಯಲ್ಲಿ ನನ್ನ ಆಯ್ಕೆಯ ಬಗ್ಗೆ ಕಾಮೆಂಟ್ ಮಾಡಲು ಯತ್ನಾಳ್ ಯಾರು? ವಿಜಯಾನಂದ ಕಾಶಪ್ಪನವರ್

ಅರುಣ್​ ಕುಮಾರ್​ ಬೆಳ್ಳಿ

Updated on: Jul 24, 2025 | 11:45 AM

ಯತ್ನಾಳ್ ಮತ್ತು ಪೂಜ್ಯರು ಸೇರಿದಂತೆ ಸಮಾಜದ ಮುಖಂಡರನ್ನು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಕರೆದೊಯ್ದಿದ್ದೇನೆ, ಅವರು 2ಎ ಮೀಸಲಾತಿ ನೀಡಲು ಇರುವ ತಾಂತ್ರಿಕ ಸಮಸ್ಯೆ ಮತ್ತು ಸುಪ್ರೀಂ ಕೋರ್ಟಲ್ಲಿರುವ ತಡೆಯಾಜ್ಞೆ ಬಗ್ಗೆ ಹೇಳಿದ್ದಾರೆ, ಯತ್ನಾಳ್ ತಡೆಯಾಜ್ಞೆ ತೆಗೆಸಲು ಯಾಕೆ ಪ್ರಯತ್ನಿಸುತ್ತಿಲ್ಲ ಎಂದು ಕಾಶಪ್ಪನವರ್ ಕೇಳಿದರು.

ಬಾಗಲಕೋಟೆ, ಜುಲೈ 24: ಹುನುಗಂದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ನಡುವೆ ಹೇಳಿಕೆಗಳ ಸಮರ ಮುಂದುವರಿದಿದೆ. ಯತ್ನಾಳ್ ತನ್ನ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಕಾಶಪ್ಪನವರ್ ಕೋಪಗೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ನನ್ನ ಬಗ್ಗೆ ಮಾತಾಡಲು ಯತ್ನಾಳ್ ಯಾರು? 2028 ಅಸೆಂಬ್ಲಿ ಚುನಾವಣೆಯಲ್ಲಿ ಜನ ನನ್ನ ಕೈ ಹಿಡಿಯುತ್ತಾರೋ ಬಿಡುತ್ತಾರೋ? ಅದು ಕ್ಷೇತ್ರದ ಜನ ಮತ್ತ ನನ್ನ ನಡುವಿನ ವಿಚಾರ ಎಂದು ಹೇಳಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸಲಿಲ್ಲ? ಎಂದು ಕೇಳಿದ ಕಾಶಪ್ಪನವರ್, ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ಧಾರ್ಮಿಕ ಮುಖಂಡರಾಗಿರುವುದರಿಂದ ಅವರ ಚಟುವಟಿಕೆಕಗಳು ಮಠಕ್ಕೆ ಮಾತ್ರ ಸೀಮಿತವಾಗಿರಲಿ ಎಂದರು.

ಇದನ್ನೂ ಓದಿ:  ಕಾಶಪ್ಪನವರ್ ಅಂತ್ಯ ಸಮೀಪಿಸಿದೆ, ವಿಭೂತಿ ಹೆಸರಲ್ಲಿ ಆಯಿಲ್ ಪೇಂಟ್ ಹಚ್ಚಿಕೊಳ್ಳುವ ಅವನೆಂಥ ಲಿಂಗಾಯತ? ಯತ್ನಾಳ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.