Loading video

ಯತ್ನಾಳ್ ಹಿಂದೂ ಹುಲಿಯಲ್ಲ, ಮುಖವಾಡ ಧರಿಸಿಕೊಂಡು ತಿರುಗಾಡುವ ಗೋಮುಖವ್ಯಾಘ್ರ: ರೇಣುಕಾಚಾರ್ಯ

|

Updated on: Nov 29, 2024 | 5:51 PM

ಹಿಂದೆ ಯತ್ನಾಳ್​ರನ್ನು ಪಕ್ಷದಿಂದ ಸಸ್ಪೆಂಡ್ ಮಾಡಿದ್ದಾಗ ಟಿಪ್ಪು ಸುಲ್ತಾನನ ಖಡ್ಗ ಹಿಡಿದು ತಿರುಗಾಡಿದ್ದರು ಮತ್ತು ಇಫ್ತಾರ್ ಕೂಟಗಳನ್ನು ಆಯೋಜಿಸಿದ್ದರು ಎಂದು ಹೇಳಿದ ರೇಣುಕಾಚಾರ್ಯ, ಬಾಯಿ ಮುಚ್ಚಿಕೊಂಡು ತೆಪ್ಪಗಿರುವಂತೆ ಯತ್ನಾಳ್ ಅವರನ್ನು ಎಚ್ಚರಿಸಿದರು. ಶಿಸ್ತಿನ ಪಕ್ಷ ಎನಿಸಿಕೊಂಡಿದ್ದ ಬಿಜೆಪಿಯಲ್ಲಿ ನಾಯಕರ ಜಗಳಗಳು ಬೀದಿಗೆ ಬರುತ್ತಿರೋದು ವಿಷಾದನೀಯ.

ಕೋಲಾರ: ಮುಳುಬಾಗಿಲು ಹತ್ತಿರದ ಕುರುಡುಮಲೈಯಲ್ಲಿರುವ ಗಣೇಶನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮತ್ತೊಂದು ಹಂತಕ್ಕೆ ಏರಿಸಿದರು. ಶಾಸಕನ ವಿರುದ್ಧ ಏಕವಚನದಲ್ಲಿ ದಾಳಿ ಮಾಡಿದ ರೇಣುಕಾಚಾರ್ಯ, ಅವರು ತಾವೇ ಘೋಷಿಸಿಕೊಂಡಿರುವಂತೆ ಹಿಂದೂ ಹುಲಿಯಲ್ಲ, ಮುಖವಾಡ ಧರಸಿಕೊಂಡು ತಿರುಗಾಡುತ್ತಿರುವ ಗೋಮುಖ ವ್ಯಾಘ್ರ, ಅವರು ತನ್ನ ವಿರುದ್ದ ಬಳಸುವ ಭಾಷೆಗಿಂತ ಹರಿತಬಾದ ಭಾಷೆ ಬಳಸುವುದು ತನಗೆ ಗೊತ್ತು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೇಂದ್ರ ಸಚಿವರು ವಕ್ಫ್ ಹೋರಾಟದಲ್ಲಿ ಭಾಗವಹಿಸಿದ್ದು ಪರ್ಯಾಯ ನಾಯಕತ್ವ ಸೃಷ್ಟಿಸಲಲ್ಲ: ರೇಣುಕಾಚಾರ್ಯ