AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yatnal: ಸಿದ್ದು ಭಾಷಣವನ್ನ ಅಣಕಿಸಿ ಕೈ ನಾಯಕರನ್ನ ಕೆಣಕಿದ ಯತ್ನಾಳ್; ಇಲ್ಲಿದೆ ನೋಡಿ ವಿಡಿಯೋ

Yatnal: ಸಿದ್ದು ಭಾಷಣವನ್ನ ಅಣಕಿಸಿ ಕೈ ನಾಯಕರನ್ನ ಕೆಣಕಿದ ಯತ್ನಾಳ್; ಇಲ್ಲಿದೆ ನೋಡಿ ವಿಡಿಯೋ

ಪ್ರಸನ್ನ ಗಾಂವ್ಕರ್​
| Edited By: ಕಿರಣ್ ಹನುಮಂತ್​ ಮಾದಾರ್|

Updated on:Jul 13, 2023 | 1:03 PM

Share

ಸದನದಲ್ಲಿ ಬೆಳಗ್ಗೆಯಿಂದ ವಾಕ್ಸಮರ ಶುರುವಾಗಿದ್ದು, ಸಿದ್ದು ಭಾಷಣವನ್ನ ಅಣಕಿಸಿದ ಯತ್ನಾಳ್ ಕೈ ನಾಯಕರನ್ನ ಕೆಣಕಿದರು. ಜು.1ರಿಂದ ಯಾರು ವಿದ್ಯುತ್​ ಬಿಲ್​ ಕಟ್ಟಂಗಿಯಿಲ್ಲ ಎನ್ನುವ ಸಿಎಂ ಸಿದ್ದರಾಮಯ್ಯನವರ ಭಾಷಣವನ್ನ ಅಣುಕಿಸುವ ಮೂಲಕ ಕೈ ನಾಯಕರಿಗೆ ಕೆಣಕಿದ್ದಾರೆ.

ಬೆಂಗಳೂರು: ಸದನದಲ್ಲಿ ಬೆಳಗ್ಗೆಯಿಂದ ವಾಕ್ಸಮರ ಶುರುವಾಗಿದ್ದು, ಸಿದ್ದು ಭಾಷಣವನ್ನ ಅಣಕಿಸಿದ ಯತ್ನಾಳ್(Yatnal)ಕೈ ನಾಯಕರನ್ನ ಕೆಣಕಿದರು. ಜು.1ರಿಂದ ಯಾರು ವಿದ್ಯುತ್​ ಬಿಲ್​ ಕಟ್ಟಂಗಿಯಿಲ್ಲ ಎನ್ನುವ ಸಿಎಂ ಸಿದ್ದರಾಮಯ್ಯ(Siddaramaiah)ನವರ ಭಾಷಣವನ್ನ ಅಣುಕಿಸುವ ಮೂಲಕ ಕೈ ನಾಯಕರಿಗೆ ಕೆಣಕಿದ್ದಾರೆ. ಈ ವೇಳೆ ಮೋದಿ ಪ್ರತಿಯೊಬ್ಬರಿಗೂ 15 ಲಕ್ಷ ಹಾಕ್ತೀನಿ ಅಂತಾ ಹೇಳಿದ್ದರು, ಬ್ಯಾಂಕ್​ ಖಾತೆ ಮಾಡಿಸಿದರು, ಎಲ್ಲಿ ಹಣ ಹಾಕಿದರು ಎಂದು ಕಾಂಗ್ರೆಸ್​ ಶಾಸಕ ಎನ್​.ಹೆಚ್​​​ಕೋನರೆಡ್ಡಿ ಪ್ರಶ್ನಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 13, 2023 01:03 PM

Follow Us
Prasanna Gaonkar
Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More