ಹುಬ್ಬಳ್ಳಿ: ಯಡಿಯೂರಪ್ಪ ಜೊತೆ ನಡೆಸಿದ್ದು ಉಭಯಕುಶಲೋಪರಿ ಮಾತ್ರ ಎಂದರು ಸಿದ್ದರಾಮಯ್ಯ

ಹುಬ್ಬಳ್ಳಿ: ಯಡಿಯೂರಪ್ಪ ಜೊತೆ ನಡೆಸಿದ್ದು ಉಭಯಕುಶಲೋಪರಿ ಮಾತ್ರ ಎಂದರು ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 07, 2022 | 1:28 PM

ಮಾಧ್ಯಮದವರು ಸಿದ್ದರಾಮಯ್ಯನವರಿಗೆ ಯಾವ ವಿಷಯ ಚರ್ಚೆ ಮಾಡಿದಿರಿ ಸರ್ ಅಂತ ಕೇಳಿದಾಗ, ಕೇವಲ ಉಭಯಕುಶಲೋಪರಿ, ರಾಜಕೀಯದ ಬಗ್ಗೆ ಏನನ್ನೂ ಮಾತಾಡಲಿಲ್ಲ, ಅಂತ ಖಡಾಖಂಡಿತವಾಗಿ ಹೇಳಿದರು.

Hubballi: ಮಾಜಿ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ (Siddaramaiah) ಮತ್ತು ಬಿ ಎಸ್ ಯಡಿಯೂರಪ್ಪನವರ (BS Yediyurappa) ನಡುವೆ ಎಷ್ಟೇ ರಾಜಕೀಯ ವೈಷಮ್ಯವಿದ್ದರೂ (political rivalry) ಅವರ ನಡುವೆ ಉತ್ತಮ ಸ್ನೇಹವಿದೆ. ಈ ಅಂಶ ಪದೇಪದೆ ಸಾಬೀತಾಗುತ್ತಿದೆ. ಮಂಗಳವಾರ ಬೆಳಗ್ಗೆ ರಾಜ್ಯದ ಇಬ್ಬರು ಧೀಮಂತ ನಾಯಕರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಾರೆ. ಮಾಧ್ಯಮದವರು ಸಿದ್ದರಾಮಯ್ಯನವರಿಗೆ ಯಾವ ವಿಷಯ ಚರ್ಚೆ ಮಾಡಿದಿರಿ ಸರ್ ಅಂತ ಕೇಳಿದಾಗ, ಕೇವಲ ಉಭಯಕುಶಲೋಪರಿ, ರಾಜಕೀಯದ ಬಗ್ಗೆ ಏನನ್ನೂ ಮಾತಾಡಲಿಲ್ಲ, ಅಂತ ಖಡಾಖಂಡಿತವಾಗಿ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.