ರಮೇಶ್ ಜಾರಕಿಹೊಳಿ ಬಿಜೆಪಿಗೆ ಬರದಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದರೆ ? ಯತ್ನಾಳ್

|

Updated on: Jan 18, 2025 | 3:12 PM

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಲು ಯಡಿಯೂರಪ್ಪ ಮಾತ್ರ ಶ್ರಮ ಪಟ್ಟಿಲ್ಲ, ಜಗನ್ನಾಥ್ ಜೋಶಿ, ಬಸವರಾಜ ಪಾಟೀಲ್ ಸೇಡಂ, ಅನಂತಕುಮಾರ್ ಮತ್ತು ಈಶ್ವರಪ್ಪ ಮೊದಲಾದವರೆಲ್ಲ ಜೀವ ಸವೆಸಿದ್ದಾರೆ, ಸಂಘಟನೆಗೆ ಅನಂತಕುಮಾರ್ ಯೋಜನಾಬದ್ಧವಾಗಿ ಕೆಲಸ ಮಾಡಿದ್ದಾರೆ, ಯಡಿಯೂರಪ್ಪ ಸೈಕಲ್ ತುಳಿಯುತ್ತ ಸುತ್ತಾಡಿದ್ದಾರೆ ಅಂತ ಹೇಳೋದನ್ನು ವಿಜಯೇಂದ್ರ ನಿಲ್ಲಿಸಲಿ ಎಂದ ಯತ್ನಾಳ್ ಹೇಳಿದರು.

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ರಮೇಶ್ ಜಾರಕಿಹೊಳಿ ವಿಷಯದಲ್ಲಿ ಮಾತಾಡಿದ್ದು ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಕೆಂಡಾಮಂಡಲವಾಗಿಸಿದೆ. ಅವರು 17 ಜನ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಜೊತೆ ಬಿಜೆಪಿಗೆ ಬರದೇ ಹೋಗಿದ್ದರೆ ವಿಜಯೇಂದ್ರರ ಪೂಜ್ಯ ಅಪ್ಪಾಜಿ ಮುಖ್ಯಮಂತ್ರಿಯಾಗುವುದು ಸಾಧ್ಯವಾಗುತ್ತಿತ್ತೇ? ವಿಜಯೇಂದ್ರ ಗೆ ದುಡ್ಡು ಬಾಚಿಕೊಳ್ಳುವುದು ಸಾಧ್ಯವಾಗುತಿತ್ತೇ? ವಿಜಯೇಂದ್ರ ಎಷ್ಟು ದುಡ್ಡು ಮಾಡಿಕೊಂಡಿದ್ದಾರೆ ಅಂತ ಜಗತ್ತಿಗೆ ಗೊತ್ತಿದೆ, ಚೆನ್ನಾಗಿ ಕೆಲಸ ಮಾಡುತ್ತಿದ್ದ ರಮೇಶ್ ಜಾರಕಿಹೊಳಿಯನ್ನು ಮೂಲೆಗುಂಪು ಮಾಡೋದ್ರಲ್ಲಿ ವಿಜಯೇಂದ್ರ ಪಾತ್ರವೇನು ಅಂತ ತನಗೆ ಚೆನ್ನಾಗಿ ಗೊತ್ತಿದೆ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಯಡಿಯೂರಪ್ಪರನ್ನು ಸಿಎಂ ಅಭ್ಯರ್ಥಿಯಾಗಿ ಪ್ರೊಜೆಕ್ಟ್ ಮಾಡಿದ್ದೇ ನಾನು: ಬಸನಗೌಡ ಪಾಟೀಲ್ ಯತ್ನಾಳ್