ದ್ವೇಷ ಬಿಟ್ಟು ಭ್ರಾತೃತ್ವ ಪ್ರದರ್ಶಿಸಿರಿ ಅಂತ ಹೇಳಿ ಬಿಎಸ್ವೈ ತಾವು ಸೆಕ್ಯುಲರ್ ಅಂತ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ: ಜಮೀರ್ ಅಹ್ಮದ್
ಯಡಿಯೂರಪ್ಪನವರನ್ನು ಎ ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ ಎಂದು ಬಣ್ಣಿಸಿದ ಜಮೀರ್, 2008 ಮತ್ತು 2019 ರಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಒಂದೇ ಒಂದು ಕೋಮು ಗಲಭೆ ಸಂಭವಿಸಿರಲಿಲ್ಲ, ಈಗ ಯಾಕೆ ಹಿಂದೂ-ಮುಸ್ಲಿಂ ಅಂತ ಇಷ್ಟೆಲ್ಲ ದೊಂಬಿ, ಗಲಾಟೆ ಯಾಕೆ ನಡೆಯುತ್ತಿವೆ ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು
ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed) ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ (BS Yediyurappa) ಬಗ್ಗೆ ಭಾರಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಿಂದೂ-ಮುಸ್ಲಿಂ-ಸಿಖ್-ಕ್ರಿಶ್ಚಿಯನ್ ಎಲ್ಲ ಧರ್ಮದವರು ಅನ್ಯೋನತೆ ಮತ್ತು ಸೌಹಾರ್ದತೆಯಿಂದ (harmony) ಬಾಳಬೇಕು ಅಂತ ಅವರು ಹೇಳಿದ್ದು ನನಗೆ ತುಂಬಾ ಸಂತೋಷ ನೀಡಿದೆ. ಈಗ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅವರು ಆಡಿರುವ ಮಾತು ಅತ್ಯಂತ ಪ್ರಸ್ತುತವಾಗಿದೆ, ಇದು ಬೇಕಿತ್ತು ಮತ್ತು ಈ ಹೇಳಿಕೆ ನೀಡುವ ಮೂಲಕ ಯಡಿಯೂರಪ್ಪನವರು ತಾವು ಸೆಕ್ಯುಲರ್ ಮನೋಭಾವದವರು ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎಂದು ಜಮೀರ್ ಹೇಳಿದರು. ಅಸಲಿಗೆ, ಬಿಎಸ್ವೈ ಅವರಲ್ಲಿಗೆ ಹೋಗಿ ಹುಗುಚ್ಛ ನೀಡಿ ಧನ್ಯವಾದ ಹೇಳಬೇಕು ಅಂತ ಕಾಂಗ್ರೆಸ್ ಶಾಸಕ ಅಂದುಕೊಂಡಿದ್ದರಂತೆ. ಅದರೆ ಮಾಜಿ ಮುಖ್ಯಮಂತ್ರಿಗಳು ಬೆಳಗಾವಿಯಿಂದ ನೇರವಾಗಿ ಶಿಕಾರಿಪುರಕ್ಕೆ ಹೋದಕಾರಣ ಭೇಟಿಯಾಗುವುದು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಯಡಿಯೂರಪ್ಪನವರನ್ನು ಎ ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ ಎಂದು ಬಣ್ಣಿಸಿದ ಜಮೀರ್, 2008 ಮತ್ತು 2019 ರಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಒಂದೇ ಒಂದು ಕೋಮು ಗಲಭೆ ಸಂಭವಿಸಿರಲಿಲ್ಲ, ಈಗ ಯಾಕೆ ಹಿಂದೂ-ಮುಸ್ಲಿಂ ಅಂತ ಇಷ್ಟೆಲ್ಲ ದೊಂಬಿ, ಗಲಾಟೆ ಯಾಕೆ ನಡೆಯುತ್ತಿವೆ ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು. ಯಡಿಯೂರಪ್ಪನವರು ಆಡುವ ಮಾತು ಹೃದಯಾಂತರಾಳದಿಂದ ಬರುತ್ತದೆ. ಹೆಚ್ ಡಿ ಕುಮಾರಸ್ವಾಮಿ ಅವರದ್ದು ಬರೀ ತೋರಿಕೆಯ ಮಾತು, ಅವರ ಮಾತು ಹೃದಯಪೂರ್ವಕವಾಗಿ ಬರೋದಿಲ್ಲ ಎಂದು ಜಮೀರ್ ಹೇಳಿದರು.
ನಮಗೆ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರಂಥ ಸೆಕ್ಯುಲರ್ ನಾಯಕರು ಬೇಕಾಗಿದ್ದಾರೆ ಅಂತ ಜಮೀರ್ ಹೇಳಿದರು.
ಇದನ್ನೂ ಓದಿ: ಕೆಲ ಹಿಂದೂ ಸಂಘಟನೆಗಳು ಮುಸಲ್ಮಾನನ್ನು ಕೆರಳಿಸುವ ಪ್ರಯತ್ನ ಮಾಡುತ್ತಿವೆ, ನಾವು ಸಂಯಮದಿಂದ ವರ್ತಿಸಬೇಕು: ಜಮೀರ್ ಅಹ್ಮದ್